ಸಾರಾಂಶ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಲಿಖಿತ ಸಂವಿಧಾನ ಕಾರಣವಾಗಿದೆ ಎಂದು ಬಿಎಡ್ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕಿ ಎಚ್.ಎನ್.ಲಕ್ಷ್ಮಿ ನರಸಿಂಹಮೂರ್ತಿ ಹೇಳಿದ್ದಾರೆ. ಚನ್ನರಾಯಪಟ್ಟಣದದಲ್ಲಿ ಆಯೋಜಿಸಿದ್ದ ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತೀಯರ ಬದುಕು ಸುಂದರ, ನಿಯಮ ಬದ್ಧವಾಗಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಲಿಖಿತ ಸಂವಿಧಾನ ಕಾರಣವಾಗಿದೆ ಎಂದು ಬಿಎಡ್ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕಿ ಎಚ್.ಎನ್.ಲಕ್ಷ್ಮಿ ನರಸಿಂಹಮೂರ್ತಿ ಹೇಳಿದ್ದಾರೆ.ಪಟ್ಟಣದ ಶಾಲಿನಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಭಾರತ ರತ್ನ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ‘ವಕೀಲರ ಸ್ವರ್ಗಲೋಕ ನಮ್ಮ ಸಂವಿಧಾನವಾಗಿದೆ. ಸಂವಿಧಾನದ ಪಾಲನೆಯಾಗಬೇಕು, ಅದರ ಬದಲಾವಣೆ ಆಗಬಾರದು. ಅಂಬೇಡ್ಕರ್ ಅವರ ವಿಚಾರಧಾರೆ ಸಾಗರದಂತೆ ಅಪರಿಮಿತವಾದದ್ದು. ಸಂಸ್ಕೃತಿ ಕಾನೂನು, ಧ್ಯೇಯ ಸಮಾನತೆಯನ್ನ ಹೊಂದಿದೆ’ ಎಂದು ಹೇಳಿದರು.
ಕಲಾವಿದ ಸೋಮಶೇಖರ್, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ ಎನ್. ಅಶೋಕ್, ರಾಮಣ್ಣ ಮಾತನಾಡಿ, ಅಂಬೇಡ್ಕರ್ ಅವರ ಶಕ್ತಿ ಅಪರಿಮಿತ ವಾದದ್ದು, ದೀನ ದಲಿತರ, ತುಳಿತಕ್ಕೆ ಒಳಗಾದವರ ಪರ ಕಾರ್ಯ ಮಾಡಿದವರು ಅಂಬೇಡ್ಕರ್. ತಾವು ಪಟ್ಟ ಕಷ್ಟ ಇನ್ನೊಬ್ಬರಿಗೆ ಆಗಬಾರದು ಎಂಬ ಭಾವನೆ ಇತ್ತು ಎಂದಿದ್ದಾರೆ ಎಂದು ತಿಳಿಸಿದರು.ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮಹದೇವ್, ಜಯರಾಮ್, ಸಿದ್ದೇಶ್, ನೀಲಾ ನಾಗೇಶ್, ಲತಾ, ದೀಪ್ತಿ, ಸಂಧ್ಯಾ, ಅರುಣ್, ಜಗದೀಶ್ ಇದ್ದರು.
ನಿಧನರಾದ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಸಭೆ ನಡೆಯಿತು. ಶಾಲಿನಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಸಿ. ಎನ್. ನಂಜುಂಡೇಗೌಡರು ಅಧ್ಯಕ್ಷತೆ ವಹಿಸಿ ಡಾಕ್ಟರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು. ವಿವಿಧ ಕ್ಷೇತ್ರದ ಸಾಧಕರಾದ ಭಾರತಿ ರಂಗಸ್ವಾಮಿ, ಶಾಂತ ಲಕ್ಷ್ಮಿ, ಜಗದೀಶ್, ರಂಗಪ್ಪ, ಕುಮಾರ್, ಅಣ್ಣಾಜಿ, ರವಿ, ಧರ್ಮರಾಜು, ವರದರಾಜು, ಚಂದ್ರು, ವೆಂಕಟ ಸುಬ್ಬಯ್ಯ, ಅರುಣ ಕುಮಾರ್, ಹರೀಶ್‌ರನ್ನು ಗೌರವಿಸಲಾಯಿತು.