ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಸತತ ಅಧ್ಯಯನ , ರಚನಾತ್ಮಕ ಬರವಣಿಗೆ, ಸತತ ಹುಡಕಾಟದೊಂದಿಗೆ ಆರೋಗ್ಯದ ಬಗ್ಗೆ ಕಾಳಜಿಯುಳ್ಳ ವಿದ್ಯಾರ್ಥಿಗಳು ಅಸಾಧ್ಯವಾದ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಜಮಖಂಡಿಯ ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ. ಮಟೋಳಿ ಹೇಳಿದರು.ಸ್ಥಳೀಯ ಆರ್.ಎಂ.ಜಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಾಟಾಚಾರಕ್ಕಾಗಿ ಸಾಲಿ ಕಲಿಯೋ ಕಾಲ ಇದಲ್ಲ. ಸತ್ಯ, ನೀತಿ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಹಿತ್ಯ ಓದುತ್ತಾ ಹೋದಂತೆ ಒಳಗಿರುವ ಅಜ್ಞಾನ ಅಳಿದು, ಸುಜ್ಞಾನ ಹೆಚ್ಚುತ್ತದೆ ಎಂದರು
ಬಾಗಲಕೋಟೆ ಬಿ.ವಿ.ವಿ ಸಂಘದ ಸದಸ್ಯ ಬಸವರಾಜ ಇಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಮ್ಮರವಾಗಿ ಬೆಳೆಯುತ್ತಿರುವ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬಹುಮುಖ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಗಮನ ಹರಿಸಬೇಕೆಂದರು.ಪ್ರತಿಭೆಗಳಿಗೆ ಸತ್ಕಾರ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದ ಆರ್.ಎಂ.ಜಿ. ಪ್ರೌಢಶಾಲೆಯ ವಿದ್ಯಾರ್ಥಿಗಳು ತೆಲಂಗಾಣದಲ್ಲಿ ನಡೆದ ಸ್ಪರ್ಧೆಯಲ್ಲಿ ರನ್ನರ್ ಆಫ್ ಪ್ರಶಸ್ತಿ ಪಡೆದ ಎಲ್ಲ ಕಬಡ್ಡಿ ಆಟಗಾರರನ್ನು, ಇತರೆ ಕ್ರೀಡಾಪಟುಗಳನ್ನು ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದುಬಹುಮಾನ, ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.
ಎಚ್.ವೈ.ಹಾದಿಮನಿ, ಜೆ.ಎಸ್. ಅಂಗಡಿ ಅವರು ಪ್ರತಿಭಾ ಪುರಸ್ಕಾರವನ್ನು, ಶಿಷ್ಯವೇತನದ ಹಂಚಿಕೆಯನ್ನು ಬಿ.ಆರ್. ಚೌಗಲೆ, ಎಚ್.ಎನ್. ಕಣಬೂರ, ಎಂ.ವಿ.ಗುಳಬಾಳ ನಡೆಸಿಕೊಟ್ಟರು.ದೈಹಿಕ ಶಿಕ್ಷಣ ನಿರ್ದೇಶಕ ಬಿ.ಆರ್. ಬಾಡಗಿ ದೈಹಿಕ ಶಿಕ್ಷಕ ಎಸ್.ಎಸ್. ಮಠ. ದೇವು ಎಸ್. ಯರಗುದ್ರಿ ಸೇರಿದಂತೆ ಸಭೆಯ ಮುಖ್ಯಅತಿಥಿಗಳು ಹಾಗೂ ಅಧ್ಯಕ್ಷರನ್ನು ಮಹಾವಿದ್ಯಾಲಯದ ಪರವಾಗಿ ಸತ್ಕರಿಸಲಾಯಿತು.
ಪ್ರಾಚಾರ್ಯ ಬಿ.ಎ. ಗಂಜಿಹಾಳ ಸ್ವಾಗತಿಸಿದರು. ಉಪ ಪ್ರಾಚಾರ್ಯ ಪಿ.ಎಸ್. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು, ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ.ನಾಗರಾಜ ನಾಡಗೌಡರ ಅತಿಥಿಗಳ ಪರಿಚಯ ಮಾಡಿದರು, ಬಿ.ಎಸ್. ಕಂಬಿ ಸಂದೇಶ ವಾಚನ ಮಾಡಿದರು, ಎ.ವೈ. ಕೊಪ್ಪದ, ಎಸ್.ಎಸ್. ಹಿರೇಮಠ ನಿರೂಪಿಸಿದರು , ಎಸ್.ವಿ. ಕರೆಹೊನ್ನ ವಂದಿಸಿದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಭಕ್ತಿಗೀತೆ , ಭಾವಗೀತೆ , ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))