ಸಾರಾಂಶ
ಹೊಸಕೋಟೆ: ಚೊಕ್ಕಹಳ್ಳಿ-ಪಿಲ್ಲಗುಂಪೆ ಕೈಗಾರಿಕಾ ವಲಯದಲ್ಲಿ ಬಡ ಮಕ್ಕಳಿದ್ದು ಅವರಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಕಲ್ಪಿಸಲು ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕೆಲ ಕಿಡಿಗೇಡಿಗಳು ದಲಿತಪರ ಸಂಘಟನೆಗಳ ದಿಕ್ಕು ತಪ್ಪಿಸಿ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಢಿದ ಅವರು, ಗ್ರಾಮದಲ್ಲಿ ನೂರಾರು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗ್ರಾಮದ ಸರ್ವೆ ನಂ. 33ರಲ್ಲಿ 21 ಗುಂಟೆ ಸರ್ಕಾರಿ ಜಮೀನಿದ್ದು ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಶಾಸಕರು ಹಾಗು ಈ ಭಾಗದ ಮುಖಂಡರ ಗಮನಕ್ಕೆ ತಂದು ವಿವೇಕ ಶಿಕ್ಷಣ ಯೋಜನೆಯಡಿ ಕೊಠಡಿ ಮಂಜೂರು ಮಾಡಿಸಿದ್ದೇನೆ. ಆದರೆ ನಮ್ಮ ಗ್ರಾಮದ ಕೆಲ ಕಿಡಿಗೇಡಿಗಳು ಜನರನ್ನು ದಿಕ್ಕು ತಪ್ಪಿಸಿ ಈ ಜಾಗದಲ್ಲಿ ನನ್ನ ಮಗನಿಗೆ ಆಸ್ಪತ್ರೆ ಕಟ್ಟಲು ಹೊರಟಿದ್ದಾರೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ ದಲಿತಪರ ಸಂಘಟನೆಗಳ ಮೂಲಕ ಧಮ್ಕಿ ಹಾಕಿಸುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ನಮ್ಮ ಸ್ವಂತಕ್ಕೆ ಆಸ್ಪತ್ರೆ ಕಟ್ಟಲು ಸಾಧ್ಯವಾ ಎಂದು ಪ್ರಶ್ನಿಸಿದರು.ಇತ್ತೀಚೆಗೆ ಕೆಲವರು ನನ್ನನ್ನು ದಲಿತ ವಿರೋಧಿ ಎಂದು ಸುಳ್ಳು ಸುಳ್ಳಾಗಿ ಬಿಂಬಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಆದರೆ ನಾನೇ ಸುಮಾರು 10 ಕೋಟಿ ಬೆಲೆ ಬಾಳುವ ನನ್ನ ಸ್ವಂತ ಜಮೀನನ್ನು ದಲಿತರಿಗೆ ಬಿಟ್ಟು ಕೊಟ್ಟಿದ್ದೇನೆಂದರು.
ಗ್ರಾಮದ ದಲಿತ ಮುಖಂಡ ಕೃಷ್ಣಪ್ಪ ಮಾತನಾಡಿ, ನಮ್ಮ ಗ್ರಾಮದ ಸರ್ವೆ ನಂಬರ್ 33 ರಲ್ಲಿ ದಲಿತರು ಗುಡಿಸಲು ಹಾಕಿಕೊಂಡಿದ್ದು, ಇವರು ನಮ್ಮ ಗ್ರಾಮದವರಲ್ಲ. ಇವರು ಬಡವರೂ ಅಲ್ಲ. ಎಲ್ಲಿಂದಲೋ ಬಂದವರು. ಅವರಿಗೆ ಆಸ್ತಿ, ಜಮೀನು, ಮನೆ ಎಲ್ಲಾ ಇದೆ. ಇದೀಗ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಸ್ಥಳವನ್ನು ಕಬಲಿಸಲು ಬಂದಿದ್ದಾರೆ ಎಂದು ಆರೋಪಿಸಿದರು.ಬಾಕ್ಸ್ ...........
ಜಾತಿ ಹೆಸರು ಬಳಸಿದರೆ ಕಾನೂನು ಹೋರಾಟಪಿಲ್ಲಗುಂಪೆ ಗ್ರಾಮದಲ್ಲಿ ನಾನು ಹಲವಾರು ವರ್ಷಗಳಿಂದ ಗ್ರಾಪಂ ಸದಸ್ಯನಾಗಿ ಅಭಿವೃದ್ಧಿ ಜೊತೆಗೆ ಜನಪರ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ಈಗ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಂಸದ ಬಚ್ಚೇಗೌಡರ ಬಳಿಗೆ ತೆರಳಿ ಗ್ರಾಮದ ಅಭಿವೃದ್ದಿ ದೃಷ್ಠಿಯಿಂದ ಆಂಗ್ಲಮಾಧ್ಯಮ ಶಾಲೆ ತೆರೆಯಲು ಮುಂದಾದರೆ ಕಟ್ಟಡ ಕಟ್ಟಲು ಅಡ್ಡಿಪಡಿಸುವ ಉದ್ದೇಶದಿಂದ ನನ್ನ ಹಾಗೂ ನನ್ನ ಜಾತಿ ಬ್ರಾಹ್ಮಣ ಸಮುದಾಯದ ಹೆಸರನ್ನು ಬಳಸಿ ಅವಮಾನ ಮಾಡುತ್ತಿದ್ದಾರೆ. ಆದ್ದರಿಂದ ಅಂತಹ ಕಿಡಿಗೇಡಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಪಂ ಸದಸ್ಯ ವಿಶ್ವನಾಥ್ ಎಚ್ಚರಿಸಿದರು.
ಫೋಟೋ: 24 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಪಿಲ್ಲಗುಂಪೆ ಗ್ರಾಮದಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಕೆಲವು ಕಿಡಿಗೇಡಿಗಳು ಅಡ್ಡಿಪಡಿಸುತ್ತಿರುವ ಹಿನ್ನೆಲೆ ಗ್ರಾಪಂ ಮಾಜಿ ಸದಸ್ಯ ವಿಶ್ವನಾಥ್ ಗ್ರಾಮಸ್ಥರ ಜೊತೆ ಮಾಧ್ಯಮ ಹೇಳಿಕೆಯನ್ನು ನೀಡಿ ಆಕ್ರೋಶ ವ್ಯಕ್ತಪಡಿಸಿದರು.