ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯನ್ನು ಮೂರ್ಛೆ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆ ಹಾಗೂ ಪರಿಣತ ವೈದ್ಯಾಧಿಕಾರಿಗಳ ಕಾರ್ಯದೊಂದಿಗೆ ಕೈಜೋಡಿಸೋಣ ಎಂದು ಸಮಾಜ ಸೇವಕ ಸಿ.ಎಂ.ಆರ್ ಶ್ರೀನಾಥ್ ಹೇಳಿದರು.ತಾಲೂಕಿನ ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಸ್ತರ್ ಆಸ್ಪತ್ರೆ, ವಿವಿಧ ರೋಟರಿ ಸಂಸ್ಥೆಗಳು ಹಾಗೂ ಸಿ.ಎಂ.ಆರ್ ಶ್ರೀನಾಥ್ ತಂಡದ ಸಹಕಾರದೊಂದಿಗೆ ಏರ್ಪಡಿಸಿದ್ದ ಮೂರ್ಛೆ ರೋಗ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮೂರ್ಛೆ ರೋಗವನ್ನು ಕಳಂಕ ಎಂದು ಭಾವಿಸದೆ ಪತ್ತೆಯಾದ ಆರಂಭಿಕ ದಿನಗಳಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಬಡವರಿಗೆ ಚಿಕಿತ್ಸೆ ಉಚಿತಅಸ್ತರ ಆಸ್ಪತ್ರೆಯ ತಜ್ಞ ವೈದ್ಯ ಡಾ. ಸತೀಶ್ ರುದ್ರಪ್ಪ ಮಾತನಾಡಿ, ಮೂರ್ಛೆ ರೋಗಕ್ಕೆ ಸೂಕ್ತ ಚಿಕಿತ್ಸೆ ಇದ್ದು, ಆರಂಭಿಕ ಹಂತಗಳಲ್ಲಿಯೇ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಬಹುದು, ಇನ್ನು ಮುಂದೆ ವರ್ಷಕ್ಕೆ ಎರಡು ಶಿಬಿರ ನಡೆಸಿ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ ಚಿಕಿತ್ಸೆ ಮಾಡಲಾಗುವುದು ಎಂದರು.ಜಿಲ್ಲಾ ಮಾನಸಿಕ ರೋಗ ವೈದ್ಯಾಧಿಕಾರಿ ಡಾ.ಎನ್.ಸಿ. ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ೭ ಸಾವಿರ ಮಂದಿ ಮೂರ್ಛೆ ರೋಗಿಗಳನ್ನು ಗುರುತಿಸಲಾಗಿದ್ದು, ನಿಮ್ಹಾನ್ಸ್ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಕೌನ್ಸೆಲಿಂಗ್ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.ಆರಂಭದಲ್ಲೇ ಚಿಕಿತ್ಸೆ ಪಡೆಯಿರಿ
ತಾಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಮೂರ್ಛೆ ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ, ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಗ್ರಾಮೀಣ ಜನರಲ್ಲಿ ಗುಪ್ತವಾಗಿರುವ ಮೂರ್ಛೆ ರೋಗವನ್ನು ಪತ್ತೆ ಹಚ್ಚುವ ಸಲುವಾಗಿಯೇ ತಪಾಸಣಾ ಶಿಬಿರ ಏರ್ಪಡಿಸಿದೆ ಎಂದರು.ಆಸ್ಪತ್ರೆ ಐಟಿ ಮುಖ್ಯಸ್ಥ ಅನಿಲ್‌ಕುಮಾರ್, ಗ್ರಾಮದ ಮುಖಂಡ ವಕ್ಕಲೇರಿ ರಾಮು, ಪಾಲಾಕ್ಷಗೌಡ, ರೋಟರಿ ಸೆಂಟ್ರಲ್ ಅಧ್ಯಕ್ಷ ಕೆ.ಎನ್.ಎನ್.ಪ್ರಕಾಶ್, ರೋಟರಿಯನ್ ಫೈರ್ ರಮೇಶ್, ಗ್ರಾಪಂ ಅಧ್ಯಕ್ಷೆ ರಾಕಾ ಮಂಜುನಾಥ್, ಉಪಾಧ್ಯಕ್ಷ ಆನಂದ ಕುಮಾರ, ಅಸ್ತರ್ ಆಸ್ಪತ್ರೆಯ ಡಾ.ಬಾಲಾಜಿ, ಡಾ.ಸೂರಜ್, ಡಾ. ಅಭಿಷೇಕ್, ಡಾ.ರವಿ ಇದ್ದರು.