ಕಳಸೂರು ಬಳಿ ವರದಾ ನದಿಗೆ ಬ್ಯಾರೇಜ್‌ ನಿರ್ಮಾಣ-ವಿಧಾನಸಭೆ ಉಪಸಭಾಧ್ಯಕ್ಷ ಲಮಾಣಿ ಭರವಸೆ

| Published : Feb 12 2025, 12:32 AM IST

ಕಳಸೂರು ಬಳಿ ವರದಾ ನದಿಗೆ ಬ್ಯಾರೇಜ್‌ ನಿರ್ಮಾಣ-ವಿಧಾನಸಭೆ ಉಪಸಭಾಧ್ಯಕ್ಷ ಲಮಾಣಿ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳಸೂರು ಗ್ರಾಮದ ಹತ್ತಿರದ ವರದಾ ನದಿಗೆ ಹಲವಾರು ವರ್ಷಗಳಿಂದ ಪ್ರತ್ಯೇಕ ಬ್ಯಾರೇಜ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಬೇಡಿಕೆಯಿದ್ದು, ಬರುವ ಅಧಿವೇಶನದಲ್ಲಿ ಚರ್ಚಿಸಿ ಶೀಘ್ರದಲ್ಲಿಯೆ ಬ್ರಿಡ್ಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭರವಸೆ ನೀಡಿದರು.

ಸವಣೂರು:ಕಳಸೂರು ಗ್ರಾಮದ ಹತ್ತಿರದ ವರದಾ ನದಿಗೆ ಹಲವಾರು ವರ್ಷಗಳಿಂದ ಪ್ರತ್ಯೇಕ ಬ್ಯಾರೇಜ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಬೇಡಿಕೆಯಿದ್ದು, ಬರುವ ಅಧಿವೇಶನದಲ್ಲಿ ಚರ್ಚಿಸಿ ಶೀಘ್ರದಲ್ಲಿಯೆ ಬ್ರಿಡ್ಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭರವಸೆ ನೀಡಿದರು.ತಾಲೂಕಿನ ಕಳಸೂರ ಗ್ರಾಮ ಪಂಚಾಯ್ತಿಯ ನೂತನ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ ನೆರವೇರಿಸಿ ಹಾಗೂ ಗ್ರಾ.ಪಂ. ಹಾಲಿ, ಮಾಜಿ ಸದಸ್ಯರಿಗೆ, ಅಧಿಕಾರಿಗಳಿಗೆ ಮತ್ತು ಗಣ್ಯರಿಗೆ ಸನ್ಮಾನಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಗ್ರಾಮಗಳು ಅಭಿವೃದ್ಧಿ ಹೊಂದಿದಂತೆ ರಾಜ್ಯ, ದೇಶ ಬಹುಬೇಗನೆ ಅಭಿವೃದ್ಧಿ ಹೊಂದಲು ಸಾಧ್ಯ. ಅದಕ್ಕಾಗಿ, ಸರ್ಕಾರ ಹಲವಾರು ಯೋಜನೆಗಳನ್ನು ಗ್ರಾಮ ಪಂಚಾಯ್ತಿಗೆ ಒದಗಿಸಿದೆ. ಅವುಗಳ ನೆರವನ್ನು ಸಮರ್ಪಕವಾಗಿ ಪಡೆದು ಅಭಿವೃದ್ಧಿ ಹೊಂದಲು ಸ್ಥಳೀಯರು ಹಾಗೂ ಜನಪತ್ರಿನಿಧಿಗಳ ಇಚ್ಛಾಶಕ್ತಿ ಅವಶ್ಯವಾಗಿದೆ. ಕಳಸೂರ ಗ್ರಾ.ಪಂ. ವ್ಯಾಪ್ತಿಯ ಕಳಸೂರ, ಮಂಟಗಣಿ, ಕಲಕೋಟಿ ಗ್ರಾಮಗಳ ಅಭಿವೃದ್ಧಿಗೆ ನಾನು ವಿಶೇಷವಾಗಿ ಕಾಳಜಿ ಇದೆ. ಕಳಸೂರ ಗ್ರಾ.ಪಂ. ನಲ್ಲಿ ಮಹಿಳೆಯರೇ ಅಧ್ಯಕ್ಷರು. ಉಪಾಧ್ಯಕ್ಷರು ಹಾಗೂ ಪಿಡಿಓಗಳು ಇದ್ದು, ಎಲ್ಲರ ಸಹಕಾರದಿಂದ ಈ ಬೃಹತ್ ಕಟ್ಟಡ ಕಟ್ಟಲು ಸಾಧ್ಯವಾಗಿದೆ. ಇಲ್ಲಿನ ಅನೇಕ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಬಗೆಹರಿಸಲು ಪ್ತಯತ್ನಿಸಲಾಗುವುದು. ಗ್ರಾ.ಪಂ. ಆವರಣದಲ್ಲಿ ಸ್ಥಳಾವಕಾಶವಿದ್ದು, ಕಾಂಪೌಂಡ್ ಕಟ್ಟಲು ಅನುದಾನ ನೀಡುತ್ತೇನೆ. ಗ್ರಾ.ಪಂ. ಗಳಲ್ಲಿ ಹೆಚ್ಚಿನ ಅಧಿಕಾರ ಹಾಗೂ ಅನುದಾನ ಇದ್ದು ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ.ಸದಸ್ಯ ಶ್ರೀಧರ ದೊಡ್ಡಮನಿ, ಈ ಕಚೇರಿಯ ಕಟ್ಟಲು ಎಲ್ಲರ ಸಹಕಾರ, ಶ್ರಮವಿದೆ. ಇದೊಂದು ಮಹತ್ವಪೂರ್ಣ ಕೆಲಸವಾಗಿದೆ. ಗ್ರಾ.ಪಂ. ಈ ಭಾಗದ ಜನರಿಗೆ ಉತ್ತಮ ಆಡಳಿತ ನೀಡಲು ಅವಕಾಶವಿದೆ ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಹತ್ತಿಮತ್ತೂರಿನ ವಿತಕ್ತಮಠದ ನಿಜಗುಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಶುಭ ಕೋರಿ ಆರ್ಶಿವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಪವಿತ್ರಾ ಬಸವಣ್ಣೆಪ್ಪ ಮಂಟಗಣಿ, ಗ್ರಾ.ಪಂ. ಸದಸ್ಯರಾದ ಪುಟ್ಟಪ್ಪ ಮರಗಿ, ಜಗದೀಶ ಮಂಟಗಣಿ, ಗ್ರಾಮದ ಹಿರಿಯರಾದ ಶಿವಾಜಪ್ಪ ಪುಟ್ಟಣ್ಣನವರ, ಹೆಚ್.ಎಸ್.ಪಾಟೀಲ, ರಮೇಶ ಸಿಂಗಣ್ಣನವರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಾವೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಮೈದೂರ, ಸವಣೂರ ತಾಲೂಕು ಅಧ್ಯಕ್ಷ ಸುಭಾಷ ಮಜ್ಜಗಿ, ಗ್ರಾ.ಪಂ.ಉಪಾಧ್ಯಕ್ಷೆ ಶ್ವೇತಾ ಬಳ್ಳಾರಿ, ಕಳಸೂರ, ಹಿರೇಮುಗದೂರ, ಡಂಬರಮತ್ತೂರ, ಹಿರೇಮರಳಿಹಳ್ಳಿ ಗ್ರಾ.ಪಂ. ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮದ ಹಿರಿಯರು. ಮುಖಂಡರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಧಾನ ಸಭಾ ಉಪಸಭಾಧ್ಯಕ್ಷರಿಗೆ, ಗ್ರಾ.ಪಂ. ಹಾಲಿ, ಮಾಜಿ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ,ಸದಸ್ಯರುಗಳಿಗೆ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಗಣ್ಯರಿಗೆ ಗ್ರಾ.ಪಂ.ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಗ್ರಾ.ಪಂ. ಸಿಬ್ಬಂದಿ ರಮೇಶ ಕ್ಯಾಲಕೊಂಡ ಕಾರ್ಯಕ್ರಮ ನಿರ್ವಹಿಸಿದರು.