ಸಾರಾಂಶ
ಗ್ರಾಮೀಣ ಪ್ರದೇಶಗಳ ಕುಸ್ತಿ ಕಬಡ್ಡಿ ಪಂದ್ಯಾಟಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡೋಣ.
ಹಗರಿಬೊಮ್ಮನಹಳ್ಳಿ: ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಕೊಂಡರೆ ಕ್ರಿಯಾಶೀಲರಾಗಿ ಇರುತ್ತೇವೆ ಎಂದು ಕಾಂಗ್ರೆಸ್ ಯುವ ಮುಖಂಡ ರೋಗಾಣಿ ಪ್ರಕಾಶ್ ಹೇಳಿದರು.
ತಾಲೂಕಿನ ಆನೇಕಲ್ ತಾಂಡಾದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶಗಳ ಕುಸ್ತಿ ಕಬಡ್ಡಿ ಪಂದ್ಯಾಟಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡೋಣ. ಈ ಜಂಜಾಟದ ಬದುಕಿನಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಕ್ರಿಕೆಟ್ ಆಟಗಾರರಿಗೆ ಒದಗುವ ಗೌರವ ಮತ್ತು ನೆರವು ದೇಶಿಕ್ರೀಡೆಗಳ ಆಟಗಾರರಿಗೂ ಕಲ್ಪಿಸಬೇಕು. ಗ್ರಾಮೀಣ ಪ್ರತಿಭಾವಂತರಿಗೆ ವೈಯಕ್ತಿಕ ಮೊತ್ತದಲ್ಲಿ ತರಬೇತಿ ಮತ್ತು ಪ್ರೋತ್ಸಾಹಧನ ವಿತರಿಸಲಾಗುವುದು ಎಂದರು.
ಕಬಡ್ಡಿ ಪಂದ್ಯಾವಳಿಗಳಲ್ಲಿ ಒಟ್ಟು 12 ಕ್ಕೂ ಹೆಚ್ಚು ತಂಡಗಳ ಅಟಗಾರರು ರೋಚಕ ಪ್ರದರ್ಶನ ನೀಡಿ ಗಮನ ಸೆಳೆದರು. ಗ್ರಾಮಸ್ಥರು ಚಪ್ಪಾಳೆ, ಕೇಕೆ ಹಾಕಿ ಪರಸ್ಪರ ತಂಡಗಳನ್ನು ಹುರಿದುಂಬಿಸಿದರು.ವಿಜೇತರು:
ಪ್ರಥಮ ವಿಜೇತರಾದ ಆನೇಕಲ್ ತಾಂಡಾದ ಹಂಟರ್ಸ್ ತಂಡಕ್ಕೆ ರೋಗಾಣಿ ಪ್ರಕಾಶ್ ₹11,111 ನಗದು ಬಹುಮಾನ ಮತ್ತು ಆಕರ್ಷಕ ಕಪ್ ವಿತರಿಸಿದರು. ಉಪ ವಿಜೇತರಾದ ವಿಜಯ ಸ್ಫೂರ್ತಿ ತಂಡಕ್ಕೆ ಗ್ರಾಪಂ ಉಪಾಧ್ಯಕ್ಷ ಪಂಪ ನಾಯ್ಕ ₹5,555 ಬಹುಮಾನ ವಿತರಿಸಿದರು. ಮುಖಂಡರಾದ ಪಾಂಡು ನಾಯ್ಕ, ಬಾವಿಷ್ಯ ನಾಯ್ಕ, ಪಂಪಾ ನಾಯ್ಕ, ಓಬ್ಯ ನಾಯ್ಕ, ಸುಬ್ರಮಣ್ಯ, ಎಲ್.ಆರ್. ಮಂಜುನಾಥ, ಲಿಂಗ್ಯ ನಾಯ್ಕ, ಗೌಡ್ರ ನಾರಾಯಣ ನಾಯ್ಕ, ಬಣಕಾರ ಗೋಪಾಲ ನಾಯ್ಕ, ಬಿ.ಸೇವಾನಾಯ್ಕ ಇದ್ದರು.;Resize=(128,128))
;Resize=(128,128))