ಮಾಗಡಿಯ ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಡಿಟೋರಿಯಂ ನಿರ್ಮಾಣ

| Published : Oct 05 2025, 01:00 AM IST

ಮಾಗಡಿಯ ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಡಿಟೋರಿಯಂ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಪಟ್ಟಣದ ಎನ್ಇಎಸ್ ಬಡವಾಣೆಯಲ್ಲಿರುವ ಜೂನಿಯರ್ ಕಾಲೇಜು ಮೈದಾನದಲ್ಲಿ 17 ಕೋಟಿ ರು.ವೆಚ್ಚದಲ್ಲಿ ಸುಸಜ್ಜಿತ ಕುವೆಂಪು ರಂಗಮಂದಿರ(ಆಡಿಟೋರಿಯಂ) ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಮಾಗಡಿ: ಪಟ್ಟಣದ ಎನ್ಇಎಸ್ ಬಡವಾಣೆಯಲ್ಲಿರುವ ಜೂನಿಯರ್ ಕಾಲೇಜು ಮೈದಾನದಲ್ಲಿ 17 ಕೋಟಿ ರು.ವೆಚ್ಚದಲ್ಲಿ ಸುಸಜ್ಜಿತ ಕುವೆಂಪು ರಂಗಮಂದಿರ(ಆಡಿಟೋರಿಯಂ) ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಶಾಸಕರು, ಈ ಭಾಗದಲ್ಲಿ ದೊಡ್ಡ ಆಡಿಟೋರಿಯಂ ನಿರ್ಮಾಣವಾದರೆ ಪಟ್ಟಣದ ಎಲ್ಲಾ ಶಾಲಾ ವಾರ್ಷಿಕೋತ್ಸವಗಳು ಇಲ್ಲಿಯೇ ನಡೆಯಲು ಅವಕಾಶ ದೊರೆಯುತ್ತದೆ. 800 ಆಸನ ಹಾಗೂ ಮೊದಲ ಮಹಡಿಯಲ್ಲಿ 400 ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು. ರಜಾ ದಿನಗಳಲ್ಲಿ ಪೌರಾಣಿಕ ನಾಟಕ ಹಾಗೂ ಇತರೆ ಕಾರ್ಯಕ್ರಮಗಳಿಗೆ ಉಪಯೋಗಿಸಿದರೆ, ಇದರ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.ಜೂನಿಯರ್ ಕಾಲೇಜನ್ನು ಕೆಪಿಎಸ್ ಶಾಲೆಯಾಗಿ ಪರಿವರ್ತನೆ ಮಾಡಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. 1ರಿಂದ 12ನೇ ತರಗತಿವರೆಗೂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಆರಂಭಿಸುವುದರಿಂದ ಹೆಚ್ಚಿನ ಮಕ್ಕಳು ಇಲ್ಲಿ ದಾಖಲಾಗುತ್ತಾರೆ. 2ರಿಂದ 3 ಸಾವಿರ ವಿದ್ಯಾರ್ಥಿಗಳು ದಾಖಲಾದರೆ ಅವರಿಗೆ ಆಡಿಟೋರಿಯಂ ಬೇಕಾಗುತ್ತದೆ. ಈ ದೂರದೃಷ್ಟಿಯಿಂದ ದೊಡ್ಡ ಆಡಿಟೋರಿಯಂ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಬೆಂಗಳೂರಿನ ವಿಜಯನಗರ ಮಾದರಿಯಲ್ಲಿ ಜೂನಿಯರ್ ಕಾಲೇಜು ಬಳಿ 6.5 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣ ಮಾಡುತ್ತಿದ್ದು ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಸಜ್ಜಿತ ಕಾಲೇಜು ಕ್ಯಾಂಪಸ್ ಮಾಡಲಾಗುವುದು ಎಂದರು..

ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಪುರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.