ಸಾರಾಂಶ
ಅಂತಾರಾಷ್ಟ್ರೀಯ ತೈಲ ಬೆಲೆ ಕಂಪನಿಗಳು ಪ್ರತಿ ದಿನ ಬೆಳಗ್ಗೆ 6ಕ್ಕೆ ಹೊಸ ಭಾರತೀಯ ತೈಲಬೆಲೆಗಳನ್ನು ಬಿಡುಗಡೆ ಮಾಡುತ್ತವೆ, ಇಲ್ಲಿ ಯಾವುದೇ ಏರಿಕೆಗಳು ಇಲ್ಲದಿದ್ದರೂ ಕೂಡ ರಾಜ್ಯ ಸರ್ಕಾರ ಏಕಾಏಕಿ ಬೆಲೆ ಏರಿಸುವ ಮೂಲಕ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಇಂಧನ ಬೆಲೆ ಏರಿಕೆಯನ್ನು ನಗರದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಖಂಡಿಸಿದೆ.ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಗರ ಘಟಕ ವತಿಯಿಂದ ಚಾಮುಂಡಿಪುರಂನಲ್ಲಿ ಸಭೆ ನಡೆಸಿ ಇಂಧನ ಬೆಲೆಯನ್ನು ಇಳಿಸಲು ರಾಜ್ಯಪಾಲರು ಮಧ್ಯ ಪ್ರವೇಶಿಸುವಂತೆ ಕೋರಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಗ್ರಾಹಕ ಪಂಚಾಯತ್ ನಗರ ಘಟಕದ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್ ಮಾತನಾಡಿ, ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ 3 ರು, ಡೀಸೆಲ್ 3.50 ರು. ಹೆಚ್ಚಳ ಮೂಲಕ ಗ್ಯಾರಂಟಿ ಬರೆ ನೀಡಿದೆ.ಅಂತಾರಾಷ್ಟ್ರೀಯ ತೈಲ ಬೆಲೆ ಕಂಪನಿಗಳು ಪ್ರತಿ ದಿನ ಬೆಳಗ್ಗೆ 6ಕ್ಕೆ ಹೊಸ ಭಾರತೀಯ ತೈಲಬೆಲೆಗಳನ್ನು ಬಿಡುಗಡೆ ಮಾಡುತ್ತವೆ, ಇಲ್ಲಿ ಯಾವುದೇ ಏರಿಕೆಗಳು ಇಲ್ಲದಿದ್ದರೂ ಕೂಡ ರಾಜ್ಯ ಸರ್ಕಾರ ಏಕಾಏಕಿ ಬೆಲೆ ಏರಿಸುವ ಮೂಲಕ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಇನ್ನೊಂದು ಕಡೆ ಗ್ರಾಹಕರ ಜೇಬಿಗೆ ಕತ್ತರಿ ಹಾಕೋ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿದ್ದು, ಇದು ಅತ್ಯಂತ ಅವೈಜ್ಞಾನಿಕವಾಗಿದೆ. ಗ್ರಾಹಕರು ಬೀದಿಗಿಳಿಯುವ ಮುಂಚೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಘಟಕದ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್, ಹಿರಿಯ ವಕೀಲ ರವೀಂದ್ರ, ಅಪೂರ್ವ ಸುರೇಶ್, ಸಚಿನ್ ನಾಯಕ್, ಜಯರಾಮ್, ದಯಾನಂದ್, ಸುಚಿತ್ರ, ಆದರ್ಶ್, ಚಕ್ರಪಾಣಿ, ಶ್ರೀನಿವಾಸ್, ಮೋಹನ್ ಕುಮಾರ್ ಇದ್ದರು.