ಕುಣಿಗಲ್ ಪಟ್ಟಣದ ಹಲವಾರು ವಾರ್ಡ್ ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಇದಕ್ಕೆ ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯತೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಕೆ ಎಲ್ ಹರೀಶ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಪಟ್ಟಣದ ಹಲವಾರು ವಾರ್ಡ್ ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಇದಕ್ಕೆ ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯತೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಕೆ ಎಲ್ ಹರೀಶ್ ಆರೋಪಿಸಿದ್ದಾರೆ. ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಸರ್ಕಾರ ಪೈಪ್ ಲೈನ್ ಮೂಲಕ ಶುದ್ಧವಾದ ಕುಡಿಯುವ ನೀರನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಇದರ ಜವಾಬ್ದಾರಿಯನ್ನು ಹೊಂದಿರುವ ಕುಣಿಗಲ್ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಸಮಸ್ಯೆಯಾಗಿದೆ.ಈ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಕೂಡ ಕ್ರಮವಹಿಸುತ್ತಿಲ್ಲ ಕೆಲವು ಸಂದರ್ಭಗಳಲ್ಲಿ ದುರಸ್ತಿ ಮಾಡಿದ್ದೇವೆ ಎಂದು ಸಬೂಬ್ ಹೇಳುವ ಅಧಿಕಾರಿಗಳು ಇಂದಿಗೂ ಕೂಡ ವಾರ್ಡ್ ನಂಬರ್ 21-22 ಹಾಗೂ ಕೆಂಪೇಗೌಡ ರಸ್ತೆ ಕುಣಿಗಲ್ ಕೋಟೆ ಸಂತೆ ಪ್ರದೇಶ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂದು ದೂರಿದ್ದಾರೆ.