ದೇಶವೆಂಬ ದೇಹಕ್ಕೆ ಸಂವಿಧಾನವೇ ಆತ್ಮ: ದಾಸರ್

| Published : Feb 13 2024, 12:46 AM IST

ಸಾರಾಂಶ

ಗಣರಾಜ್ಯೋತ್ಸವದ 75ನೇ ರಜತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾ.ಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತಿಸಿ ಭವ್ಯ ಮೇರವಣಿಗೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚವಡಾಪುರ

ನಮ್ಮ ದೇಶವನ್ನು ನಾವು ದೇಹವಾಗಿ ನೋಡಿದಾಗ ಅದರೊಳಗಿನ ಆತ್ಮವನ್ನು ನಾವು ಸಂವಿಧಾನವೆಂದು ನಿಸ್ಸಂಕೋಚವಾಗಿ ಹೇಳಬಹುದಾಗಿದೆ ಎಂದು ತಹಸೀಲ್ದಾರ ಸಂಜೀವಕುಮಾರ ದಾಸರ್ ಹೇಳಿದರು.

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಗಣರಾಜ್ಯೋತ್ಸವದ 75ನೇ ರಜತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾ.ಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಸ್ವಾಗತಿಸಿ ಭವ್ಯ ಮೇರವಣಿಗೆಯ ಬಳಿಕ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ನಮ್ಮದಾಗಿದೆ. 140 ಕೋಟಿ ಜನರಿಗೆ ಸಮಾನತೆ, ಸ್ವಾತಂತ್ರ, ಹಕ್ಕು ಮತ್ತು ಕರ್ತವ್ಯಗಳನ್ನು ಕೊಟ್ಟಿರುವ ಸಂವಿಧಾನಕ್ಕೆ ನಾವು ಋಣಿಯಾಗಿರುವುದರ ಜೊತೆಗೆ ಅದನ್ನು ಜವಾಬ್ದಾರಿಯಿಂದ ಕಾಪಾಡಿಕೊಳ್ಳಬೇಕು. ನಾವಿರುವ ತನಕ ಸಂವಿಧಾನ ನಮ್ಮ ರಕ್ಷಣೆಗೆ ನಿಲ್ಲುತ್ತದೆ. ಹೀಗಾಗಿ ನಮ್ಮ ಶ್ರೇಷ್ಠ ಸಂವಿಧಾನಕ್ಕೆ ನಾವು ಪ್ರತಿ ಕ್ಷಣವು ಗೌರವಿಸಬೇಕು ಎಂದರು.

ಪ್ರೌಢ ಶಾಲೆ ಶಿಕ್ಷಕ ಗೌತಮ ಕಳಸನವರ, ದಸಂಸ ಸಂಚಾಲಕ ಮಹಾಂತೇಶ ಬಡದಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ಸಂವಿಧಾನದ ಪಿಠೀಕೆ ಪಠಣ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸಾರಿಕಾ ಶರಣಗೌಡ, ಸದಸ್ಯರಾದ ಖಾಜಪ್ಪ ಸಿಂಗೆ, ಕಮಲಾ ವಾಡೆಕರ, ಗಿರೀಶ ಉಡಗಿ, ಶ್ರೀದೇವಿ ಬಿಜಾಪುರೆ, ದತ್ತು ಚವ್ಹಾಣ, ನಾಗೇಶ ಭತ್ತಾ, ಪಿಡಿಒ ಕರೇಪ್ಪ ಹಿರೇಕುರುಬರ, ಪ್ರಮುಖರಾದ ರಾಯಪ್ಪ ಮಾತಾರಿ, ಗೋರಖನಾಥ ಮಳಗಿ, ಚಾಂದ ಶೇಕ್, ವಿನೋದ ಅತನೂರ, ಮರೇಪ್ಪ ಸಿಂಗೆ, ಮಂಜು ಆನೂರ, ಅರ್ಜುನ ಮಾಶಾಳ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎಚ್ ಗಡಗಿಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ ನಾಯಕ, ಪಿಎಸ್‌ಐ ಮಹಿಬೂಬ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಇದ್ದರು.