ಸಾರಾಂಶ
ಗ್ರಾಮಸ್ಥರಿಂದ ಚಿನ್ನ, ಬೆಳ್ಳಿ, ಹವಳ ಸೇರಿ ನವರತ್ನ ಸಲ್ಲಿಕೆ
ಹೊಳಲ್ಕೆರೆ: ಪಟ್ಟಣದ ಹೊರವಲಯದಲ್ಲಿ ನೆಲೆಸಿರುವ ಶ್ರೀ ಕುಕ್ಕಾಡೇಶ್ವರಿ ದೇವಾಲಯದ ಅವರಣದಲ್ಲಿ ಗ್ರಾಮ ದೇವತೆ ಶ್ರೀ ಕುಕ್ಕಾಡೇಶ್ವರಿ ದೇವಿಯ ನೂತನ ದೇವಸ್ದಾನ ಕಟ್ಟಡದ ನಿರ್ಮಾಣದ ಭೂಮಿಪೂಜೆ ಹಾಗೂ ಶಂಕುಸ್ಧಾಪನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.ದೇವತಾ ಪೀಠ ಪ್ರತಿಷ್ಠಾಪನಾ ಸ್ದಳಕ್ಕೆ ಚಿನ್ನ, ಬೆಳ್ಳಿ, ಹವಳ, ಮುತ್ತು, ಬಂಗಾರ ಸೇರಿ ನವರತ್ನಗಳನ್ನು ಸಲ್ಲಿಸಲಾಯಿತು. ದೇವಿಯ ಭೂಮಿ ಪೂಜೆ ಶಂಕುಸ್ದಾಪನಾ ಸ್ಧಳಕ್ಕೆ ಗಂಗಾಪೂಜಾಕಾರ್ಯವನ್ನು ಹೊಸದುರ್ಗ ಶ್ರೀ ಶಾಂತವೀರಸ್ವಾಮೀಜಿ ನೆರವೇರಿಸಿದರು. ರಾಯದುರ್ಗ ರಾಮುಮೂರ್ತಿ ಸ್ವಾಮೀಜಿ ಪೌರೋಹಿತ್ಯ ನೇತೃತ್ವದಲ್ಲಿ ಭೂಮಿಪೂಜಾ ಕಾರ್ಯವನ್ನು ನೆರವೇಸಿದರು. ಈ ಸಂದರ್ಭದಲ್ಲಿ ಶಾಸಕ ಡಾ ಎಂ.ಚಂದ್ರಪ್ಪ, ಚಿತ್ರದುರ್ಗದ ಸೇವಾಲಾಲ್ ಸ್ವಾಮೀಜಿ. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ದೇವಸ್ದಾನ ಸಮಿತಿ ಅಧ್ಯಕ್ಷ ಬಿ.ಎಸ್.ರುದ್ರಪ್ಪ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್ ಉಪಾಧ್ಯಕ್ಷೆ ಎಚ್.ಆರ್.ನಾಗರಾತ್ನ ವೇದಮೂರ್ತಿ, ಪುರಸಭೆ ಸದಸ್ಯರಾದ ಆರ್.ಎ.ಆಶೋಕ್, ಪೂರ್ಣಿಮಾ ಬಸವರಾಜ್, ಜಿಪಂ ಮಾಜಿ ಅಧ್ಯಕ್ಷ ಪಿ.ಅರ್.ಶಿವಕುಮಾರ್, ಮಾಜಿ ಶಾಸಕ ಎ.ವಿ.ಉಮಾಪತಿ, ಪುರಸಭೆ ಮುಖ್ಯಾಧಿಕಾರಿ ರೇಣಕಾ ದೇಸಾಯಿ, ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ರಾಮು, ವರದರಾಜ್, ಶಾರದಮ್ಮ, ಬಸವರಾಜ್, ಸಂಗನಗುಂಡಿ ಮಂಜುನಾಥ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ದರು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕುಕ್ಕಾಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಯಿತು. ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು ನಂತರ ಪ್ರಸಾದ ಪಡೆದರು.