ರಾತ್ರೋರಾತ್ರಿ 30ಕ್ಕೂ ಹೆಚ್ಚು ಅಕ್ರಮ ಮನೆಗಳ ನಿರ್ಮಾಣ

| Published : Feb 09 2024, 01:46 AM IST

ರಾತ್ರೋರಾತ್ರಿ 30ಕ್ಕೂ ಹೆಚ್ಚು ಅಕ್ರಮ ಮನೆಗಳ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಪಂ ವ್ಯಾಪ್ತಿಯ ಲಕ್ಷಣಪುರ ಗ್ರಾಮದಲ್ಲಿ 2.27 ಎಕರೆ ಗ್ರಾಮ ಠಾಣಾಗೆ ಸೇರಿದ ಸ್ಥಳದಲ್ಲಿ ಏಕಾಏಕಿ 30ಕ್ಕೂ ಹೆಚ್ಚು ಮನೆಗಳನ್ನು ಕಾನೂನುಬಾಹಿರವಾಗಿ ಒಂದೇ ರಾತ್ರಿಯಲ್ಲಿ ನಿರ್ಮಾಣಗೊಂಡಿವೆ.

ದಾಬಸ್‌ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಪಂ ವ್ಯಾಪ್ತಿಯ ಲಕ್ಷಣಪುರ ಗ್ರಾಮದಲ್ಲಿ 2.27 ಎಕರೆ ಗ್ರಾಮ ಠಾಣಾಗೆ ಸೇರಿದ ಸ್ಥಳದಲ್ಲಿ ಏಕಾಏಕಿ 30ಕ್ಕೂ ಹೆಚ್ಚು ಮನೆಗಳನ್ನು ಕಾನೂನುಬಾಹಿರವಾಗಿ ಒಂದೇ ರಾತ್ರಿಯಲ್ಲಿ ನಿರ್ಮಾಣಗೊಂಡಿವೆ.

ತ್ಯಾಮಗೊಂಡ್ಲು ಮತ್ತು ಸೋಂಪುರ ಹೋಬಳಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶದಿಂದ ಸುತ್ತಮುತ್ತಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದ್ದರಿಂದ ಸರ್ಕಾರಿ ಜಾಗಕ್ಕೂ ಕಿತ್ತಾಟ ನಡೆಯುತ್ತಿವೆ. ಇದರ ಮಧ್ಯೆ ಸ್ಥಳೀಯ ರಾಜಕೀಯ ನಾಯಕರು ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಲು ಕಟ್ಟಡ ಸಾಮಗ್ರಿಗಳನ್ನು ನೀಡಿ ಮನೆ ನಿರ್ಮಿಸಿಕೊಳ್ಳುವಂತೆ ಮಾಡಿರುವ ಸುದ್ದಿಗಳೂ ಕೇಳಿ ಬರುತ್ತಿದೆ.

ಸ್ಥಳಕ್ಕೆ ಬಾರದ ಅಧಿಕಾರಿಗಳು:

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಯಾರಿಗೂ ಹಂಚಿಕೆಯಾಗದಿರುವ ಗ್ರಾಮಠಾಣಾ ಪ್ರದೇಶದಲ್ಲಿ ಸ್ಥಳೀಯ ರಾಜಕೀಯ ನಾಯಕರ ಪ್ರಭಾವದಿಂದ ಒಂದೇ ದಿನದಲ್ಲಿ ಮನೆಗಳನ್ನು ನಿರ್ಮಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ತಂದರೂ ಸ್ಥಳಕ್ಕೆ ಬಾರದೆ, ಸರ್ಕಾರಿ ಜಾಗವನ್ನು ಉಳಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳು ಸ್ಥಳೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆಂಬ ಅನುಮಾನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ದೂರು ನೀಡಿದರೂ ಕ್ರಮವಿಲ್ಲ:

ಸರ್ಕಾರಿ ಗ್ರಾಮಠಾಣಾ ಅಕ್ಕಪಕ್ಕದಲ್ಲಿರುವ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದಾರೆ. ಬೀರಗೊಂಡನಹಳ್ಳಿ ಗ್ರಾಮಸ್ಥರಿಗೂ ಈ ಜಾಗದಲ್ಲಿ ನಿವೇಶನ ಹಂಚಿಕೆಯಾಗಬೇಕಿತ್ತು. ಅದರೆ ಸ್ಥಳೀಯ ನಾಯಕರ ಒತ್ತಡದಿಂದ ಒಂದೇ ಗ್ರಾಮದವರು ಮನೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಪಿಡರೊಓ ಹಾಗೂ ಇಒ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬೀರಗೊಂಡನಹಳ್ಳಿ ಗ್ರಾಮಸ್ಥರು.ಕೋಟ್.......

ಮಣ್ಣೆ ಗ್ರಾಪಂ ವ್ಯಾಪ್ತಿಯಲ್ಲಿನ ಲಕ್ಷ್ಮಣಪುರದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯರು ಏಕಾಏಕಿ ಮನೆಗಳು ನಿರ್ಮಿಸುತ್ತಿರುವ ಬಗ್ಗೆ ದೂರು ಬಂದಿದ್ದು ತ್ಯಾಮಗೊಂಡ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಗ್ರಾಮಠಾಣ ಭೂಪ್ರದೇಶವನ್ನು ಗುರುತಿಸಿಕೊಡುವಂತೆ ತಾಲೂಕು ಭೂಮಾಪನ ಇಲಾಖೆಗೆ ಪತ್ರ ಬರೆದಿದ್ದೇನೆ. ಅಲ್ಲಿ ಅಕ್ರಮ ಮನೆಗಳು ನಿರ್ಮಿಸುತ್ತಿರುವ ವಿಚಾರವನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.

-ಚಿರಂಜೀವಿ, ಪಿಡಿಒ ಮಣ್ಣೆ ಗ್ರಾಪಂ

ಕೋಟ್.............

ಲಕ್ಷಣಪುರದ ಗ್ರಾಮ ಠಾಣಾ ಜಾಗದಲ್ಲಿ ಪಿತ್ರಾರ್ಜಿತ ಆಸ್ತಿಯಿದ್ದು, ನಮ್ಮ ಜಾಗ ಗುರುತಿಸಿಕೊಡುವಂತೆ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದೇವೆ, ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಂದಾಯ ಭೂಮಿಯಲ್ಲಿಯೂ ಅಕ್ರಮ ಮನೆಗಳು ನಿರ್ಮಿಸುತ್ತಿದ್ದಾರೆ. ಈ ವಿಚಾರವಾಗಿ ಮಣ್ಣೆ ಗ್ರಾಪಂ ಪಿಡಿಒ, ಜಿಪಂ ಸಿಇಒ ಅವರಿಗೂ ದೂರು ನೀಡಿದ್ದೇವೆ, ನಮ್ಮ ದಾಖಲೆಯಂತೆ ನಮ್ಮ ಜಾಗ ಗುರುತಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ.

- ಡಿ.ಕೇಶವನ್, ಸ್ಥಳೀಯ ನಿವಾಸಿಪೋಟೋ 4 ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಪಂ ವ್ಯಾಪ್ತಿಯಲ್ಲಿನ ಲಕ್ಷಣಪುರದ ಸರ್ಕಾರಿ ಗ್ರಾಮಠಾಣಾ ಜಾಗದಲ್ಲಿ ಏಕಾಏಕಿ ನಿರ್ಮಿಸುತ್ತಿರುವ ಮನೆಗಳು.