ಸಾರಾಂಶ
ಶಿರಹಟ್ಟಿ: ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಚಂದ್ರು ಕೆ. ಲಮಣಿ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ೨೦೨೪- ೨೫ನೇ ಸಾಲಿನ ಆರ್‌ಐಡಿಎಫ್ ಟ್ರಾಂಚ್- ೩೦ ಯೋಜನೆಯಡಿಯಲ್ಲಿ ನೂತನ ಕಟ್ಟಡ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗ್ರಾಮದ ಜನರ ಸುಮಾರು ವರ್ಷಗಳ ಬೇಡಿಕೆಯಂತೆ ಹಾಗೂ ಈ ಭಾಗದ ರೈತರ ಜಾನುವಾರುಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆದಾರರು ಕ್ರಮವಹಿಸಬೇಕು ಎಂದರು.ಬನ್ನಿಕೊಪ್ಪ ಗ್ರಾಮದ ಸುತ್ತಮುತ್ತಲೂ ಸುಮಾರು ಹಳ್ಳಿಗಳಿದ್ದು, ಬಹುತೇಕರು ಕೃಷಿ ಅವಲಂಬಿತರಾಗಿದ್ದಾರೆ. ಎಲ್ಲರೂ ಹೈನುಗಾರಿಕೆ, ಕೃಷಿ ಕೆಲಸ ಕಾರ್ಯದಲ್ಲಿಯೇ ಹೆಚ್ಚಾಗಿ ತೊಡಗಿದ್ದು, ಬಹುತೇಕರು ಆಕಳು, ಎಮ್ಮೆ ಮತ್ತು ಕೃಷಿ ಕಾರ್ಯಕ್ಕೆ ಎತ್ತುಗಳನ್ನು ಜೋಪಾನ ಮಾಡಿದ್ದು, ಈ ನೂತನ ಆಸ್ಪತ್ರೆ ಕಟ್ಟಡ ಈ ಭಾಗದ ರೈತರಿಗೆ ಮತ್ತು ಜಾನುವಾರುಗಳಿಗೆ ವರದಾನವಾಗಲಿದೆ ಎಂದರು.ಈ ಭಾಗದ ಜನರು ಪಶು ಆಸ್ಪತ್ರೆ ಸ್ವಂತ ಕಟ್ಟಡವಿಲ್ಲದೇ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಸರ್ಕಾರದ ಮಟ್ಟದಲ್ಲಿ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ನಿರ್ವಹಣೆ ಹೊತ್ತ ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಅನೇಕ ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿವೆ. ಹಂತ- ಹಂತವಾಗಿ ಸುಧಾರಣೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮಕ್ಕೆ ಕುಡಿಯುವ ನೀರು, ಚರಂಡಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಮದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷೆ ಶ್ರೀರಕ್ಷಾ ವೇರ್ಣೆಕರ, ಉಪಾಧ್ಯಕ್ಷ ರಮೆಶ ಕರಾಟೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಬೆಳ್ಳಟ್ಟಿ ಗ್ರಾಪಂ ಸದಸ್ಯರಾದ ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಶಂಕರ ಮರಾಠೆ, ಗುಡದೀರಪ್ಪ ಹಂಶಿ, ಶಿವು ಗೌಡನಾಯ್ಕರ, ಪ್ರಸಾದ ಕಲಾಲ, ಸುನಂದಾ ಕರಡಿ, ಮಂಜು ಕಮತರ, ಕಾಶಿನಾಥ ಗಿಡ್ಡವೀರಪ್ಪನವರ, ವಿರುಪಾಕ್ಷ ಮಾಗಡಿ ಸೇರಿದಂತೆ ಅನೇಕರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))