ಭಾರತದ ಸಂವಿಧಾನವು ನೆಲದ ಎಲ್ಲ ಜನ ಸಮುದಾಯಗಳ ಹಿತವನ್ನು ಕಾಪಾಡುವ ಶ್ರೇಷ್ಠ ಗ್ರಂಥವಾಗಿದೆ

ಬಳ್ಳಾರಿ: ಭಾರತದ ಸಂವಿಧಾನವು ನೆಲದ ಎಲ್ಲ ಜನ ಸಮುದಾಯಗಳ ಹಿತವನ್ನು ಕಾಪಾಡುವ ಶ್ರೇಷ್ಠ ಗ್ರಂಥವಾಗಿದೆ ಎಂದು ಸರಳಾದೇವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸವರಾಜ್ ಅಭಿಪ್ರಾಯಪಟ್ಟರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸಾಂಸ್ಕೃತಿಕ ಸಮಿತಿಯಿಂದ ಆಯೋಜಿಸಿದ್ದ ‘ ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನವು ಸ್ವಾತಂತ್ರ, ನ್ಯಾಯ, ಭ್ರಾತೃತ್ವ ಹಾಗೂ ಸಮಾನತೆಯ ಅಂಶಗಳನ್ನು ಒಳಗೊಂಡಿದೆ. ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುವುದರ ಮೂಲಕ ಎಲ್ಲ ಸಮುದಾಯಗಳ ಬದುಕನ್ನು ಉನ್ನತ ಮಟ್ಟಕ್ಕೆ ಏರಿಸುವ ಪ್ರಧಾನ ಆಶಯವನ್ನು ಹೊಂದಿದೆ ಎಂದು ತಿಳಿಸಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಇಸ್ಮಾಯಿಲ್ ಮಕಾಂದಾರ ಮಾತನಾಡಿ, ಸಂವಿಧಾನವು ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಅದನ್ನು ರಕ್ಷಿಸುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ದಸ್ತಗೀರಸಾಬ್ ದಿನ್ನಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ವಿಚಾರಗಳನ್ನು ನಿರಾಕರಿಸುವ ಪ್ರಕ್ಷುಬ್ಧ ಕಾಲಘಟ್ಟದಲ್ಲಿ ಬದುಕುತ್ತಿರುವುದು ಕಳವಳಕಾರಿಯಾದ ಸಂಗತಿ. ಎಲ್ಲ ಸಮಾಜ ಸುಧಾರಕರನ್ನು ಗೌರವಿಸುತ್ತಲೇ ಅವರ ವಿಚಾರಗಳನ್ನು ಅನುಸರಿಸುವುದು ಉಚಿತವಾದುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಮೋನಿಕಾ ರಂಜನ್ ವಹಿಸಿದ್ದರು.

ವೇದಿಕೆಯ ಮೇಲೆ ಪ್ರಾಧ್ಯಾಪಕರಾದ ಸಬಿಹಾ, ನಾಜಿಯಾ ಖಾಜಿ, ಜ್ಯೋತಿ ಅಣ್ಣರಾವ್, ಗಾಯತ್ರಿ,ಸುಮಾ, ರೇಖಾ ಇದ್ದರು.

ಸಹಾಯಕ ಪ್ರಾಧ್ಯಾಪಕರಾದ ರಾಮಸ್ವಾಮಿ , ಪ್ರವೀಣ್ ಕುಮಾರ್,ಕೆ.ಬಸಪ್ಪ , ಅತಿಥಿ ಉಪನ್ಯಾಸಕರಾದ ರಫಿ, ಶೇಷಣ್ಣ, ತಿಪ್ಪೇಸ್ವಾಮಿ, ಗುರುರಾಜ, ಶ್ರೀನಿವಾಸ, ರುದ್ರಮ್ಮ ಡಾ.ಸುಜಾತ, ಗಾಯತ್ರಿ ಹೇಮೇಗೌಡ, ಸುಖದೇವ್ ಉಪಸ್ಥಿತರಿದ್ದರು.