ನವಿಲೇ ಗ್ರಾಮದ ಲಕ್ಷ್ಮೀದೇವಿ ದೇಗುಲದ ಮುಂಭಾಗ 20 ಲಕ್ಷ ರು. ವೆಚ್ಚದ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 1 ಕೋಟಿ ರು. ವೆಚ್ಚದ ನಾಗೇಶ್ವರ ಸ್ವಾಮಿ ರಥದ ನಿರ್ಮಾಣದ ಕೆಲಸ ಪೂರ್ಣಗೊಂಡು ಲೋಕಾರ್ಪಣೆಗೆ ದಿನಾಂಕ ನಿಗದಿಪಡಿಸಲಾಗಿದೆ ಎಂದರು. ಜೋಕೆನಹಳ್ಳಿ, ಚವೆನಹಳ್ಳಿ, ನವಿಲೇ ವಡ್ಡರಹಟ್ಟಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಸುವ ಭರವಸೆ ನೀಡಿದರು.

ಬಾಗೂರು: ಪುರಾಣಪ್ರಸಿದ್ಧ ಶ್ರೀ ನಾಗೇಶ್ವರ ಸ್ವಾಮಿ ಕ್ಷೇತ್ರದ 5 ಕೋಟಿ ವೆಚ್ಚದ ಕಲ್ಯಾಣ ಮಂಟಪದ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿಯ ನವಿಲೇ ಗ್ರಾಮದ ಲಕ್ಷ್ಮೀದೇವಿ ದೇಗುಲದ ಮುಂಭಾಗ 20 ಲಕ್ಷ ರು. ವೆಚ್ಚದ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 1 ಕೋಟಿ ರು. ವೆಚ್ಚದ ನಾಗೇಶ್ವರ ಸ್ವಾಮಿ ರಥದ ನಿರ್ಮಾಣದ ಕೆಲಸ ಪೂರ್ಣಗೊಂಡು ಲೋಕಾರ್ಪಣೆಗೆ ದಿನಾಂಕ ನಿಗದಿಪಡಿಸಲಾಗಿದೆ ಎಂದರು. ಜೋಕೆನಹಳ್ಳಿ, ಚವೆನಹಳ್ಳಿ, ನವಿಲೇ ವಡ್ಡರಹಟ್ಟಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್. ಪರಮೇಶ್, ಮೆಡಿಕಲ್ ವೆಂಕಟೇಶ್, ನಿವೃತ್ತ ಎಂಜಿನಿಯರ್‌ ಸದಾಶಿವಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ಎನ್. ಕುಮಾರಸ್ವಾಮಿ, ಉದ್ಯಮಿ ಭುವನಹಳ್ಳಿ ಯೋಗೇಶ್, ಪುರೋಹಿತ್ ಸಿದ್ದೇಶ್, ಮುಖಂಡರಾದ ಎನ್ಎಲ್. ನಾಗರಾಜ್, ಎನ್. ಕೆ. ನಾಗಪ್ಪ, ನಾಗೇಶ್, ಇಟ್ಟಿಗೆ ನಾಗರಾಜ್, ದೇವರಾಜ್, ಅದಿಹಳ್ಳಿ ರಂಗೇಗೌಡ, ಕಾಂತರಾಜ್, ನವೀನ್, ರವಿ, ಹರೀಶ್, ದಿನೇಶ್, ನಾಗು, ಇತರರು ಹಾಜರಿದ್ದರು.