ಆಟೋಗೆ ಮಾಡಿಕೆರೆ ಕ್ರಾಸ್ ಕಡೆಯಿಂದ ಬಂದ ಕಂಟೈನರ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದಿಂದ ಬಂದು ಆಟೋಗೆ ಡಿಕ್ಕಿ ಹೊಡೆಯಿತು.

ಚಿಂತಾಮಣಿ: ಆಟೋಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೂರಗಮಾಕಲಹಳ್ಳಿ ಜ್ಯೋತಿ ಶಾಲೆಯ ಬಳಿ ನಡೆದಿರುವುದಾಗಿ ವರದಿಯಾಗಿದೆ.

ಚಿಂತಾಮಣಿಯಿಂದ ಬದನೆಕಾಯಿ ತುಂಬಿಸಿಕೊಂಡು ಶ್ರೀನಿವಾಸಪುರಕ್ಕೆ ಹೋಗುತ್ತಿದ್ದ ಆಟೋಗೆ ಮಾಡಿಕೆರೆ ಕ್ರಾಸ್ ಕಡೆಯಿಂದ ಬಂದ ಕಂಟೈನರ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದಿಂದ ಬಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಆಟೋ ಚಾಲಕ ಶಿಂಗಸಂದ್ರ ಎಸ್.ಬಿ.ಪ್ರಭಾಕರ್‌ರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಅಸ್ಪತ್ರೆಗೆ ದಾಖಲಿಸಲಾಗಿದೆ, ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.