ಆಟಿಕೆ ತಯಾರಿಕಾ ಘಟಕ: ಅಫ್ಘಾನಿಸ್ಥಾನದ ಕೌನ್ಸಿಲ್ ಭೇಟಿ

| Published : Feb 28 2024, 02:31 AM IST

ಆಟಿಕೆ ತಯಾರಿಕಾ ಘಟಕ: ಅಫ್ಘಾನಿಸ್ಥಾನದ ಕೌನ್ಸಿಲ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ಘಾನಿಸ್ಥಾನದ ಕೌನ್ಸಿಲ್ ಜನರಲ್ ಝಕಿಯಾ ವಾರ್ದಕ್ ಚನ್ನಪಟ್ಟಣದ ಆಟಿಕೆಗಳ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಚನ್ನಪಟ್ಟಣ: ಅಪ್ಘಾನಿಸ್ಥಾನದ ಕೌನ್ಸಿಲ್ ಜನರಲ್ ಝಕಿಯಾ ವಾರ್ದಕ್ ಚನ್ನಪಟ್ಟಣದ ಆಟಿಕೆಗಳ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಮಂಗಳವಾರ ತಾಲೂಕಿನ ಕರಿಯಪ್ಪನದೊಡ್ಡಿ, ಪಟ್ಟಣದ ಮೆಹದಿನಗರಕ್ಕೆ ಭೇಟಿ ನೀಡಿ ಆಟಿಕೆ ತಯಾರಿಕಾ ಘಟಕಗಳನ್ನು ವೀಕ್ಷಿಸಿ ಕುಶಲಕರ್ಮಿಗಳ ಜತೆಗೆ ಸಂವಾದ ನಡೆಸಿದರು. ಇದೇ ವೇಳೆ ಅವರು ಆಟಿಕೆ ತಯಾರಿಸುವ ವಿಧಾನವನ್ನು ಕುತೂಹಲದಿಂದ ವೀಕ್ಷಿಸಿ, ಕುಶಲಕರ್ಮಿಗಳಿಂದ ಮಾಹಿತಿ ಪಡೆದುಕೊಂಡರು.

ಭಯೋತ್ಪಾದಕ ದಾಳಿಯಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದ ಅಫ್ಘನ್ ಮಕ್ಕಳು ಡ್ರಗ್ಸ್ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಯುನೈಟೆಡ್ ನೇಷನ್ ಆಫೀಸ್ ಆಫ್ ಡ್ರಗ್ಸ್ ಅಂಡ್ ಕ್ರೈಂ (ಯುಎನ್‌ಒಡಿಸಿ) ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ರಾಜ್ಯ ಸಂಜೀವಿನಿ ಗ್ರಾಮೀಣ ಜೀವನೋಪಾಯ ಯೋಜನೆಯ ಮೂಲಕ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ತಯಾರು ಮಾಡಿದ್ದ ಮರದ ಆಟಿಕೆಗಳನ್ನು 2023ರಲ್ಲಿ ಕಳಿಸಿಕೊಟ್ಟಿತ್ತು. ಇದು ಅಲ್ಲಿನ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ನೆರವಾಗಿತ್ತು.

ಇದರಿಂದ ಪ್ರೇರಣೆಗೊಂಡ ಅಲ್ಲಿನ ಸರ್ಕಾರ ಮಕ್ಕಳಿಗೆ ಮತ್ತಷ್ಟು ಆಟಿಕೆಗಳನ್ನು ಖರೀದಿಸುವ ಉದ್ದೇಶದೊಂದಿಗೆ ಝಕಿಯಾ ವಾರ್ದಕ್ ಅವರನ್ನು ಬೊಂಬೆನಾಡಿಗೆ ಕಳುಹಿಸಿಕೊಟ್ಟಿದ್ದು, ಅವರು ಆಟಿಕೆ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಆಪ್ಘಾನಿಸ್ಥಾನದ ಕೌನ್ಸಿಲ್ ಜನರಲ್ ಝಕೀಯ ವಾರ್ದಕ್ ಚನ್ನಪಟ್ಟಣದ ಆಟಿಕೆಗಳ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.