ಮೂಲಭೂತ ಸೌಲಭ್ಯವುಳ್ಳ ಶಾಲಾ ಕಟ್ಟಡ ನಿರ್ಮಾಣ

| Published : Mar 14 2024, 02:06 AM IST

ಸಾರಾಂಶ

ರಾಯಬಾಗ: ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಒಳ್ಳೆ ಗುಣಮಟ್ಟದ ಶಿಕ್ಷಣ ದೊರೆಯಲು ಎಲ್ಲ ಮೂಲಭೂತ ಸೌಲಭ್ಯವುಳ್ಳ ಶಾಲೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು. ತಾಲೂಕಿನ ಕೆಂಪಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಲೋಕೋಪಯೋಗಿ ಇಲಾಖೆಯ ನಬಾರ್ಡ್‌ ಆರ್‌ಐಡಿಎಫ್‌ ಯೋಜನೆಯಡಿ ಮಂಜೂರಾದ ₹1.55 ಕೋಟಿ ಅನುದಾನದಲ್ಲಿ 10 ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನೂತನ ಶಾಲೆ ಕಟ್ಟಡ ಸಂಕೀರ್ಣದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಮುಖ್ಯೋಪಾಧ್ಯಾಯರ ಕೊಠಡಿ ಸೇರಿದಂತೆ ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು. ಇಲ್ಲಿನ ವಿದ್ಯಾರ್ಥಿಗಳು ಒಳ್ಳೆ ಶಿಕ್ಷಣ ಪಡೆದು ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕು.

ಕನ್ನಡಪ್ರಭ ವಾರ್ತೆ ರಾಯಬಾಗ

ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಒಳ್ಳೆ ಗುಣಮಟ್ಟದ ಶಿಕ್ಷಣ ದೊರೆಯಲು ಎಲ್ಲ ಮೂಲಭೂತ ಸೌಲಭ್ಯವುಳ್ಳ ಶಾಲೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಕೆಂಪಟ್ಟಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಲೋಕೋಪಯೋಗಿ ಇಲಾಖೆಯ ನಬಾರ್ಡ್‌ ಆರ್‌ಐಡಿಎಫ್‌ ಯೋಜನೆಯಡಿ ಮಂಜೂರಾದ ₹1.55 ಕೋಟಿ ಅನುದಾನದಲ್ಲಿ 10 ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನೂತನ ಶಾಲೆ ಕಟ್ಟಡ ಸಂಕೀರ್ಣದಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಮುಖ್ಯೋಪಾಧ್ಯಾಯರ ಕೊಠಡಿ ಸೇರಿದಂತೆ ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು. ಇಲ್ಲಿನ ವಿದ್ಯಾರ್ಥಿಗಳು ಒಳ್ಳೆ ಶಿಕ್ಷಣ ಪಡೆದು ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕು. ರಾಯಬಾಗ ಮತಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆ ಎಇ ರಾಮಚಂದ್ರ ಅವತಾಡೆ, ಗ್ರಾಪಂ ಅಧ್ಯಕ್ಷೆ ಸರೋಜಿನಿ ಖಿಲಾರೆ, ಉಪಾಧ್ಯಕ್ಷೆ ಅಕ್ಕವ್ವ ಕಾಂಬಳೆ, ಶಿವಪ್ಪ ನಾಯಿಕ, ಮಹಾದೇವ ನಾಯಿಕ, ಧೋಂಡಿ ಸಬಕಾಳೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಮಹಾದೇವಿ ಭಜಂತ್ರಿ, ಹನುಮಂತ ಪವಾಡಿ, ಭೈರು ನಾಯಿಕ, ಸಂಜು ನಾಯಿಕ, ಕೃಷ್ಣಾ ಕುಂದರಗಿ, ರಾನಪ್ಪ ಭಜಂತ್ರಿ, ಬಿ.ಎಸ್.ಕರಿಭಿಮಗೋಳ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.