ಮತಿಘಟ್ಟ ಜಿಪಂ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ: ಕೆ. ಎಸ್. ಆನಂದ್

| Published : Jul 17 2025, 12:33 AM IST

ಮತಿಘಟ್ಟ ಜಿಪಂ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ: ಕೆ. ಎಸ್. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುತಾಲೂಕಿನ ಮತಿಘಟ್ಟ ಜಿಪಂ ವ್ಯಾಪ್ತಿಯ ರೈತರ ಸಂಚಾರಕ್ಕಾಗಿ ₹1.50 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ. ಎಸ್. ಆನಂದ್ ಹೇಳಿದರು.

ಕ್ಷೇತ್ರದ ಬಾಣನಹಳ್ಳಿಯಲ್ಲಿ ₹1.50 ಕೋಟಿ ರು.ನಲ್ಲಿ ಆವುತಿ ಹಳ್ಳಕ್ಕೆ ಅಡ್ಡಲಾಗಿ ಲೋ ಲೆವೆಲ್ ಕ್ಯಾಜುವೆಲ್

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಮತಿಘಟ್ಟ ಜಿಪಂ ವ್ಯಾಪ್ತಿಯ ರೈತರ ಸಂಚಾರಕ್ಕಾಗಿ ₹1.50 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ. ಎಸ್. ಆನಂದ್ ಹೇಳಿದರು.

ಕ್ಷೇತ್ರದ ಬಾಣನಹಳ್ಳಿಯಲ್ಲಿ ₹1.50 ಕೋಟಿ ರು.ನಲ್ಲಿ ಆವುತಿ ಹಳ್ಳಕ್ಕೆ ಅಡ್ಡಲಾಗಿ ಲೋ ಲೆವೆಲ್ ಕ್ಯಾಜುವೆಲ್ ನಿರ್ಮಾಣ ಮತ್ತು ಆಯ್ದ ಭಾಗದಲ್ಲಿ ಹೂಳು ತೆಗೆಯುವ ವಿಶ್ವೇಶ್ವರಯ್ಯ ಜಲನಿಗಮದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ₹1.50 ಕೋಟಿ ರು. ವೆಚ್ಚದ ಲೋ ಕ್ಯಾಜುಯಲ್ ಕಾಮಗಾರಿಗೆ ಬಾಣನಹಳ್ಳಿ ಪಕ್ಕದಲ್ಲಿ ಬರುವ ಆಹುತಿ ಹಳ್ಳಕ್ಕೆ ಸೇತುವೆ ಮತ್ತು ರಸ್ತೆ ನಿರ್ಮಾಣವಾಗಲಿದೆ. ಬಹು ದಿನಗಳ ಕನಸಿನ ಬೇಡಿಕೆ ಇಂದು ನನಸಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಇಲ್ಲಿಗೆ ಬಾರದಿದ್ದರೂ ಸಚಿವರ ಮನವೊಲಿಸಿ ಅವರಿಂದ ಕಾಮಗಾರಿ ಆದೇಶ ಪಡೆದು ಚಾಲನೆ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಈ ಭಾಗದ ಮತ್ತೊಂದು ಕಡೆ ಸೇತುವೆ ಕೆಲಸ ನಡೆಯಲಿದೆ. ಇದರಿಂದ ಸ್ಥಳೀಯರಿಗೆ ಮುಖ್ಯ ರಸ್ತೆಯಿಂದ ಲಕ್ಕೇನ ಹಳ್ಳಿ ಮತಿಘಟ್ಟ ಮುಖ್ಯ ರಸ್ತೆಗೆ ಕೇವಲ 3 ಕಿಲೋಮೀಟರ್ ನಲ್ಲಿ ತಲುಪಬಹುದು ಎಂದರು. ನಮ್ಮ ತಾಯಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಂದರ್ಭದಲ್ಲಿ ಅವರನ್ನು ಗೆಲ್ಲಿಸಿ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ಅದೇ ರೀತಿ 2023ರ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳನ್ನು ನೀಡಿದ್ದನ್ನು ಮರೆಯಲಾರೆ ಎಂದು ಹೇಳಿ, ಬೇಡಿಕೆ ನೀಡಿರುವ ರಸ್ತೆಗೆ ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕ್ಷೇತ್ರದ ಮತ್ತಿಘಟ್ಟ ಮತ್ತು ಕೆರೆಸಂತೆ ಭಾಗ ಹಿಂದಿನಿಂದಲೂ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ತಮ್ಮ ಅವಧಿಯಲ್ಲಿ ಅಭಿವೃದ್ಧಿ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಕಾರ್ಯ ಮಾಡುತ್ತೇನೆ. ಈಗಾಗಲೇ ಭಾಪೂಜಿ ಕಾಲೋನಿ, ಭೋವಿ ಕಾಲೋನಿ, ಲಿಂಗ್ಲಾಪುರ ರಸ್ತೆ ಮಾಡಿಸಿದ್ದು, ಬಾಣನಹಳ್ಳಿಗೂ ರಸ್ತೆ ಮಾಡಿಸಲಾಗುವುದು. ನಂಜಪ್ಪನಹಳ್ಳಿಗೆ ₹50 ಲಕ್ಷ ರು.ನಲ್ಲಿ ರಸ್ತೆ ಮಾಡಿದ್ದೇವೆ. ಲಕ್ಕೇನಹಳ್ಳಿ ಮತ್ತು ಬೀರನಹಳ್ಳಿ ತಾಂಡ್ಯದ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಸಿದ್ದಾಪುರ, ಲಕ್ಕೇನಹಳ್ಳಿ, ದೇವರಹಳ್ಳಿ ಮತ್ತುಕುಪ್ಪಾಳಿನ ರಸ್ತೆ ಮಾಡಿಸಲಾಗುವುದು. ಏನೇ ಕೆಲಸ ಇದ್ದರೂ ನಿಮ್ಮ ಜೊತೆ ಇದ್ದು, ಕೈಲಾದ ಮಟ್ಟಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದರು. ಪ್ರಾಸ್ತಾವಿಕವಾಗಿ ವಿಶ್ವೇಶ್ವರಯ್ಯ ಜಲನಿಗಮದ ಏಇಇ ಹರ್ಷ ಮಾತನಾಡಿ, ಬಾಣನಹಳ್ಲಿ ಲಕ್ಕೇನಹಳ್ಳಿ ಸೇರಿದಂತೆ ಲೋ ಲೆವೆಲ್ ಕ್ಯಾಶುಯಲ್ ಯೋಜನೆ ಮೂಲಕ ₹1.50 ಕೋಟಿ ವೆಚ್ಚದಲ್ಲಿ ಸೇತುವೆ ಮಾಡಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಯಲ್ಲಿ ಈ ಕಾಮಗಾರಿ ಇರಲಿಲ್ಲ. ಆದರೆ ಶಾಸಕರಾದ ಆನಂದ್ ನಮ್ಮನ್ನು ಕರೆದು ಸಾಧ್ಯಾಸಾದ್ಯತೆ ಚರ್ಚಿಸಿ ಸರಕಾರಕ್ಕೆಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಲಕ್ಕೇನಹಳ್ಳಿ ಮತ್ತು ಕರೇನಹಳ್ಳಿ ಸೇರಿ ಎರಡು ಕಡೆ ನಿರ್ಮಾಣಕ್ಕೆ ಮಂಜೂರಾತಿ ಪಡೆದಿದ್ದು. ಈಗ ಒಂದು ಭಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ನಾಲ್ಕು ಪಂಚಾಯ್ತಿಗಳ ಜನರಿಗೆ,ರೈತರಿಗೆ ಅನುಕೂಲವಾಗುವ ಈ ಭಾಗಕ್ಕೆ ಅಗತ್ಯ ವಿರುವ ಸೇತುವೆಗಳನ್ನು ನಮ್ಮ ನಾಯಕರು ಮಾಡಿಸುತ್ತಿರುವುಕ್ಕೆ ಮತಿಘಟ್ಟ, ಕೆರೆಸಂತೆ ಗ್ರಾಮ ಪಂಚಾಯಿತಿಗಳ ಪರವಾಗಿ ಅಭಿನಂದಿಸುತ್ತೇನೆ ಎಂದರು. ವಿಜೆಎನ್ ಎಲ್ ನಿಗಮದ ಏಇ ರವಿ,ಕೆರೆಸಂತೆ ಗ್ರಾಪಂ ಅಧ್ಯಕ್ಷೆ ವಂದನಾ ರವಿ ನಾಯ್ಕ, ಮತಿಗಟ್ಟ ಗ್ರಾಪಂ ಮಾಜಿ ಅಧ್ಯಕ್ಷ ರೇವಣ್ಣ, ಮಾಜಿ ಅಧ್ಕ್ಷಕ್ಷ ಶ್ರೀಕಂಠ ಒಡೆಯರ್, ಮಾಜಿ ಅಧ್ಯಕ್ಷ ಕುಮಾರ್,ಚಾಂದ್, ಮಹಮ್ಮದ್, ಪವನ್, ಬಾಬಣ್ಣ ದೇವೇಂದ್ರ, ಕೃಷ್ಣಮೂರ್ತಿ, ಸತೀಶ್, ರಾಜಪ್ಪ, ಕುಮಾರ್ ಮತ್ತಿತರರು ಇದ್ದರು..

16ಕೆಕೆಡಿಯು2.

ಶಾಸಕ ಕೆ.ಎಸ್. ಆನಂದ್ ಕಡೂರು ಕ್ಷೇತ್ರದ ಬಾಣನಹಳ್ಳಿಯಲ್ಲಿ ವಿಶ್ಸೇಶ್ವರಯ್ಯ ಜಲನಿಗಮದ ₹1.50 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಚಾಲನೆ ನೀಡಿದರು.