ತುಮ್ಕೋಸ್‌ನಿಂದ ಆಸ್ಪತ್ರೆ ಸ್ಥಾಪನೆ, ಜ್ಯುಯೆಲರಿ, ರೇಷ್ಮೆ ಸೀರೆಗಳ ಮಾರಾಟಕ್ಕೆ ಕೇಂದ್ರಕ್ಕೆ ಚಿಂತನೆ

| Published : Dec 28 2024, 12:45 AM IST

ತುಮ್ಕೋಸ್‌ನಿಂದ ಆಸ್ಪತ್ರೆ ಸ್ಥಾಪನೆ, ಜ್ಯುಯೆಲರಿ, ರೇಷ್ಮೆ ಸೀರೆಗಳ ಮಾರಾಟಕ್ಕೆ ಕೇಂದ್ರಕ್ಕೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿರುವ ತುಮ್ಕೋಸ್‌ ಸಂಸ್ಥೆ ಅಡಕೆ ಬೆಳೆಗಾರ ರೈತರ ಜೀವನಾಡಿಯಾಗಿದೆ. ಇಂತಹ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಮುಂಬರುವ ಚುನಾವಣೆಯಲ್ಲಿ ನನ್ನ ಪರವಾಗಿ ಇರುವಂತಹ ಟೀಂಗೆ ಮತಗಳನ್ನು ನೀಡಿ ಜಯಗಳಿಸಲು ಸಹಕರಿಸಬೇಕು ಎಂದು ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಪೂರ್ವಭಾವಿ ಸಭೆಯಲ್ಲಿ ಮಾಜಿ ಅಧ್ಯಕ್ಷ ಶಿವಕುಮಾರ ಹೇಳಿಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನಲ್ಲಿರುವ ತುಮ್ಕೋಸ್‌ ಸಂಸ್ಥೆ ಅಡಕೆ ಬೆಳೆಗಾರ ರೈತರ ಜೀವನಾಡಿಯಾಗಿದೆ. ಇಂತಹ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಮುಂಬರುವ ಚುನಾವಣೆಯಲ್ಲಿ ನನ್ನ ಪರವಾಗಿ ಇರುವಂತಹ ಟೀಂಗೆ ಮತಗಳನ್ನು ನೀಡಿ ಜಯಗಳಿಸಲು ಸಹಕರಿಸಬೇಕು ಎಂದು ಸಂಸ್ಥೆ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಹೇಳಿದರು.

ಶುಕ್ರವಾರ ಪಟ್ಟಣದ ಹೊರವಲಯದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ತುಮ್ಕೋಸ್‌ ಚುನಾವಣೆಯ ಪೂರ್ವಭಾವಿ ಸಮಾಲೋಚನಾ ಸಭೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ತುಮ್ಕೋಸ್‌ ಸಂಸ್ಥೆಯಿಂದ ಸೂಪರ್ ಮಾರ್ಕೆಟ್‌ ಆರಂಭಿಸಲಾಗಿದೆ. ಪ್ರಸ್ತುತ ಕಿರಾಣಿ ಅಂಗಡಿ, ಬಟ್ಟೆ ಅಂಗಡಿ ಮಾತ್ರ ಇದೆ. ಇದನ್ನು ಉನ್ನತ ಮಟ್ಟಕ್ಕೇರಿಸುವ ಸಲುವಾಗಿ ಬೆಳ್ಳಿ-ಬಂಗಾರದ ಅಂಗಡಿ, ರೇಶ್ಮೆ ಸೀರೆಗಳ ಮಾರಾಟ ಕೇಂದ್ರ, ಆಸ್ಪತ್ರೆ ಆರಂಭದ ಆಲೋಚನೆಗಳಿವೆ. ಫೆಬ್ರವರಿ ತಿಂಗಳಿನಲ್ಲಿ ತುಮ್ಕೋಸ್‌ ಆಡಳಿತ ಮಂಡಳಿ ಚುನಾವಣೆಯಲ್ಲಿ ನನ್ನ ಟೀಂನ ನಿರ್ದೇಶಕರಿಗೆ ಮತ ನೀಡಬೇಕು. ಆಗ ಅಭಿವೃದ್ಧಿಪಡಿಸಲು ಸಾಧ್ಯವಾಗಬಹುದು ಎಂದರು.

ಸಭೆಯಲ್ಲಿ ಗುಳ್ಳಹಳ್ಳಿ ಮಲ್ಲಿಕಾರ್ಜುನಪ್ಪ, ಟಿ.ವಿ.ರಾಜು ಪಟೇಲ್. ಜಿ.ವಿ.ಶಿವಕುಮಾರ್ ಅವರು ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿ ಕುರಿತು ಮಾತನಾಡಿದರು.

ನಿರ್ದೇಶಕರಾದ ಟಿ.ವಿ.ರಾಜುಪಟೇಲ್, ಜಿ.ಬಿ.ಶಿವಕುಮಾರ್, ಚನ್ನಬಸಪ್ಪ, ಮಂಜುಳಾ ಟಿ.ವಿ.ರಾಜು, ಎಂ.ಎನ್. ಪುಪ್ಪಾವತಿ, ವಿಜಯಗೌಡ, ಪಾಂಡೋಮಟ್ಟಿ ಜಗದೀಶ್, ರಾಜಣ್ಣ, ಸಂಸ್ಥೆ ಮಾಜಿ ನಿರ್ದೇಶಕಿ ಶೋಭಾ, ಶಶಿಕಲಾ ಮೂರ್ತಿ, ಮಾಡಾಳು ಲೋಕಣ್ಣ, ಸದಸ್ಯರು ಹಾಜರಿದ್ದರು.

- - - -27ಕೆಸಿಎನ್‌ಜಿ3.ಜೆಪಿಜಿ:

ಸಭೆಯನ್ನು ತುಮ್ಕೋಸ್‌ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಉದ್ಘಾಟಿಸಿದರು.