ಸಾರಾಂಶ
ದಾಬಸ್‍ಪೇಟೆ: ಮಹದೇವಪುರದ ರಾಷ್ಟ್ರೀಯ ಹೆದ್ದಾರಿ-75ರ ಮೋಟಗೊಂಡನಹಳ್ಳಿವರೆಗಿನ ರಸ್ತೆಯನ್ನು 10 ಕೋಟಿ ರು. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಮಹದೇವಪುರ ಗ್ರಾಮದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಮನವಿ ಸ್ವೀಕರಿಸಿ, ಬಡಾವಣೆಯ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋಟಗೊಂಡನಹಳ್ಳಿ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಆಗಲಿದೆ. ಮಹದೇವಪುರ ಗ್ರಾಮದ ಎರಡು ರಸ್ತೆಗಳ ಅಭಿವೃದ್ಧಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಮನವಿಗಳಿಗೆ ಸ್ಪಂದನೆ:
"ಶಾಸಕರ ನಡೆ ಹಳ್ಳಿ ಕಡೆ " ಕಾರ್ಯಕ್ರಮದ ಪ್ರಯುಕ್ತ ನಕಾಶೆ ರಸ್ತೆ ಒತ್ತುವರಿ, ಇ-ಖಾತೆ, ಪೌತಿ ಖಾತೆ, ಪೋಡಿ, ಮನೆಗಳು, ಗೃಹಲಕ್ಷ್ಮಿ, ರಸ್ತೆ, ಚರಂಡಿ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ಮನವಿ ಸಲ್ಲಿಸಿದ್ದು, ಶಾಸಕರು ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಿ, ಇತ್ಯರ್ಥವಾದ ಬಳಿಕ ಮಾಹಿತಿ ನೀಡುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಯಂಟಗಾನಹಳ್ಳಿ ಗ್ರಾಪಂ ಸದಸ್ಯ ಮಹದೇವಪುರ ಚಿಕ್ಕಣ್ಣ, ಎನ್‍ಪಿಎ ಅಧ್ಯಕ್ಷ ನಾರಾಯಣಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಕಾಂಗ್ರೆಸ್ ಮುಖಂಡರಾದ ಎಂ.ಕೆ.ನಾಗರಾಜು, ಸಿಎಂ ಗೌಡ, ಚಿಕ್ಕಹನುಮೇಗೌಡ, ಭೂಸಂದ್ರ ಚಿಕ್ಕಣ್ಣ, ವಕೀಲ ರವಿಕುಮಾರ್, ಹೊನ್ನೇಗೌಡ, ನಾಗರತ್ನಮ್ಮ ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಚಿಕ್ಕಣ್ಣ ಉಪಾಧ್ಯಕ್ಷ ಹೊನ್ನಲಕ್ಷಮ್ಮ ಸದಸ್ಯರಾದ ವೆಂಕಟೇಶ್, ಶ್ರೀನಿವಾಸ್, ಲಕ್ಷ್ಮಮ್ಮ, ವಿರುಪಾಕ್ಷಯ್ಯ, ಮಹಂತೇಶ್, ಮಂಜುನಾಥಯ್ಯ, ಮುಖಂಡರಾದ ಪಟೇಲ್ ವೆಂಕಟೇಶ್, ನಟರಾಜು, ಬೆಟ್ಟಸ್ವಾಮಿ, ಹುಚ್ಚಹನುಮೇಗೌಡ, ಚಿಕ್ಕೇಗೌಡ ಮತ್ತಿತರರಿದ್ದರು.
ಪೋಟೋ 1 :ಮಹದೇವಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಎನ್.ಶ್ರೀನಿವಾಸ್ ಚಾಲನೆ ನೀಡಿದರು.