ಸಾರಾಂಶ
ಲಕ್ಷ್ಮೇಶ್ವರ: ಗುತ್ತಿಗೆದಾರರು ತಾಲೂಕಿನಲ್ಲಿ ಮಾಡಿದ ಕಾಮಗಾರಿಗಳ ಬಿಲ್ಲನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿರುವುದರಿಂದ ಗುತ್ತಿಗೆದಾರರು ಆರ್ಥಿಕವಾಗಿ ಸಾಲದ ಸುಳಿಗೆ ಸಿಲುಕುವಂತಾಗಿದೆ, ಆದ್ದರಿಂದ ಸರ್ಕಾರ ಶೀಘ್ರದಲ್ಲಿ ಗುತ್ತಿಗೆದಾರರು ಹಳೆ ಬಿಲ್ಲನ್ನು ಪಾವತಿ ಮಾಡಬೇಕು ಎಂದು ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಸವರಾಜ ತುಳಿ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಿವಿಲ್ ಗುತ್ತಿಗೆದಾರರ ಸಂಘದ ಮಾಸಿಕ ಸಭೆಯಲ್ಲಿ ಅವರು ಈ ಕುರಿತು ಮಾತನಾಡಿದರು.ತಾಲೂಕಿನಲ್ಲಿ ಜೆಜೆಎಂ ಕಾಮಗಾರಿಯ ಹಾಗೂ ವಿವಿಧ ಕಾಮಗಾರಿಗಳ ಬಿಲ್ಲು ವಿಳಂಬವಾಗುತ್ತಿರುವುದರಿಂದ ಗುತ್ತಿಗೆದಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಶೀಘ್ರದಲ್ಲಿ ಗುತ್ತಿಗೆದಾರರ ಬಿಲ್ಲಿನ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವ ಮೂಲಕ ಗುತ್ತಿಗೆದಾರರ ಹಿತ ಕಾಪಾಡುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದ ಅವರು ಗುತ್ತಿಗೆದಾರರು ತಮಗೆ ನೀಡಿದ ಕಾಮಗಾರಿಯು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುವ ಮೂಲಕ ಸಂಘದ ಗೌರವ ಕಳೆಯುವ ಕಾರ್ಯ ಮಾಡಬಾರದು. ತಾಲೂಕಿನ ಗುತ್ತಿಗೆದಾರರ ಬಾಕಿ ಇರುವಂತಹ ಬಿಲ್ಲಿನ ಬಗ್ಗೆ ಹಾಗೂ ಜಿಎಸ್‌ಟಿ ನೋಟಿಸ್ ಬಗ್ಗೆ ಶಿರಹಟ್ಟಿ ಆರ್.ಡಿ.ಪಿ.ಆರ್ ಉಪವಿಭಾಗ ಸಿಬ್ಬಂದಿಗಳ ಕೊರತೆ, ಹಲವಾರು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ನಿಕಟ ಪೂರ್ವ ಅಧ್ಯಕ್ಷ ರಮೇಶ ದನದಮನಿ, ಉಪಾಧ್ಯಕ್ಷ ನಾಗರಾಜ್ ಮಡಿವಾಳರ, ತಿಪ್ಪಣ್ಣ ಲಮಾಣಿ ಗೌರವಾಧ್ಯಕ್ಷ ಫಕ್ಕಿರೇಶ ಕವಲೂರ, ಐ.ಎಂ.ಆದ್ರಳ್ಳಿ, ಪ್ರಧಾನ ಕಾರ್ಯದರ್ಶಿ ಎಂ.ಎಂ. ಚಡಚನ್ನವರ, ಕೆ.ಎಂ.ಕೋಲ್ಕಾರ, ವೀರೇಶ ತಂಗೋಡ, ಫಕೀರೇಶ ರಗಟಿ, ಗಂಗಾಧರ್ ಅರಳಿ, ಶಂಕ್ರಪ್ಪ ಕಾಳಿ, ರಾಜು ಕಳ್ಳಿ, ಪ್ರಕಾಶ ಮುಳುಗುಂದ, ಗಿರೀಶ ಬಂಡಿವಡ್ಡರ, ಕಲ್ಲಪ್ಪ ಹಡಪದ, ಶರಣು ಸಿಂದಗಿ, ಆರ್.ಎಲ್. ಚವಾಣ, ಎಸ್.ಎಸ್. ಕರಡಿ, ಶರಣಪ್ಪ ಬಾರ್ಕೆರ, ರಾಮಚಂದ್ರ ಕಳ್ಳಿ, ವಿನಾಯಕ ಮಡಿವಾಳರ ಸೇರಿದಂತೆ ಹಲವು ಗುತ್ತಿಗೆದಾರರು ಭಾಗವಹಿಸಿದ್ದರು.