ಸಾರಾಂಶ
ಮಾಗಡಿ: ಪಟ್ಟಣದ ಮಾರುಕಟ್ಟೆಯಲ್ಲಿ ಶಿಥಿಲವಾಗಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುತ್ತಿದ್ದು, ಇಲ್ಲೊಂದು ಸುಸಜ್ಜಿತ ವಾಣಿಜ್ಯ ಸಂರ್ಕೀಣ ನಿರ್ಮಿಸಿ ಪುರ ನಾಗರಿಕರಿಗೆ ಅನುಕೂಲ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಬಹುತೇಕ ಪುರಸಭೆಗೆ ಸೇರಿದ ಅಂಗಡಿ ಮಳಿಗೆಗಳು ತೀರ ಶಿಥಲಿಗೊಂಡಿವೆ. ಅವುಗಳನ್ನು ತೆರವುಗೊಳಿಸಲು ಪುರಸಭೆ ಕ್ರಮ ಕೈಗೊಳ್ಳುತ್ತಿದೆ. ಅವುಗಳ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.ಸ್ಮಶಾನ ದುರಸ್ತಿ:
ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲಾ ಜನಾಂಗದವರ ಸ್ಮಶಾನಗಳನ್ನು ದುರಸ್ತಿಪಡಿಸಿ ಮೂಲಸೌಕರ್ಯಗಳನ್ನು ಒದಗಿಸಲು ಪುರಸಭೆಗೆ ಸೂಚಿಸಿದ್ದೇನೆ. ಜತೆಗೆ ಇರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಪಟ್ಟಣಕ್ಕೆ ಶುದ್ಧ ನೀರಯ ಪೂರೈಕೆಗೂ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ. ಈ ಸಂಬಂಧ ಪುರಸಭೆ ಅಧ್ಯಕ್ಷೆ ಶಿವರುದ್ರಮ್ಮ ಹಾಗೂ ಉಪಾಧ್ಯಕ್ಷ ರಿಯಾಜ್ ಹಾಗೂ ಆಯಾ ವಾರ್ಡ್ ಸದಸ್ಯರು ನಿಗಾ ವಹಿಸಬೇಕು ಎಂದು ಹೇಳಿದರು.ಮಂಚನಬೆಲೆ ನೀರು ಕಲುಷಿತವಾಗದಂತೆ ಕ್ರಮ:
ಪಟ್ಟಣಕ್ಕೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕಲುಷಿತ ನೀರು ಮಂಚನಬೆಲೆ ಜಲಾಶಯಕ್ಕೆ ಸೇರುತ್ತಿದೆ ಎಂಬ ದೂರು ಕೇಳಿ ಬಂದಿದೆ. ಕಲುಷಿತ ನೀರು ಜಲಾಶಯಕ್ಕೆ ಬಾರದಂತೆ ತಡೆಯಲು ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸುರಂಗ ಮಾರ್ಗ ಕೊರೆದು ನೀರು ಬೇರೆಡೆಗೆ ಬಿಡುವಂತೆ ಮನವಿ ಮಾಡಿದ್ದೇನೆ. ಅವರು ಸುರಂಗ ಮಾರ್ಗಕ್ಕೆ ಹೆಚ್ಚು ವೆಚ್ಚವಾಗಲಿದೆ. ಇದಕ್ಕೆ ಪರ್ಯಾಯವಾಗಿ ಚೆಕ್ ಡ್ಯಾಂ ನಿರ್ಮಿಸಿ ನೀರನ್ನು ಬೇರೆಡೆಗೆ ಬಿಡುವಂತೆ ಸಲಹೆ ನೀಡಿದ್ದಾರೆ. ಈ ಸಂಬಂಧ ಎಂಜಿನಿಯರ್‌ಗಳಿಗೆ ಸರ್ವೆ ಕಾರ್ಯ ನಡೆಸಲು ಸೂಚಿಸಿದ್ದಾರೆ. ಮಂಚನಬೆಲೆ ಜಲಾಶಯದ ನೀರನ್ನು ಶುದ್ಧೀಕರಿಸುವ ಘಟಕವನ್ನು ಪುನರ್ ನಿರ್ಮಾಣಕ್ಕೆ ಪುರಸಭೆ ಮುಖ್ಯಾಧಿಕಾರಿಗೆ ತಾಕೀತು ಮಾಡಿದ್ದೇನೆ ಎಂದು ಶಾಸಕರು ತಿಳಿಸಿದರು.ಪುರಸಭೆ ಸದಸ್ಯ ಕೆ.ವಿ.ಬಾಲರಘು ಮತ್ತು ಎಂ.ಎನ್.ಮಂಜುನಾಥ್ ಮಾತನಾಡಿ, ಗೌರಮ್ಮನಕೆರೆ ಏರಿಯ ಮೇಲೆ ಕಾಂಕ್ರೀಟ್ ಹಾಕಲಾಗಿದೆ. ಅದನ್ನು ತೆರವುಗೊಳಿಸದೆ ಪಾದಚಾರಿ ರಸ್ತೆಯಲ್ಲಿ ಕಲ್ಲುಗಳನ್ನು ಅಳವಡಿಸಿ ಅನುಕೂಲ ಕಲ್ಪಿಸಬೇಕು. ಪಟ್ಟಣದಲ್ಲಿ ಬಹುತೇಕ ಬೀದಿ ದೀಪಗಳು ಮಂದವಾಗಿ ಉರಿಯುತ್ತಿವೆ. ಹೆಚ್ಚು ಬೆಳಕು ಕೊಡುವ ದೀಪಗಳನ್ನು ಅಳವಡಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.
ಒಳಚರಂಡಿ ನೀರು ಹೊಂಬಾಳಮ್ಮನಪೇಟೆ ಗ್ರಾಮದ ರೈತರ ತೋಟಗಳಿಗೆ ನುಗ್ಗುತ್ತಿದೆ. ಇದರಿಂದ ಇಡೀ ಗ್ರಾಮದ ದುರ್ವಾಸನೆಯಿಂದ ಕೂಡಿದ್ದು, ಊಟ, ನಿದ್ದೆ ಸಹ ಮಾಡಲಾಗುತ್ತಿಲ್ಲ, ಒಳಚರಂಡಿ ನೀರು ತೋಟಗಳಿಗೆ ಹರಿಸದಂತೆ ದೊಡ್ಡ ಸೇತುವೆಗಳನ್ನು ಕಟ್ಟಿಸಲು ಶಾಸಕರಲ್ಲಿ ವಾರ್ಡ್ ಸದಸ್ಯ ವೆಂಕಟರಾಮು ಮನವಿ ಮಾಡಿದರು. ಈ ಸಂಬಂಧ ಎಂಜಿನಿಯರ್ ಅವರನ್ನು ಕರೆದು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಈ ವೇಳೆ ಪುರಸಭಾ ಅಧ್ಯಕ್ಷೆ ಶಿವರುದ್ರಮ್ಮ ವಿಜಯಕುಮಾರ್, ಉಪಾಧ್ಯಕ್ಷ ರಿಯಾಜ್ ಅಹಮದ್, ಸದಸ್ಯರಾದ ರಂಗಹನುಮಯ್ಯಮ ಶಿವಕುಮಾರ್, ಅನಿಲ್ಕುಮಾರ್, ನಾಗರತ್ನಮ್ಮ ರಾಜಣ್ಣ, ವಿಜಯ ರೂಪೇಶ್, ರಮ್ಯಾ ನರಸಿಂಹಮೂತರ್ಿ, ಮಮತಾ ಗುರುಸ್ವಾಮಿ, ಹೇಮಲತಾ ನಾಗರಾಜು, ನಾಮಿನಿ ಸದಸ್ಯರಾದ ರಾಧಾ, ಪ್ರಕಾಶ್, ಮುಖ್ಯಾಧಿಕಾರಿ ಟಿ.ಎನ್.ಶ್ರೀನಿವಾಸ್, ಸದಸ್ಯರು, ಎಂಜಿನಿಯರ್, ಸಿಬ್ಬಂದಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))