ಸಾರಾಂಶ
Construction of 2 Crore Lambani Student Hostel: R.K. Patil promised
-ಸಂತಸೇವಾಲಾಲರ 9ನೇ ವರ್ಷದ ಜಾತ್ರಾ ಮಹೋತ್ಸವ ಅಗ್ಗಿ ಧಾರ್ಮಿಕ ಸಮಾರಂಭ
----ಕನ್ನಡಪ್ರಭ ವಾರ್ತೆ ಆಳಂದ
ಲಂಬಾಣಿ ಜನಾಂಗದವರು ದುಷ್ಟ ಕೃತ್ಯಗಳಿಂದ ದೂರವಿದ್ದು, ಶಿಕ್ಷಣ, ಸಂಘಟನೆಯ ಮೂಲಕ ಪ್ರಗತಿ ಸಾಧಿಸಿ ಉನ್ನತ ಗುರಿಗಳನ್ನು ಸಾಧಿಸಬೇಕು ಎಂದು ಮಹಾರಾಷ್ಟ್ರದ ಪೌರಾದೇವಿಯ ಬಂಜಾರಾ ತೀರ್ಥ ಕ್ಷೇತ್ರದ ಪೀಠಾಧಿಪತಿ ಬಾಬುಸಿಂಗ್ ಮಹಾರಾಜ್ ಕರೆ ನೀಡಿದರು.ತಾಲೂಕಿನ ಲಾಡಚಿಂಚೋಳಿ ತಾಂಡಾದ ದೇವಿಸೇವಾ ರಾಮಘಡ ಶಕ್ತಿ ಪೀಠದಲ್ಲಿ ಸುನೀಲ ಮಹಾರಾಜ ಅವರ ನೇತೃತ್ವದಲ್ಲಿ ನಡೆದ ಶ್ರೀ ಜಗದಂಬಾದೇವಿ ಮತ್ತು ಸಂತಸೇವಾಲಾಲ ಮಹಾರಾಜರ 9ನೇ ವರ್ಷದ ಜಾತ್ರಾ ಮಹೋತ್ಸವ ಅಗ್ಗಿ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಮಾತನಾಡಿ, ಆಳಂದಲ್ಲಿ ಲಂಬಾಣಿ ಸಮಾಜದ ನಿವೇಶನದಲ್ಲಿ ಶಾಸಕರ ಗಮನಕ್ಕೆ ತಂದು 2ಕೋಟಿ ರು. ವೆಚ್ಚದಲ್ಲಿ ಲಂಬಾಣಿ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.ಗೊಬ್ಬರವಾಡಿ ಶಕ್ತಿ ಪೀಠದ ಬಳಿರಾಮ ಮಹಾರಾಜ, ಲಾಡಚಿಂಚೋಳಿ ತಾಂಡಾದ ಶಕ್ತಿಪೀಠದ ಸುನೀಲ ಮಹಾರಾಜ್, ಮುಖಂಡ ಕನಿರಾಮ ರಾಠೋಡ, ನ್ಯಾಯವಾದಿ ಖೇಮಸಿಂಗ ರಾಠೋಡ, ಬಂಜಾರಾ ಸೇವಾ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಫೌಜಿ, ರಾಜು ಚವ್ಹಾಣ ಮಾತನಾಡಿದರು. ಕೇಸರಟಗಿ ಲತಾದೇವಿ, ಚಿಕ್ಕನಾಗಾಂವ ಲೋಕೇಶ ಮಹಾರಾಜ್, ಗೊಬ್ಬರವಾಡಿ ಸುರೇಶ ಮಹಾರಾಜ್, ಕಲಕೋರದ ಸಚೀನ ಮಹಾರಾಜ್, ಗ್ರಾಪಂ ಅಧ್ಯಕ್ಷ ಶಾಂತಾಬಾಯಿ ಚವ್ಹಾಣ, ಪುರಸಭೆ ಉಪಾಧ್ಯಕ್ಷೆ ಕವಿತಾ ನಾಯಕ, ಹೋದಲೂರ ಗ್ರಾಪಂ ಅಧ್ಯಕ್ಷ ಗಿರಿಮಲ ರಾಠೋಡ, ವಿಠ್ಠಲ ಜಾಧವ ಇದ್ದರು.
ಬಾಬುಸಿಂಗ್ ಮಹಾರಜರಿಂದ ಭೋಗ ವಿಧಾನ ನೆರವೇರಿಸಲಾಯಿತು. ಪ್ರೇಮಸಿಂಗ್ ಚವ್ಹಾಣ ನಿರೂಪಿಸಿದರು. ರಾಜು ಚವ್ಹಾಣ ಸ್ವಾಗತಿಸಿದರು.