ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಭವ್ಯ ಭಾರತವನ್ನು ಸತ್ಯದ, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಮುನ್ನಡೆಸುವ ಬೃಹತ್ ದಿಕ್ಸೂಚಿಯೇ ನಮ್ಮ ಹೆಮ್ಮೆಯ ಭಾರತೀಯ ಸಂವಿಧಾನವೆಂದು ಡಾ.ಶ್ರೀಪಾದ ಕುಲಕರ್ಣಿ ಹೇಳಿದರು. ನಗರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಭವ್ಯ ಭಾರತವನ್ನು ಸತ್ಯದ, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಮುನ್ನಡೆಸುವ ಬೃಹತ್ ದಿಕ್ಸೂಚಿಯೇ ನಮ್ಮ ಹೆಮ್ಮೆಯ ಭಾರತೀಯ ಸಂವಿಧಾನವೆಂದು ಡಾ.ಶ್ರೀಪಾದ ಕುಲಕರ್ಣಿ ಹೇಳಿದರು.ನಗರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಲೀಸಾ ಬಾಸ್ಕೋ ಮಾತನಾಡಿ, ನಮ್ಮ ಸಂವಿಧಾನದ ಗುರಿ ಉದ್ದೇಶಗಳು ವ್ಯಕ್ತಿಗಳ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ರಾಷ್ಟ್ರ ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಎಲ್ಲರನ್ನು ಒಳಗೊಳ್ಳುವ ಮತ್ತು ಸಮಾನವಾಗಿರುವ ಸಮಾಜವನ್ನು ರಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಅಲ್ಲಿ ಪ್ರತಿಯೊಬ್ಬರು ಯಶಸ್ವಿಯಾಗಲು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಅವಕಾಶವಿದೆ. ಎಲ್ಲಾ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದತೆ ಮತ್ತು ಭಾತೃತ್ವವನ್ನು ಉತ್ತೇಜಿಸಲು ಮತ್ತು ಒಗ್ಗಟಿನ ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಲು ನಾವು ಶ್ರಮಿಸಬೇಕು ಎಂದರು.ವಿವಿಧತೆಯಲ್ಲಿ ಏಕತೆ ಸಾರುವ ಹಾಡು ನೃತ್ಯಗಳಿಗೆ ಶಾಲಾ ವಿದ್ಯಾರ್ಥಿಗಳು ಹೆಜ್ಜೆಹಾಕಿದರು. ಸೇಂಟ್ ಜೋಸೆಫ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಾಜು ಜೋಸೆಫ್, ಭಾರತಿ ಕರಡಿ, ವಿಜಯಕುಮಾರ ಹಳ್ಳದಮನಿ, ರಾಜೇಶ ನುಚ್ಚಿ, ಲೋಕೇಶ ಕಾಂಬಳೆ, ಆನಂದ ಬಿರಾದಾರ, ಶಾರದಾ ಮಾಲಗಾರ, ಜಾವೀದ ಬಾಗಲಕೋಟ, ಸುರೇಖಾ ಜೋಶಿ, ಪುರುಷೋತ್ತಮ.ಪಿ. ಮತ್ತಿತರರು ಉಪಸ್ಥಿತರಿದ್ದರು.