ಭಾರತದ ಸಂವಿಧಾನ ವಿಶ್ವಕ್ಕೆ ಸರ್ವ ಶ್ರೇಷ್ಠವಾದದ್ದು: ಡಾ. ಮುರುಘರಾಜೇಂದ್ರ ಶ್ರೀ

| Published : Jan 27 2024, 01:18 AM IST

ಸಾರಾಂಶ

ಸಂವಿಧಾನ ಇದು ಇಡೀ ವಿಶ್ವಕ್ಕೆ ಮಾದರಿಯಾದದ್ದು ಎಂದು ಮುಘಳಖೋಡ-ಜಿಡಗಾ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ ಮುರುಘರಾಜೇಂದ್ರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ

ದುಂಬಿಯು ವಿವಿಧ ಜಾತಿಯ ಹೂವುಗಳ ಮಕರಂದವನ್ನು ಹೀರಿ ಸಿಹಿಯಾದ ಜೇನುತುಪ್ಪವನ್ನು ಸಂಗ್ರಹಿಸುವಂತೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಅವುಗಳಲ್ಲಿಯ ವೈಜ್ಞಾನಿಕ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ರಚನೆ ಮಾಡಿರುವಂತಹ ಭಾರತ ದೇಶದ ಈ ಸಂವಿಧಾನ ಇದು ಇಡೀ ವಿಶ್ವಕ್ಕೆ ಮಾದರಿಯಾದದ್ದು ಎಂದು ಮುಘಳಖೋಡ-ಜಿಡಗಾ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ ಮುರುಘರಾಜೇಂದ್ರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಮುಗಳಖೋಡ ಪಟ್ಟಣದ ಸಿದ್ಧಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನದ ಮಹತ್ವವನ್ನು ತಿಳಿಯಬೇಕಾದರೆ, ಸಂವಿಧಾನವನ್ನು ಪರಿಣಾಮಕಾರಿ ಆಚರಣೆ ಮಾಡಿದಾಗ ಮಾತ್ರ ಅದರ ಮಹತ್ವ ತಿಳಿಯಲು ಸಾಧ್ಯವಿದೆ. ಅಂಬೇಡ್ಕರ್ ಎಂದರೆ ಸಂವಿಧಾನ, ಸಂವಿಧಾನ ಎಂದರೆ ಅಂಬೇಡ್ಕರ್. ಅಂಥಹ ಮಹತ್ವದ ದಿನವನ್ನು ಭಾರತೀಯರಾದ ನಾವುಗಳು ನಮ್ಮ ದೇಶದ ಹಬ್ಬದಂತೆ ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಿದ್ಧಶ್ರೀ ಸೌಹಾರ್ದ ನಿಯಮಿತ, ಕಲ್ಬುರ್ಗಿ ಅಧ್ಯಕ್ಷ ಬಸವರಾಜ ಜೋಪಾಟೆ, ಸಿ ಎ ನಾಡಗೌಡರ, ವಿಠ್ಠಲ ಮೆಕ್ಕಳಕಿ, ಮುಖ್ಯೋಪಾಧ್ಯಾಯ ರಾಜಶೇಖರ್ ಛಲವಾದಿ, ಎಸ್ ಬಿ ಕಡಕಭಾವಿ, ಎಎಸ್ಐ ಧರೆಪ್ಪ ಚಿಕ್ಯಾಕೊಂಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೋಮು ಹೊರಟ್ಟಿ ನಿರೂಪಿಸಿ, ವಂದಿಸಿದರು.