ಸಾರಾಂಶ
ಹನೂರು ಮಲೆ ಮಾದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಆನೆ ಹೊಲ ರಸ್ತೆ ಮಳೆಯಿಂದ ಕೊಚ್ಚಿ ಹೋಗಿ ಕಂದಕ ನಿರ್ಮಾಣವಾಗಿದ್ದು ಸ್ಥಳೀಯ ರೈತರು ದುರಸ್ತಿಯಲ್ಲಿ ತೊಡಗಿರುವುದು.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಆನೆ ಹೊಲ ಗ್ರಾಮದ ಪ್ರಮುಖ ರಸ್ತೆಯು ಮಳೆ ನೀರಿನಿಂದ ಕೊಚ್ಚಿ ಹೋಗಿ ಹಳ್ಳದಿಣ್ಣೆ ಕಲ್ಲು ಕಂದಕಗಳು ನಿರ್ಮಾಣವಾಗಿದೆ. ಸಾರ್ವಜನಿಕರು ಓಡಾಡದ ಸ್ಥಿತಿಯಲ್ಲಿ ರಸ್ತೆಯಲ್ಲಿ ಗುಂಡಿಮಯವಾಗಿ ನಿವಾಸಿಗಳು ಪರದಾಡುವಂಥ ಸ್ಥಿತಿ ಉಂಟಾಗಿದೆ.ಸ್ಥಳೀಯರಿಂದ ರಸ್ತೆ ದುರಸ್ತಿ: ಮಲೆ ಮಾದೇಶ್ವರ ಬೆಟ್ಟದ ಗ್ರಾಪಂ ವ್ಯಾಪ್ತಿಯ ಆನೆ ಹೊಲ ಗ್ರಾಮದ ಕರಡಿಯ ಸೀಳು ರಸ್ತೆಯು ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಕಂದಕಗಳು ನಿರ್ಮಾಣವಾಗಿ ರಸ್ತೆಯಲ್ಲಿದ್ದ ಮಣ್ಣು ಕೊಚ್ಚಿ ಹೋಗಿ ನಿವಾಸಿಗಳು ಓಡಾಡದ ಸ್ಥಿತಿಯಲ್ಲಿ ನಿರ್ಮಾಣವಾಗಿದೆ. ಗ್ರಾಮದ ಸ್ಥಳೀಯ ರೈತರೇ ದುರಸ್ತಿಗೆ ಮುಂದಾಗಿದ್ದು ದೊಡ್ಡ ದೊಡ್ಡ ಕಂದಕಗಳನ್ನು ಕಲ್ಲು ಮಣ್ಣಿನಿಂದ ಮುಚ್ಚಿ ಓಡಾಡಲು ಅನುವು ಮಾಡಿಕೊಳ್ಳುವ ಮೂಲಕ ಜನಪ್ರತಿನಿಧಿ ಅಧಿಕಾರಿಗಳಿಗೆ ಶಾಪ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ: ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿ ಅಧಿಕಾರಿಗಳು ಶಾಶ್ವತ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿಯನ್ನು ಕಂಡು ಕಾಣದಂತಿರುವ ಜನಪ್ರತಿನಿಧಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.