ಸಾರಾಂಶ
ಶೃಂಗೇರಿ, ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು. ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಹೊಸ ಶಕೆ ಆರಂಭಗೊಂಡಿತು. ಸಂವಿಧಾನ ದೇಶದ ಮೂಲಭೂತ ಕಾನೂನು ಎಂದು ವಕೀಲ ಕೆ.ಆರ್.ಸುರೇಶ್ ಹೇಳಿದರು.
ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ, ಕಾನೂನು ಅರಿವು ನೆರವು
ಕನ್ನಡಪ್ರಭ ವಾರ್ತೆ, ಶೃಂಗೇರಿನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು. ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಹೊಸ ಶಕೆ ಆರಂಭಗೊಂಡಿತು. ಸಂವಿಧಾನ ದೇಶದ ಮೂಲಭೂತ ಕಾನೂನು ಎಂದು ವಕೀಲ ಕೆ.ಆರ್.ಸುರೇಶ್ ಹೇಳಿದರು.
ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಸಂವಿಧಾನ ಸರ್ಕಾರದ ಅಧಿಕಾರಗಳು, ಮಿತಿ, ನಾಗರಿಕ ಹಕ್ಕು, ಕರ್ತವ್ಯಗಳನ್ನು ಒಳಗೊಂಡಿದೆ. ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಆಡಳಿತ, ನ್ಯಾಯಾಂಗ ವ್ಯವಸ್ಥೆ ಎಲ್ಲಾ ಕಾನೂನುಗಳಿಗೂ ಸಂವಿಧಾನವೇ ಮೂಲ.ಭಾರತದ ಸಂವಿಧಾನ ದಿನ ಅಪಾರ ಮಹತ್ವ ಹೊಂದಿದೆ. ನಮ್ಮ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ ನೀಡುತ್ತದೆ. ಭ್ರಾತೃತ್ವ ಮೌಲ್ಯಗಳನ್ನು ಉತ್ತೇಜಿಸುತ್ತದೆ. 70 ವರ್ಷಗಳ ಕಾಲ ವಿವಿಧ ಸಂಸ್ಕೃತಿ, ವಿವಿಧ ಭಾಷೆ, ಜನಾಂಗಗಳೊಂದಿಗೆ ಸಾಮರಸ್ಯ ಕಾಪಾಡಲು ಸಂವಿಧಾನ ದೇಶದ ಏಕತೆ ಬೆನ್ನೆಲುಬಾಗಿದೆ.
ಜನರನ್ನು ಸಶಕ್ತಗೊಳಿಸಿ ಕರ್ತವ್ಯಗಳನ್ನು ನೀಡಿದೆ. ವಿವಿಧ ದೇಶಗಳ ಸಂವಿಧಾನದ ಅಂಶಗಳನ್ನು ಎರವಲಾಗಿ ಪಡೆದ ಜಗತ್ತಿನಲ್ಲಿಯೇ ದೊಡ್ಡ ಸಂವಿಧಾನ. ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಗಲ್ಲು. ಹಕ್ಕುಗಳು ಮತ್ತು ಕರ್ತವ್ಯಗಳು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.ರಾಷ್ಟ್ರಧ್ವಜ, ರಾಷ್ಟ್ರಗೀತೆ ಗೌರವಿಸುವ ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸಿ ಅವರ ಆದರ್ಶ ಗಳನ್ನು ಪಾಲಿಸಬೇಕು. ರಾಷ್ಟ್ರ ರಕ್ಷಣೆಗೆ ಸೇವೆ ಸಲ್ಲಿಸಲು ಮುಂದಾಗಬೇಕು. ದೇಶದ ಏಕತೆ, ಸಮಗ್ರತೆಗೆ ಪಣತೊಡಬೇಕಿದೆ. ಸಂವಿಧಾನ, ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಯೋಗಿಶ್ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರಾದ ಇ.ಮಹೇಶ್, ಹರೀಣಾಕ್ಷಿ, ಕಾಲೇಜಿನ ಉಪನ್ಯಾಸಕ ಎ.ಜಿ.ಪ್ರಶಾಂತ್, ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿರಿದ್ದರು.27 ಶ್ರೀ ಚಿತ್ರ 1-
ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚಾರಣೆ ಕಾರ್ಯಕ್ರಮದಲ್ಲಿ ವಕೀಲರಾದ ಕೆ.ಆರ್.ಸುರೇಶ್ ಉಪನ್ಯಾಸ ನೀಡಿದರು.