ಸತತ ಅಧ್ಯಯನ,ಕ್ರಿಯಾಶೀಲ ಗುಣ ಅಳವಡಿಸಿಕೊಳ್ಳಿ: ಡಾ.ಪಿ.ಬಿ. ತೆಗ್ಗಿಹಳ್ಳಿ

| Published : Sep 17 2024, 12:54 AM IST

ಸಾರಾಂಶ

ವಿದ್ಯಾರ್ಥಿಗಳು ಬದುಕಿನಲ್ಲಿ ಸತತ ಅಧ್ಯಯನ ಪರಿಶ್ರಮ ಮತ್ತು ಕ್ರಿಯಾಶೀಲ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕೆಂದು ಪ್ರಾಚಾರ್ಯ ಡಾ.ಪಿ.ಬಿ. ತೆಗ್ಗಿಹಳ್ಳಿ ಹೇಳದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ವಿದ್ಯಾರ್ಥಿಗಳು ಬದುಕಿನಲ್ಲಿ ಸತತ ಅಧ್ಯಯನ ಪರಿಶ್ರಮ ಮತ್ತು ಕ್ರಿಯಾಶೀಲ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕೆಂದು ಪ್ರಾಚಾರ್ಯ ಡಾ.ಪಿ.ಬಿ. ತೆಗ್ಗಿಹಳ್ಳಿ ಹೇಳದರು.ಪಟ್ಟಣದ ಸಿ.ಎಸ್. ಬೆಂಬಳಗಿ ಕಲಾ, ಶಾ.ಎಂ.ಆರ್. ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್. ರಾಠಿ ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಬಿಎ, ಬಿಕಾಂ. ಮತ್ತು ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ದಿಶೀಕರಣ ಶಿಬಿರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಮ್ಮ ಮಹಾವಿದ್ಯಾಲಯದಲ್ಲಿರುವ ಸಕಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಘಟಕಗಳ ಕಾರ್ಯಕ್ರಮಾಧಿಕಾರಿಗಳು ಮಹಾವಿದ್ಯಾಲಯದಲ್ಲಿರುವ ಎಲ್ಲ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಡಾ.ಜಿ.ಬಿ.ಮುರಗೋಡ, ಎ.ಡಿ. ಕಾಮತ್, ಎಸ್.ಬಿ. ಹಲ್ಯಾಳ, ಎಂ.ಎನ್. ಭಜಂತ್ರಿ ಹಾಗೂ ಎನ್.ಸಿ.ಸಿ. ಅಧಿಕಾರಿ ಡಾ. ಎಂ.ಎನ್. ಶಿದ್ಧಗಿರಿ, ಎನ್ನೆಸ್ಸೆಸ್ ಕಾರ್ಯಾಕ್ರಮಾಧಿಕಾರಿ ಜಿ.ಡಿ. ರಾಠೋಡ, ಯೂತ್‌ ರೆಡ್ ಕ್ರಾಸ್ ಘಟಕದ ಸಂಯೋಜಕ ಎಸ್.ಎ. ಅಥಣಿ ಮತ್ತು ರೋವರ್ ಮತ್ತು ರೇಂಜರ್ ಘಟಕದ ಅಧಿಕಾರಿಗಳಾದ ಎಸ್.ಐ. ಮಳಗಲಿ ಮತ್ತು ಮಂಜುಳಾ ಡಿ. ಮುಡ್ಲವರ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಿಭಾಗಗಳ ಮತ್ತು ಘಟಕಗಳ ಮಾಹಿತಿ ನೀಡಿ ವಿದ್ಯೆಯೊಂದಿಗೆ ಇತರೆ ಚಟುವಟಿಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸಾಧ್ಯವಿದ್ದು, ಅವುಗಳ ಪ್ರಯೋಜನ ಪಡೆಯಲು ಮನವಿ ಮಾಡಿದರು.

ಆರ್.ವಿ. ಪ್ರಭು ಪ್ರಾತ್ಯಕ್ಷಿಕೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ಐ.ಕ್ಯೂ.ಎ.ಸಿ. ಸಂಯೋಜಕ ಡಾ.ಎಚ್.ಪಿ. ಹಾಲೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಡಿ.ಮುಡ್ಲವರ ಮತ್ತು ಡಾ.ವಿ.ಎಂ. ಜಬಡೆ ಕಾರ್ಯಕ್ರಮ ನಿರೂಪಿಸಿದರು.