ವಳಗೆರಮ್ಮ ದೇವಸ್ಥಾನದ ಆವರಣದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ರಥದ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಳಗೆರಮ್ಮ ಗ್ರಾಮ ದೇವತೆಯಾಗಿದ್ದು ಭಕ್ತರ ಸಂಖ್ಯೆಯು ಹೆಚ್ಚಿದೆ. ರಸ್ತೆ, ದೇವಾಲಯದ ಆವರಣದಲ್ಲಿ ನೆಲ ಹಾಸು ಸೇರಿ ವಿವಿಧ ಅಭಿವೃದ್ಧಿ ಕಾಮ ಗಾರಿ ಕೈಗೊಳ್ಳಲಾಗಿದೆ. ದೇಗುಲ ಸೇವಾ ಸಮಿತಿ ಮನವಿಯಂತೆ ಪ್ರತಿ ವರ್ಷ ಜಾತ್ರೆಗೆ ಪುರಸಭೆಯಿಂದ ೧ ಲಕ್ಷ ರು. ಅನುದಾನ ನೀಡಲಾಗುವುದು ಎಂದರು. ಪ್ರತಿ ಅಮಾವಾಸ್ಯೆ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ಅನುಕೂಲವಾಗಲೆಂದು ಊಟದ ಮನೆ ಸೇರಿ ದೇವಸ್ಥಾನದ ಛಾವಣಿಗೆ ಸೀಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಭಕ್ತರ ಅನುಕೂಲಕ್ಕಾಗಿ ಸ್ವಚ್ಛ ಭಾರತ್ ಯೋಜನೆಯಡಿ ವಳಗೇರಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಿಸಬೇಕೆಂದು ಶಾಸಕ ಸಿ. ಎನ್. ಬಾಲಕೃಷ್ಣ ಅವರು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ವಳಗೆರಮ್ಮ ದೇವಸ್ಥಾನದ ಆವರಣದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ರಥದ ಮನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಳಗೆರಮ್ಮ ಗ್ರಾಮ ದೇವತೆಯಾಗಿದ್ದು ಭಕ್ತರ ಸಂಖ್ಯೆಯು ಹೆಚ್ಚಿದೆ. ರಸ್ತೆ, ದೇವಾಲಯದ ಆವರಣದಲ್ಲಿ ನೆಲ ಹಾಸು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ದೇಗುಲ ಸೇವಾ ಸಮಿತಿ ಮನವಿಯಂತೆ ಪ್ರತಿ ವರ್ಷ ಜಾತ್ರೆಗೆ ಪುರಸಭೆಯಿಂದ ೧ ಲಕ್ಷ ರು. ಅನುದಾನ ನೀಡಲಾಗುವುದು ಎಂದರು. ಪ್ರತಿ ಅಮಾವಾಸ್ಯೆ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಊಟದ ಮನೆ ಸೇರಿ ದೇವಸ್ಥಾನದ ಛಾವಣಿಗೆ ಸೀಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.ದೇವಸ್ಥಾನಕ್ಕೆ ಸೇರಿದ ೪ ಎಕರೆ ಜಮೀನು ಪಟ್ಟಣದ ಹೃದಯ ಭಾಗ ದಲ್ಲಿದ್ದು ದೇವಾಲಯದ ಅಭಿವೃದ್ಧಿಗೆ ಈ ಜಮೀನು ಬಳಕೆಯಾಗಬೇಕು. ದೇವಸ್ಥಾನದ ಜಮೀನನ್ನು ಅನ್ಯರ ಪಾಲಾಗದಂತೆ ರಕ್ಷಿಸುವುದು ಜವಾಬ್ದಾರಿ. ದೇವಾಲಯ ಆಸ್ತಿಗಳನ್ನು ದುರುಪಯೋಗಪಡಿಸಿ ಕೊಳ್ಳ ಬಾರದು. ದೇವಾಲಯ ಅಭಿವೃದ್ಧಿಗೆ ಇರುವ ಜಮೀನುಗಳನ್ನು ದೇವಾಲಯದ ಆಸ್ತಿ, ಆಡಳಿತ ಮಂಡಳಿ ಆಸ್ತಿ ರಕ್ಷಣೆಯನ್ನು ಮಾಡಬೇಕೆಂದರು. ಪುರಸಭಾ ಮುಖ್ಯಾಧಿಕಾರಿ ಆರ್‌ .ಯತೀಶ್ ಕುಮಾರ್, ಮಾಜಿ ಅಧ್ಯಕ್ಷೆ ಬನಶಂಕರಿರಘು, ಕೋಟೆ ಮೋಹನ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುರೇಶ್, ಬ್ರೆಡ್‌ ರಾಜಣ್ಣ, ಕವಿತಾ, ಮಾಜಿ ಸದಸ್ಯರಾದ ಸತ್ಯನಾರಾಯಣ, ಗಣೇಶ್, ವಕೀಲರಾದ ನವೀನ್, ಮುಖಂಡರಾದ ಜೈದೀಪ್ ಬಾಲಕೃಷ್ಣ, ಶಾಮಿಯಾನ ರಘು, ರಾಜು, ಗುಡಿ ಗೌಡರ ವಂಶಸ್ಥರಾದ ಸಿ. ಎನ್. ದೇವರಾಜು, ಬಾಬು ನಾಗ ರಾಜು, ಸಿ. ಡಿ. ನಾಗೇಂದ್ರ, ಉಮೇಶ್, ಧೀರಜ್ ಭಾಗವಹಿಸಿದ್ದರು.