ಸಂವಿಧಾನ ಅಂಬೇಡ್ಕರ್‌ ರೂಪದಲ್ಲಿ ದೇವರು ನಮಗೆ ನೀಡಿದ ವರ-ರೇಖಾ ಕಟ್ಟಿಮನಿ

| Published : Apr 18 2024, 02:16 AM IST

ಸಂವಿಧಾನ ಅಂಬೇಡ್ಕರ್‌ ರೂಪದಲ್ಲಿ ದೇವರು ನಮಗೆ ನೀಡಿದ ವರ-ರೇಖಾ ಕಟ್ಟಿಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಎಂಬುದು ಪ್ರತಿಯೊಬ್ಬರಿಗೂ ಬಾಬಾ ಸಾಹೇಬ ಅಂಬೇಡ್ಕರ ಅವರ ರೂಪದಲ್ಲಿ ದೇವರು ನಮಗೆ ನೀಡಿದ ವರವಾಗಿದೆ ಎಂದು ಹಿರೇಕಣಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಖಾ ಕಟ್ಟಿಮನಿ ಹೇಳಿದರು.

ಹಾನಗಲ್ಲ: ಸಂವಿಧಾನ ಎಂಬುದು ಪ್ರತಿಯೊಬ್ಬರಿಗೂ ಬಾಬಾ ಸಾಹೇಬ ಅಂಬೇಡ್ಕರ ಅವರ ರೂಪದಲ್ಲಿ ದೇವರು ನಮಗೆ ನೀಡಿದ ವರವಾಗಿದೆ ಎಂದು ಹಿರೇಕಣಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಖಾ ಕಟ್ಟಿಮನಿ ಹೇಳಿದರು.

ತಾಲೂಕಿನ ಬೀದರಕೊಪ್ಪ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಡಾ. ಬಿ.ಆರ್ ಅಂಬೇಡ್ಕರವರ 133ನೇ ಜಯಂತಿ ಪ್ರಯುಕ್ತ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂವಿಧಾನದ ಮೂಲಕ ನಾವು ಕಾನೂನಾತ್ಮಕವಾಗಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದರ ಜೊತೆಗೆ ನಮ್ಮ ಮುಂದಿನ ಪೀಳಿಗೆಯವರಿಗೆ ಸಂವಿಧಾನದ ಮಹತ್ವ ತಿಳಿಸುವುದು ಬಹು ಮುಖ್ಯವಾಗಿದೆ. ಆದ್ದರಿಂದ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಇಂದಿನ ದಿವಸ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರವರ ಜಯಂತಿಯ ಆಚರಣೆ ದೀಪಾವಳಿ, ದಸರಾ ಹಬ್ಬಗಳು ಆಗುವಂತೆ ದೊಡ್ಡ ಮಟ್ಟದಲ್ಲಿ ಪ್ರತಿ ಮನೆ ಮನಗಳಲ್ಲಿ ಆಚರಣೆ ಆಗಬೇಕು ಅಂದಾಗ ಮಾತ್ರ ಅಂಬೇಡ್ಕರವರು ಬರೆದಿರುವ ಸಂವಿಧಾನಕ್ಕೆ ಇನ್ನು ಹೆಚ್ಚು ಗೌರವ ಸಿಗುವಂತಾಗುತ್ತದೆ. ಇಂದಿನ ದಿವಸ ಬೀದಿರುಕೊಪ್ಪ ಗ್ರಾಮದ ಎಲ್ಲ ಜನರು ಜಯಂತಿಯ ಪ್ರಯುಕ್ತ ಹೊಸ ಬಟ್ಟೆಗಳನ್ನು ತೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಮ್ಮಸಿನಿಂದ ಬಂದಿರುವುದನ್ನು ನೋಡಿದರೆ ಬಹಳ ಸಂತೋಷವಾಗುತ್ತದೆ ಎಂದು ಹೇಳಿದ ಅವರು ನಮ್ಮ ಮಕ್ಕಳಿಗೆ ನಾವು ಕಲಿಸುವ ಸಂಸ್ಕಾರ ಎಷ್ಟು ಮುಖ್ಯವಾಗಿದೆಯೋ ಅಷ್ಟೇ ಮುಖ್ಯವಾಗಿ ನಾವು ಮಕ್ಕಳಿಗೆ ಅಂಬೇಡ್ಕರವರ ತತ್ವ ಸಿದ್ಧಾಂತಗಳು ಮತ್ತು ಸಂವಿಧಾನದ ಆಶಯಗಳ ಬಗ್ಗೆ ಹೇಳಿ ಕೊಡುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಪ್ರತಿ ಗ್ರಾಮಗಳಲ್ಲಿ ಈ ಜಯಂತಿಯನ್ನು ಜಾತ್ರೆಯಂತೆ ಆಚರಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಕಾಳೇರ, ಬೆಂಗಳೂರಿನ ಹೋಮ ಕೇರ ಫೌಂಡೇಶನ್ ಪದಾಧಿಕಾರಿಗಳು, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಗ್ರಾಮಸ್ಥರು ಹಾಗೂ ಸಂಘಗಳ ಸದಸ್ಯರು ಭಾಗವಹಿಸಿದ್ದರು.