ಗರ್ಭಗುಡಿ ದುರಸ್ತಿ ಕಾರ್ಯಕ್ಕೆ ಸಹಕರಿಸಿ: ಮಲ್ಲಯ್ಯ

| Published : Dec 15 2024, 02:03 AM IST

ಸಾರಾಂಶ

ಚಳ್ಳಕೆರೆ: ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಪುರಾತನ ದೇವಸ್ಥಾನವಾದ ಶ್ರೀ ಪಾತಲಿಂಗೇಶ್ವರಸ್ವಾಮಿ ಗರ್ಭಗುಡಿ ಶಿಥಿಲವ್ಯವಸ್ಥೆ ತಲುಪಿದ್ದು, ಅದನ್ನು ಕೂಡಲೇ ದುರಸ್ತಿಗೊಳಿಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ. ಗರ್ಭಗುಡಿ ದುರಸ್ತಿ ಕಾರ್ಯಕ್ಕೆ ಸುಮಾರು ೩೦ ಲಕ್ಷ ವೆಚ್ಚವಾಗಲಿದ್ದು, ಗೊರವಿನಕೆರೆ ವಂಶಸ್ಥರೂ ಸೇರಿದಂತೆ ಸಮುದಾಯದ ಮುಖಂಡರು ಇದಕ್ಕೆ ಸಹಕಾರ ನೀಡಬೇಕೆಂದು ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಮಲ್ಲಯ್ಯ ತಿಳಿಸಿದರು.

ಶನಿವಾರ ದೇವಸ್ಥಾನದ ಆವರಣದಲ್ಲಿ ನಡೆದ ಪುನರ್‌ನಿರ್ಮಾಣ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಹಾಜರಿದ್ದ ಎಲ್ಲಾ ಸದಸ್ಯರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದರು.

ಕಾರ್ಯದರ್ಶಿ ಕರೀಕೆರೆ ನಾಗರಾಜು ಮಾತನಾಡಿ, ಪ್ರಸ್ತುತ ಗರ್ಭಗುಡಿ ಈಗಿರುವ ಸ್ಥಿತಿಯ ಬಗ್ಗೆ ಎಲ್ಲರಿಗೂ ಸ್ವಷ್ಟ ಚಿತ್ರಣ ನೀಡಲಾಗಿದೆ. ರಿಪೇರಿಗೆ ಸಂಬಂಧಪಟ್ಟಂತೆ ಈಗಾಗಲೇ ಎರಡು ಬಾರಿ ಚಳ್ಳಕೆರೆ ಪ್ರವಾಸಿಮಂದಿರದಲ್ಲಿ ಸಭೆ ನಡೆಸಲಾಗಿದೆ. ಪುನರ್‌ನಿರ್ಮಾಣ ಮಾಡಲು ಬಹುತೇಕ ಎಲ್ಲಾ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ, ಸರ್ಕಾರದಿಂದ ಅನುದಾನ ಪಡೆಯುವ ಬಗ್ಗೆ ಶಾಸಕರನ್ನು ಭೇಟಿ ಮಾಡುವುದು ಸೇರಿದಂತೆ ಗೊರವಿನಕೆರೆ ವಂಶಸ್ಥರ ಹಾಗೂ ಸಹೋದರರು ಈ ನಿಟ್ಟಿನಲ್ಲಿ ಹೆಚ್ಚು ಸಹಕಾರ ನೀಡುವಂತೆ ಮನವಿ ಮಾಡಿದರು.

ದೇವಸ್ಥಾನದ ಗರ್ಭಗುಡಿ ಸ್ಥಳಾಂತರ ಹಾಗೂ ಅಭಿವೃದ್ಧಿ ಕುರಿತಂತೆ ಜೇನಕಲ್ಲು ಸ್ವಾಮಿಗಳೊಂದಿಗೆ ಚರ್ಚಿಸಲಾಯಿತು.

ಸಭೆಯಲ್ಲಿ ಮುಖಂಡರಾದ ಪ್ರಕಾಶ್, ನಿಂಗಣ್ಣ, ಕೆಂಚಣ್ಣ, ನಂಜುಡಪ್ಪ, ಪೂಜಾರಿ ಶ್ರೀನಿವಾಸ್, ನಿಂಗಪ್ಪ ಮುಂತಾದವರಿದ್ದರು.