ದಿಬ್ಬದ ಬೊಮ್ಮಣ್ಣನಿಗೆ 5 ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣ

| Published : Apr 13 2025, 02:07 AM IST

ದಿಬ್ಬದ ಬೊಮ್ಮಣ್ಣನಿಗೆ 5 ಕೋಟಿ ವೆಚ್ಚದಲ್ಲಿ ಮಂದಿರ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ದೇವರಿಗೆ ಭವ್ಯ ದೇಗುಲ ನಿರ್ಮಾಣ ಮಾಡಿ, ನಿಮ್ಮ ಮನೆದೇವರು ತೃಪ್ತನಾದರೆ. ಭಗವಂತ ನಿಮ್ಮ ಹೃದಯ ಮಂದಿರದಲ್ಲಿ ನೆಲಸಲಿದ್ದಾನೆ. ಶ್ರೀ ದಿಬ್ಬದ ಬೊಮ್ಮಣ್ಣ ಸ್ವಾಮಿ ದೇಗುಲ ರಾಜ್ಯದಲ್ಲಿಯೇ ಮಾದರಿಯಾಗುವ ರೀತಿ ನಿರ್ಮಾಣವಾಗಿ ದೈವಿಕ ಶಕ್ತಿಯ ಕೇಂದ್ರವಾಗಲಿ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ದೇವರಿಗೆ ಭವ್ಯ ದೇಗುಲ ನಿರ್ಮಾಣ ಮಾಡಿ, ನಿಮ್ಮ ಮನೆದೇವರು ತೃಪ್ತನಾದರೆ. ಭಗವಂತ ನಿಮ್ಮ ಹೃದಯ ಮಂದಿರದಲ್ಲಿ ನೆಲಸಲಿದ್ದಾನೆ. ಶ್ರೀ ದಿಬ್ಬದ ಬೊಮ್ಮಣ್ಣ ಸ್ವಾಮಿ ದೇಗುಲ ರಾಜ್ಯದಲ್ಲಿಯೇ ಮಾದರಿಯಾಗುವ ರೀತಿ ನಿರ್ಮಾಣವಾಗಿ ದೈವಿಕ ಶಕ್ತಿಯ ಕೇಂದ್ರವಾಗಲಿ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ವೀರಬೊಮ್ಮನಹಳ್ಳಿ ಗ್ರಾಮದ ತಡಕಲೂರು ಕಟ್ಟೆಮನೆ ಶ್ರೀ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಲ್ಲುಗಾಲಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಮಾತನಾಡಿದರು. ಜನರ ರಕ್ಷಣೆಗಾಗಿ ಸದಾ ಬೆನ್ನೆಲುಬಾಗಿ ನಿಂತು ರಕ್ಷಣೆ ಮಾಡುತ್ತಿದ್ದ, ಶ್ರೀ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ದೈವಿಕ ಶಕ್ತಿ ಹೊಂದಿದ ವೀರ. ಅಳುನವರ ಅಣ್ಣತಮ್ಮಂದಿರು, ಬಂಡಿಕಾರರು, ಭಕ್ತರರೆಲ್ಲರೂ ಒಗ್ಗೂಡಿ ಶ್ರೀ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿಗೆ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು ಹೆಚ್ಚು ಹರ್ಷ ನೀಡುತ್ತದೆ ಎಂದರು.ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ ನಮ್ಮ ನಾಡಿನ ಧಾರ್ಮಿಕ ಪರಂಪರೆ ಉಳಿಸಿ ಬೆಳೆಸುವಂತಹ ಕೆಲಸವನ್ನು ನಾವೆಲ್ಲರೂ ಒಗ್ಗೂಡಿ ಮಾಡಬೇಕಿದೆ. ಕೋಟ್ಯಂತರ ರುಪಾಯಿ ಹಣ ವೆಚ್ಚ ಮಾಡಿ ಶ್ರೀ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿಗೆ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು, ಅಳುನವರ ದೈವಿಕ ಭಕ್ತಿಯನ್ನು ಸಾಕ್ಷಿಕರಿಸುತ್ತದೆ ಎಂದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಮಾತನಾಡಿ ಶ್ರೀ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ೫ ಕೋಟಿ ರುಪಾಯಿ ಅಂದಾಜು ವೆಚ್ಚ ಮಾಡಲಾಗಿತ್ತು. ಆದರೆ ವಿಶಿಷ್ಟ ಶಿಲ್ಪ ಕಲೆಯ ಮೂಲಕ ದೇವಸ್ಥಾನ ನಿರ್ಮಾಣ ಮಾಡಲು ಭಕ್ತ ಸಮೂಹ ನಿರ್ಧಾರ ಮಾಡಿದ್ದು ನೂತನ ದೇವಸ್ಥಾನ ವೆಚ್ಚ ೭ ಕೋಟಿ ರುಪಾಯಿಗೂ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ಭಕ್ತರ ಸಹಕಾರ ಅಗತ್ಯ ಎಂದರು. ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿ ವೀರ ಬೊಮ್ಮನಹಳ್ಳಿ ಗ್ರಾಮ ದಿಬ್ಬದ ಶ್ರೀ ವೀರ ಬೊಮ್ಮಣ್ಣ ಸ್ವಾಮಿಗೆ ನೂತನ ದೇವಾಲಯ ನಿರ್ಮಾಣ ಮಾಡಬೇಕೆಂಬ ಸಂಕಲ್ಪಕ್ಕೆ ನಾನು ಕೂಡ ಮೂರು ಲಕ್ಷ ರೂಪಾಯಿ ದೇಣಿಗೆ ನೀಡಲಿದ್ದೇನೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ರಾಮಕೃಷ್ಣ, ಜೆಡಿಎಸ್ ಯುವ ಮುಖಂಡ ಲಿಂಗದಹಳ್ಳಿ ಚೇತನ್ ಕುಮಾರ್, ರಾಮೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್. ಗಂಗಾಧರಯ್ಯ, ಮುಖಂಡರಾದ ನಾಗರಾಜು, ಪೂಜಾರ್ ಜಗದೀಶ್, ಪೂಜಾರ್ ಗಂಗಾಧರ್, ಗೌಡರ ನಾಗರಾಜು, ಕೋಲುಕಾರ ರಂಗನಾಥ್, ಪುಟ್ಟ ಲಿಂಗಪ್ಪ, ಬಂಡಿಕಾರ ನಾಗಭೂಷಣ, ಹನುಮಂತರಾಯಪ್ಪ ವೆಂಕಟೇಶ್, ಮಹದೇವಪ್ಪ, ಪ್ರಕಾಶ್ ರಾಜು ಸೇರಿದಂತೆ ೧೨ ಮಂದಿ ಕೈವಾಡಸ್ತರು, ಬಂಡಿಕಾರರು, ಅಳುನವರ ಅಣ್ಣ ತಮ್ಮಂದಿರು, ಭಕ್ತರು ಹಾಜರಿದ್ದರು.