ಸಾರಾಂಶ
ಮಹಾಲಿಂಗಪುರ: ಭಾರತ ಸಂವಿಧಾನ ಅಂಗಿಕಾರಗೊಂಡು 75ನೇ ವರ್ಷಾಚರಣೆ ಅಂಗವಾಗಿ ರಾಜ್ಯಾದಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಮಹಾಲಿಂಗಪುರಕ್ಕೆ ಆಗಮಿಸಿದಾಗ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಭಾರತ ಸಂವಿಧಾನ ಅಂಗಿಕಾರಗೊಂಡು 75ನೇ ವರ್ಷಾಚರಣೆ ಅಂಗವಾಗಿ ರಾಜ್ಯಾದಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥವು ಮಹಾಲಿಂಗಪುರಕ್ಕೆ ಆಗಮಿಸಿದಾಗ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.ಶಾಲಾ ಮಕ್ಕಳ ವಿವಿಧ ಬಗೆಯ ವೇಷ ಭೂಷಣಗಳು ಜಾಥಾ ಮೆರವಣಿಗೆಗೆ ಮೆರುಗು ತಂದವು. ವಿವಿಧ ಸಂಘಟನೆಗಳ ಪ್ರಮುಖರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗಿಯಾದರು. ನಗರದ ಪ್ರಮುಖ ಬಿದಿಗಳಲ್ಲಿ ಜಾಥಾ ಸಂಚರಿಸಿ ನಾಗರಿಕರಲ್ಲಿ ಅರಿವು ಮೂಡಿಸಿತು.
ದೇಶದಲ್ಲಿ ಸರ್ವ ಜನಾಂಗ ಎಲ್ಲ ಜನರು ಶಾಂತಿ ನೆಮ್ಮದಿಯಿಂದ ಬದುಕಲು ಸಮಾನತೆ, ಸೌಹಾರ್ದ ವಾತಾವರಣ ಮಹಿಳೆಯರಿಗೆ ಉನ್ನತ ಸ್ಥಾನಮಾನ ದೊರಕಿಸುವಲ್ಲಿ ಸಂವಿಧಾನದ ಪಾತ್ರ ಪ್ರಮುಖ್ಯವಾಗಿದೆ. ಈ ನಮ್ಮ ಸಂವಿಧಾನ ರಚಣೆಯಾಗಿ 75 ವರ್ಷ ತುಂಬಿದ್ದು, ಅದರ ಆಶಯಕ್ಕೆ ದಕ್ಕೆ ಬರದಂತೆ ನಾವೆಲ್ಲರೂ ನಡೆದುಕೊಳ್ಳೋಣ ಎಂದು ಉಪನ್ಯಾಸಕರಾದ ಎಸ್.ಆರ್. ಪೂಜಾರಿ ಹೇಳಿದರು.ಭಾರತ ಸಂವಿಧಾನವು ಭಾರತೀಯ ನಾಗರಿಕರಿಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭಾತೃತ್ವವನ್ನು ಭಾವನೆ ಬೆಳೆಸುವ ಮೂಲಕ ಜನರಿಗೆ ಸುಂದರ ಬದುಕನ್ನು ನೀಡಿದೆ ಎಂದರು.
ಬಸ್ ನಿಲ್ದಾಣದ ಹತ್ತಿರ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿರುವ ಕೌಜಲಗಿ ನಿಂಗಮ್ಮ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಂದಾ ಹಣಬರಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಶಕ ಮೋಹನ ಕೊರಡ್ಡಿ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶೇಖರ ಅಂಗಡಿ, ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ, ಪುರಸಭೆ ಸದಸ್ಯ ರವಿ ಜವಳಗಿ, ಸ್ಥಳೀಯ ಸಿದ್ಧಾರೂಢ ಮಠದ, ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ಧರು. ಲಕ್ಷ್ಮಣ ಮಾಂಗ, ಫಾರೂಕ್ ಪಕಾಲಿ, ರಮೇಶ ಕೆಸರಗೊಪ್ಪ, ಸಿಆರ್ಪಿ ಬ್ಯಾಳಿ, ಸದಾಶಿವ ಪೂಜಾರಿ, ಅರ್ಜುನ ದೊಡ್ಡಮನಿ, ಪರಶುರಾಮ ಮೇತ್ರಿ, ಸುಜಾತಾ ಮಾಂಗ, ಬಸವರಾಜ ಮಾವಿನಹಿಂಡಿ ಉಪಸ್ಥಿತರಿದ್ದರು.ಎಂ.ಆರ್. ಪಾಟೀಲ, ವಿ.ಜಿ. ಕುಲಕರ್ಣಿ, ಎಂ.ಡಿ. ಮಾಂಗ, ಸಿ.ಎಸ್. ಮಠಪತಿ, ಸಿದ್ದು ಅರಳಿಮಟ್ಟಿ, ರಾಜು ಹೂಗಾರ, ಎಂ.ಎಂ. ಮುಗಳಖೊಡ, ನಗರದ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು, ಪುರಸಭೆ ಸಿಬ್ಬಂದಿ, ನಗರ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವಿ ಹಲಸಪ್ಪಗೊಳ ನಿರೂಪಿಸಿ ವಂದಿಸಿದರು.