ಬಸ್ ನಿಲ್ದಾಣದಲ್ಲಿ ಕುಡಿಯುವ ಘಟಕ ನಿರ್ಮಾಣ

| Published : Mar 25 2025, 12:46 AM IST

ಬಸ್ ನಿಲ್ದಾಣದಲ್ಲಿ ಕುಡಿಯುವ ಘಟಕ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಸಾರ್ವಜನಿಕ ಸೇವೆ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಿಕೊಳ್ಳುತ್ತೇನೆ. ಕೊರಟಗೆರೆ ಪಟ್ಟಣದ ಒಂದು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ನಾನು ಸಾರ್ವಜನಿಕ ಸೇವೆ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಿಕೊಳ್ಳುತ್ತೇನೆ. ಕೊರಟಗೆರೆ ಪಟ್ಟಣದ ಒಂದು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುವುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಮ್ಮ ೫೬ ನೇ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳು ಒಳ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಗೂ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪಠ್ಯದ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ನಮ್ಮ ಕೊರಟಗೆರೆ ಪಟ್ಟಣದ ಬಸ್ಟಾಂಡ್ ಗೆಳೆಯರ ಬಳಗದ ಬೇಡಿಕೆಯಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಘಟಕವನ್ನು ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ರಿಂದ ಹಾಕಿಸಿಕೊಡಲಾಗುವುದು ಮುಂದಿನ ದಿನಗಳಲ್ಲೂ ಸಹ ಸಾರ್ವಜನಿಕ ಸೇವೆಗೆ ಬದ್ದನಾಗಿರುತ್ತೇನೆ ಎಂದು ತಿಳಿಸಿದರು.ಮಾಜಿ ಜಿಪಂ ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ ಮಾತನಾಡಿ ಹಲವು ವರ್ಷಗಳಿಂದ ನಮ್ಮ ಕುಟುಂಬದವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದೇವೆ. ಸರ್ಕಾರಿ ಶಾಲಾ ಮಕ್ಕಳಿಗೆ ಜನಪ್ರತಿನಿಧಿಗಳಾದ ನಾವುಗಳು ಈ ರೀತಿಯ ಕಾರಣಗಳನ್ನು ಇಟ್ಟುಕೊಂಡು ಸೇವೆ ಮಾಡಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ನೆರವಾಗುತ್ತದೆ ಎಂದರು.ಕಾಂಗ್ರೆಸ್ ಪಕ್ಷದ ಮುಖಂಡ ಕಾರ್‌ಮಹೇಶ್ ಮಾತನಾಡಿ ನಮ್ಮ ನಾಯಕರಾದ ಮಹಾಲಿಂಗಪ್ಪ ಅಭಿಮಾನಿ ಬಳಗದಿಂದ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೊರಟಗೆರೆ ಬಸ್‌ ನಿಲ್ದಾಣದಲ್ಲಿ ಬಡವರಿಗೆ ಸಿಹಿ ಹಂಚಿಸಲಾಗಿದ್ದು, ಬಿಸಿಲು ಹೆಚ್ಚಾದರಿಂದ ಮಜ್ಜಿಗೆಯನ್ನು ವಿತರಿಸಲಾಗಿದೆ. ಮಹಾಲಿಂಗಪ್ಪನವರು ಹಲವು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ಅವರು ಮುಂದೆ ಡಾ.ಜಿ.ಪರಮೇಶ್ವರ ರವರ ಆಶೀರ್ವಾದದಿಂದ ಯಾವುದಾದರು ಕ್ಷೇತ್ರದಿಂದ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಲಿ ಎನ್ನವುದು ನಮ್ಮಗಳ ಆಸೆ ಎಂದರು.ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಪುರುಷೋತ್ತಮ್‌ ನಾಯಕ್ ಕಸಬಾ ವಿ.ಎಸ್.ಎ.ಎನ್. ಆಧ್ಯಕ್ಷ ಕೆ.ಎಸ್.ವಿನಯಕುಮಾರ್, ಟಿ.ಎ.ಪಿ.ಸಿ.ಎಂ.ಎಸ್ ಅದ್ಯಕ್ಷ ಜಿ.ಎಂ.ಶಿವಾನಂದ್, ಮುಖಂಡರಾದ ಯೋಗೀಶ್, ಕುದುರೆಸತ್ಯನಾರಾಯಣ್. ಸೈಯದ್‌ಸೈಪುಲ್ಲಾ, ಸಿದ್ದಲಿಂಗಯ್ಯ, ನೇಗಲಾಲರಮೇಶ್, ಚಿಕ್ಕನಾರಾಯಣ್, ನಾಗೇಶ್, ಶಿವರಾಜ, ಅನಿಲ್, ಬಿದರೇಶ್ ಸೇರಿದಂತೆ ಇತರರು ಹಾಜರಿದ್ದರು.