ಸ್ವಾವಲಂಬಿ ಬದುಕಿಗೆ ಸಂವಿಧಾನ ಸಹಕಾರಿ: ಶಾಸಕ ಎ .ಆರ್. ಕೃಷ್ಣಮೂರ್ತಿ

| Published : Apr 28 2025, 11:47 PM IST

ಸ್ವಾವಲಂಬಿ ಬದುಕಿಗೆ ಸಂವಿಧಾನ ಸಹಕಾರಿ: ಶಾಸಕ ಎ .ಆರ್. ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾವಲಂಬಿ ಬದುಕು ನಡೆಸಲು ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಸಹಕಾರಿಯಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸ್ವಾವಲಂಬಿ ಬದುಕು ನಡೆಸಲು ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಸಹಕಾರಿಯಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಅವರು ಹೊಸ ಅಣಗಳ್ಳಿ ಬಡಾವಣೆಯ ವಿಶ್ವರತ್ನ ಡಾ.ಬಿ.ಆರ್. ಅಂಬೇಡ್ಕರ್ ಸಂಘ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಬಾಬಾ ಸಾಹೇಬರು ಒಂದೇ ಸಮಾಜದ ಬೆಳವಣಿಗೆಗಾಗಿ ಸಂವಿಧಾನ ರಚಿಸಿಲ್ಲ, ಅವರು ರಚಿಸಿದ ಸಂವಿಧಾನ ಎಲ್ಲಾ ವರ್ಗಗಳ ಬದುಕಿಗೂ ಸಮಾನ ಅವಕಾಶ ಕಲ್ಪಿಸಿದೆ ಎಂದರು.ಸಂವಿಧಾನ ಎಂಬುದು ಪವಿತ್ರ ಗ್ರಂಥ, ಹಾಗಾಗಿಯೇ ಬಾಬಾ ಸಾಹೇಬರು ವಿಶ್ವ ನೆನೆಯುವ ಉನ್ನತ ನಾಯಕರಾಗಿದ್ದಾರೆ. ಅವರ ಜಯಂತಿ ಆಚರಣೆ ವೇಳೆ ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯೋಣ ಎಂದರಲ್ಲದೆ, ಸಮಾಜದ ಬಂಧುಗಳು ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಮೂಲಕ ಅಂಬೇಡ್ಕರ್ ಅವರ ಆಶಯ ಈಡೇರಿಸಿ ಎಂದರು.ಈ ವೇಳೆ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸಮಾರಂಭದಲ್ಲಿ ತಹಸೀಲ್ದಾರ್ ಬಸವರಾಜು, ನಗರಸಭೆ ಅಧ್ಯಕ್ಷ ರೇಖಾ, ರಮೇಶ್, ಸದಸ್ಯೆ ಕವಿತಾ, ಬೆಂಗಳೂರು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿವೃತ್ತ ನಿರ್ದೇಶಕ ಎಂ.ಮಾದೇಶ್, ಪೊಲೀಸ್ ಇಲಾಖೆಯ ನಿವೃತ್ತ ನೌಕರ ಮುತ್ತುರಾಯ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ತೋಟೇಶ್, ಹೊಸ ಅಣಗಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ನಂಜುಂಡಮೂರ್ತಿ, ಸಹಕಾರ್ಯದರ್ಶಿ ಕೀರ್ತಿರಾಜ್, ಸಂಘಟನಾ ಕಾರ್ಯದರ್ಶಿ ಜೋಗಪ್ಪ, ಖಜಾಂಚಿ ಬಂಗಾರಪ್ಪ, ಯಜಮಾನರಾದ ಮಹದೇವ, ಶಿವಣ್ಣ, ರಾಚಯ್ಯ, ಚಿಕ್ಕಣ್ಣ, ನಾರಾಯಣಮೂರ್ತಿ ಇನ್ನಿತರರಿದ್ದರು.