ಸಾರಾಂಶ
ಮುಂಡರಗಿ: ಭಕ್ತರ ನೆರವು ಹಾಗೂ ಸಹಕಾರದಿಂದ ಮಾತ್ರ ಸಮಾಜದಲ್ಲಿ ಹೊಸ ಗುಡಿ, ಗುಂಡಾರಗಳ ನಿರ್ಮಾಣ ಕಾರ್ಯ ಸಾಧ್ಯವಾಗುತ್ತದೆ. ಹದಿನಾರು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿದ್ದ ವೀರಭದ್ರೇಶ್ವರ ದೇವಸ್ಥಾನ ಈಗ ಭಕ್ತರ ನೆರವಿನಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.ಅವರು ಬುಧವಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗಿದ ನೂತನ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ದೇವಸ್ಥಾನ ಆರಂಭವಾದಾಗಿನಿಂದ ಪ್ರತಿ ವರ್ಷ ನಿರಂತರವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ. ಜಾತ್ರೆಯಲ್ಲಿ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಅನೇಕರಿಗೆ ಅನುಕೂಲವಾಗಲಿದೆ ಎಂದರು.ವೀರಭದ್ರೇಶ್ವರ ಸೇವಾ ಸಮಿತಿ ಖಜಾಂಚಿ ವಿ.ಜೆ. ಹಿರೇಮಠ ಮಾತನಾಡಿದರು. ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಣ್ಣ ಲಿಂಬಿಕಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವೀರಭದ್ರೇಶ್ವರ ದೇವಸ್ಥಾನದ ನೂತನ ಗೋಪುರಕ್ಕೆ ಹಾಗೂ ನೂತನ ಕಳಸಕ್ಕೆ ಪಟ್ಟಣದ ಮೃತ್ಯುಂಜಯ ಬಣಕಾರ ಹಾಗೂ ಕುಟುಂಬದವರು ದೇಣಿಗೆ ನೀಡಿದ್ದು, ಅವರನ್ನು ದೇವಸ್ಥಾನ ಸೇವಾ ಸಮೀತಿಯ ಪರವಾಗಿ ಗೌರವಿಸಲಾಯಿತು.ಜಾತ್ರಾ ಸಮಿತಿ ಅಧ್ಯಕ್ಷ ಪ್ರದೀಪಗೌಡ ಗುಡದಪ್ಪನವರ, ಮಂಜುನಾಥ ಕಾಸಿಗವಿ, ಮಹಿಳಾ ಸಮಿತಿ ಅಧ್ಯಕ್ಷ ಪ್ರಭಾವತಿ ಕುಬಸದ, ದೀಪಾ ಗುಗ್ಗರಿ, ಲತಾ ಲಿಂಬಿಕಾಯಿ, ರೇಖಾ ಹುಲ್ಲೂರ, ಈರಣ್ಣ ಕರ್ಜಗಿ, ಮಹಾಂತೇಶ ಕೊರಡಕೇರಿ, ಅಜ್ಜಪ್ಪ ಲಿಂಬಿಕಾಯಿ, ಎಸ್.ಪಿ. ಕೊಪ್ಪಳ, ಲತಾ ಕಡ್ಡಿ, ರೋಹಿಣಿ ಕುಬಸದ, ಕಲ್ಪನಾ ಕಡ್ಡಿ, ಗೀತಾ ಬಣಕಾರ, ಅಮೃತಾ ಲಿಂಬಿಕಾಯಿ, ಶ್ರೀದೇವಿ ಗೋಡಿ, ಈರಣ್ಣ ಕಾಸಿಗವಿ, ನಾಗಪ್ಪ ಕುಬಸದ, ಮಂಗಳಾ ಕರ್ಜಗಿ ಉಪಸ್ಥಿತರಿದ್ದರು.