ಸಂವಿಧಾನವು ಅಧಿಕಾರ ಸಂಗ್ರಹದ ಸರೋವರದಂತಿದೆ: ಡಾ. ಅನಂತಕೃಷ್ಣ ಭಟ್

| Published : Nov 23 2024, 12:31 AM IST

ಸಾರಾಂಶ

ಪೂರ್ಣಪ್ರಜ್ಞ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಹಾಗೂ ಹಳೆವಿದ್ಯಾರ್ಥಿ ಸಂಘದಿಂದ ಮಾಹಿತಿ ಕಾರ್ಯಕ್ರಮ ನಡೆಯಿತು. ಮೇಘಾಲಯದ ಸರಸ್ವತಿ ಎಜುಕೇಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ. ಅನಂತಕೃಷ್ಣ ಭಟ್ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸಂವಿಧಾನಾತ್ಮಕ ಕಾನೂನುಗಳು ಮತ್ತು ಆಡಳಿತವು ತಮ್ಮ ನ್ಯಾಯ ಸಮ್ಮತತೆಯನ್ನು ಪಡೆಯುವ ಮೂಲಕ ಅಧಿಕಾರವನ್ನು ಹೊಂದಿರುತ್ತದೆ. ಭಾರತವು ಸುದೀರ್ಘವಾದ ಸಂವಿಧಾನವನ್ನು ಹೊಂದಿದ್ದು, ಅದು ಮೂಲಭೂತ ಹಕ್ಕುಗಳನ್ನು ವ್ಯಾಖ್ಯಾನಿಸುವ ಮೂಲಕ, ನಾಗರಿಕರಿಗೆ ಅಧಿಕಾರ ನೀಡುತ್ತದೆ ಮತ್ತು ಅವರ ಸ್ವಾತಂತ್ರ್ಯಗಳನ್ನು ರಕ್ಷಿಸುತ್ತದೆ. ನಮ್ಮ ಸಂವಿಧಾನವು ಅಧಿಕಾರ ಸಂಗ್ರಹದ ಸರೋವರದಂತಿದೆ ಎಂಬುವುದಾಗಿ ಮೇಘಾಲಯದ ಸರಸ್ವತಿ ಎಜುಕೇಶನ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ. ಅನಂತಕೃಷ್ಣ ಭಟ್ ಹೇಳಿದರು.ಅವರು ಪೂರ್ಣಪ್ರಜ್ಞ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಹಾಗೂ ಹಳೆವಿದ್ಯಾರ್ಥಿ ಸಂಘದಿಂದ ಆಯೋಜಿಸಲ್ಪಟ್ಟ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೆವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಡಾ. ಎಂ. ಆರ್. ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕ ಡಾ. ಯು.ವಿ. ಆನಂದ ಆಚಾರ್ಯ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಲಿನಿ, ಸಮಾಜಶಾಸ್ತ್ರ ಊಪನ್ಯಾಸಕ ಡಾ. ವಿನೊದ್ ಕುಮಾರ್ ಜಿ.ಸಿ. ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯಾದ ನಮಿತಾ ಹಾಗೂ ಸತ್ಯವ್ವ ಪ್ರಾರ್ಥಿಸಿದರು. ಸುಜನ್ ಕೆ.ಟಿ. ಕಾರ್ಯಕ್ರಮ ನಿರೂಪಿಸಿದರು. ಸತ್ಯವ್ವ ಸ್ವಾಗತಿಸಿದರು. ನಮಿತ ವಂದಿಸಿದರು.ಈ ಸಂದರ್ಭ ಹಳೇ ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಡಾ. ಎಂ.ಆರ್. ಹೆಗ್ಡೆ, ಡಾ. ಅನಂತ ಕೃಷ್ಣ ಭಟ್ ಅವರ ಸಂವಿಧಾನ ಕುರಿತಾದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು.