ಸಾರಾಂಶ
ಇಲ್ಲಿನ ಕನ್ನಡ ಸಂಘ ಬರೀ ಕನ್ನಡ ಪರ ಕೆಲಸಗಳಿಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆಯಲ್ಲಿಯೂ ತೊಡಗಿದೆ. ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬುದು ಕನ್ನಡ ಸಂಘದ ಅಧ್ಯಕ್ಷರ ಹಾಗೂ ನಾಗರಿಕರ ಬಹು ವರ್ಷಗಳಿಂದ ಕನಸಾಗಿತ್ತು, ಈ ಕನಸಿಗೆ ಈಗ ಜೀವ ಬಂದಿದೆ ವರ್ಷದೊಳಗೆ ಭವನ ತಲೆ ಎತ್ತಲಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ವರ್ಷದೊಳಗೆ ಪಟ್ಟಣದಲ್ಲಿ ಬೃಹತ್ ಕನ್ನಡ ಭವನ ನಿರ್ಮಾಣ ಮಾಡಿಯೇ ತೀರುವುದಾಗಿ ಹಾಗೂ ಮುಂದಿನ ವರ್ಷದಿಂದ ಭವನದಲ್ಲೆ ಎಲ್ಲ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.ಪಟ್ಟಣದ ಕುವೆಂಪು ವೃತ್ತದಲ್ಲ ಕನ್ನಡ ಸಂಘದಿಂದ ಹಮ್ಮಿಕೊಂಡಿದ್ದ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಂಘ ೧೨೫ ತಿಂಗಳಿಂದ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.ವರ್ಷದೊಳಗೆ ಕನ್ನಡಭವನ ನಿರ್ಮಾಣಇಲ್ಲಿನ ಕನ್ನಡ ಸಂಘ ಬರೀ ಕನ್ನಡ ಪರ ಕೆಲಸಗಳಿಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆಯಲ್ಲಿಯೂ ತೊಡಗಿದೆ. ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬುದು ಕನ್ನಡ ಸಂಘದ ಅಧ್ಯಕ್ಷರ ಹಾಗೂ ನಾಗರಿಕರ ಬಹು ವರ್ಷಗಳಿಂದ ಕನಸಾಗಿತ್ತು, ಈ ಕನಸಿಗೆ ಈಗ ಜೀವ ಬಂದಿದೆ ವರ್ಷದೊಳಗೆ ಭವನ ತಲೆ ಎತ್ತಲಿದೆ ಎಂದು ಭರವಸೆ ನೀಡಿದರು.
ಮೂರು ಭಾಷೆಗಳ ಸಂಗಮಇದರ ಜೊತೆ ರಂಗಮಂದಿರ ಸಹ ನಿರ್ಮಾಣ ಹಂತದಲ್ಲಿದೆ ಈ ಎರಡೂ ಭವನಗಳು ಪೂರ್ಣಗೊಂಡರೆ ಮುಂದೆ ರಸ್ತೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವ ಪ್ರಶ್ನೆ ಬರುವುದಿಲ್ಲ. ನಮ್ಮೂರಲ್ಲಿ ಮೂರು ಭಾಷೆಗಳ ಸಂಗಮವಿದ್ದರೂ ಸಹ ಭಾಷೆ ಬೆಳೆವಣಿಗೆಯಲ್ಲಿ ಅಷ್ಟರ ಮಟ್ಟಿಗೆ ಸಮಸ್ಯೆ ಇಲ್ಲ ಎಂದು ಅಭಿಪ್ರಾಯಪಟ್ಟರು.ಈ ವೇಳೆ ಕನ್ನಡ ಸಂಘದ ಅಧ್ಯಕ್ಷ ಡಾ.ಪಲ್ಲವಿಮಣಿ, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ್,ಸದಸ್ಯರಾದ ರಾಕೇಶಗೌಡ,ಕನ್ನಡ ಸಂಘದ ಕಾರ್ಯದರ್ಶಿ ಹೇಮಂತ್ ಕುಮಾರ್,ನೌಕರ ಸಂಘದ ಅಧ್ಯಕ್ಷ ರವಿಕುಮಾರ್ಇ ತರರು ಇದ್ದರು.