ರೋಣದಲ್ಲಿ ಸ್ವಚ್ಛತೆಗಾಗಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ

| Published : Aug 18 2025, 12:00 AM IST

ರೋಣದಲ್ಲಿ ಸ್ವಚ್ಛತೆಗಾಗಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ರೋಣ ಪಟ್ಟಣದ ನೈರ್ಮಲ್ಯತೆ ಹಾಗೂ ಸ್ವಚ್ಛತೆ ಹಿತದೃಷ್ಟಿಕೋನದಿಂದ ಮನೆ ಹಾಗೂ ಇತರೆ ಕಟ್ಟಡಗಳ ಸೆಪ್ಟಿ ಟ್ಯಾಂಕ್ ನಲ್ಲಿ ಮಲ ತ್ಯಾಜ್ಯ ಸಂಗ್ರಹಿಸಿ, ಅದನ್ನು ಸಂಸ್ಕರಿಸಲು ₹ 3.12 ಕೋಟಿ ವೆಚ್ಚದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗುವದು. ಪಟ್ಟಣದ ಜನತೆ ಇದರ ಪ್ರಯೋಜನ ಪಡೆಯಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ರೋಣ: ಪಟ್ಟಣದ ನೈರ್ಮಲ್ಯತೆ ಹಾಗೂ ಸ್ವಚ್ಛತೆ ಹಿತದೃಷ್ಟಿಕೋನದಿಂದ ಮನೆ ಹಾಗೂ ಇತರೆ ಕಟ್ಟಡಗಳ ಸೆಪ್ಟಿ ಟ್ಯಾಂಕ್ ನಲ್ಲಿ ಮಲ ತ್ಯಾಜ್ಯ ಸಂಗ್ರಹಿಸಿ, ಅದನ್ನು ಸಂಸ್ಕರಿಸಲು ₹ 3.12 ಕೋಟಿ ವೆಚ್ಚದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗುವದು. ಪಟ್ಟಣದ ಜನತೆ ಇದರ ಪ್ರಯೋಜನ ಪಡೆಯಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಸಾಯಂಕಾಲ ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಎನ್.ಜಿ.ಟಿ ಮತ್ತು ಸ್ವಚ್ಛ ಭಾರತ ಅಭಿಯಾನದಡಿ ₹ 312 ಲಕ್ಷ ವೆಚ್ಚದಲ್ಲಿ ಮಲ ತ್ಯಾಜ್ಯ ಸಂಸ್ಕರಣಾ ( ಎಫ್.ಎಸ್.ಟಿ.ಪಿ) ಘಟಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಂಗ್ರಹಿಸಿದ ಮಲ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡದಂತೆ, ಪರಿಸರ ಹಾಗೂ ಪಟ್ಟಣದ ನೈರ್ಮಲ್ಯ ಕಾಪಾಡುವಲ್ಲಿ ಇದಕ್ಕೊಂದು ಘಟಕ ಸ್ಥಾಪಿಸಲಾಗಿದೆ. ಸೆಪ್ಟಿ ಟ್ಯಾಂಕ್ ಮಲ ತ್ಯಾಜ್ಯವನ್ನು ಸಂಗ್ರಹಿಸಲು ಈಗಾಗಲೇ ಪುರಸಭೆಯಿಂದ ವಾಹನ ವ್ಯವಸ್ಥೆಯಿದ್ದು, ಅದರಂತೆ ಇನ್ನೂ ಹೆಚ್ವುವರಿ ವಾಹನ ವ್ಯವಸ್ಥೆ ಕಲ್ಪಿಸಲಾಗುವದು. 9 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಕೊಡುವಂತಾಗಬೇಕು ಎಂದು ಸೂಚಿಸಿದರು

ಮುಖ್ಯಮಂತ್ರಿಗಳು ನೀಡಿದ ₹ 50 ಕೋಟಿ ವಿಶೇಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಗೆ ಕ್ಷೇತ್ರದಲ್ಲಿ ರಸ್ತೆ ನಿರ್ಮಿಸಲು ₹38 ಕೋಟಿ ನೀಡಲಾಗಿದ್ದು, ಉಳಿದ 12 ಕೋಟಿ ಅನುದಾನದಲ್ಲಿ ಅಮೃತ್ ಯೋಜನೆ 1 ಮತ್ತು 2ನೇ ಹಂತದ ಕಾಮಗಾರಿಗಳ ಅಡಿ ಪೈಪ್ ಲೈನ್ ಅಳವಡಿಸಲು ಪಟ್ಟಣದ ಸಿಸಿ ರಸ್ತೆಗಳನ್ನು ಅಗೆದಿದ್ದು, ಇದರಿಂದ ರಸ್ತೆಗಳು ಬಹಳ ಹದಗೆಟ್ಟಿದ್ದು, ಇವುಗಳ ದುರಸ್ತಿಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ₹ 4 ಕೋಟಿ ನೀಡಲಾಗಿದೆ ಎಂದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ವಿರುದ್ಧ ಗರಂ ಆದ ಶಾಸಕರು ನಾನು ಸಾಕಷ್ಟು ಬಾರಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಲಹೆ ಹಾಗೂ ಅನುದಾನ ಕೊಟ್ಟರು ಸಹ ಪುರಸಭೆ ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ. ಪುರಸಭೆಯಲ್ಲಿ ಏನು ನಡೆಯುತ್ತದೆಯೋ ನನಗೆ ಗೊತ್ತಿಲ್ಲ. ಆದರೆ ಅಭಿವೃದ್ಧಿ ಮಾಡು ಎಂದಾಗಲು ಸುಮ್ಮನಿದ್ದರೇ ಏನರ್ಥ? ಹೀಗೆ ಮಾಡಿದರೆ ಹೇಗೆ? ಅಭಿವೃದ್ಧಿ ವಿಷಯದಲ್ಲಿ ಹುಡುಗಾಟಿಕೆ ಮಾಡುವುದು ಸರಿಯಲ್ಲ. ರೋಣ ಪಟ್ಟಣ ಅಭಿವೃದ್ಧಿಯಾಗದಿದ್ದರೆ ನಾನು ಸುಮ್ಮನಿರೋಲ್ಲ ಎಂದು ಹರಿಹಾಯ್ದರು. ಈ ವೇಳೆ ಗದಗ ಜಿಲ್ಲಾ ಕಾಂಗ್ರೆಸ್ ಮಹಾ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮಕಟ್ಟಿಮಠ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತಪ್ಪ ತಳ್ಳಿಕೇರಿ, ಸದಸ್ಯರಾದ ಬಾವಾಸಾಬ ಬೆಟಗೇರಿ, ಮಲ್ಲಯ್ಯ ಮಹಾಪುರಷಮಠ, ಸಂಗಪ್ಪ ಜಿಡ್ಡಿಬಾಗಿಲ, ದಾವಲಸಾಬ ಬಾಡಿನ ,ದುರಗಪ್ಪ ಹಿರೇಮನಿ, ಚನ್ನಬಸಮ್ಮ ಹಿರೇಮಠ, ಮುಖ್ಯಾಧಿಕಾರಿ ರಮೇಶ ಹೊಸಮನಿ ಸೇರಿದಂತೆ, ಪುರಸಭೆ ಸಿಬ್ಬಂದಿ ವರ್ಗ ಮುಂತಾದವರು ಉಪಸ್ಥಿತರಿದ್ದರು.