ಸಂಘದ ಸರ್ವತೋಮುಖ ಅಭಿವೃದ್ದಿಗೆ ಸಹಕಾರ ನೀಡಿ

| Published : Sep 21 2025, 02:00 AM IST

ಸಾರಾಂಶ

ಸಹಕಾರ ಸಂಘಗಳ ನಿರ್ದೇಶಕರು, ಸದಸ್ಯರು ಸಹಕಾರ ತತ್ವದಡಿ ಕಾರ್ಯನಿರ್ವಹಿಸಿದಾಗ ಸಂಘಗಳು ಅಭಿವೃದ್ದಿಪಥದತ್ತ ಸಾಗಲಿವೆ ಎಂದು ಎಂಸಿಡಿಸಿಸಿ ಹಾಗೂ ದೊಡ್ಡರಾಯಪೇಟೆ ಪಿಎಸಿಸಿಎಸ್ ನಿರ್ದೇಶಕ, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಹಕಾರ ಸಂಘಗಳ ನಿರ್ದೇಶಕರು, ಸದಸ್ಯರು ಸಹಕಾರ ತತ್ವದಡಿ ಕಾರ್ಯನಿರ್ವಹಿಸಿದಾಗ ಸಂಘಗಳು ಅಭಿವೃದ್ದಿಪಥದತ್ತ ಸಾಗಲಿವೆ ಎಂದು ಎಂಸಿಡಿಸಿಸಿ ಹಾಗೂ ದೊಡ್ಡರಾಯಪೇಟೆ ಪಿಎಸಿಸಿಎಸ್ ನಿರ್ದೇಶಕ, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಶನಿವಾರ ದೊಡ್ಡರಾಯಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಸಂಘದ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸಹಕಾರ ಸಂಘಗಳು ಬಡವರು, ರೈತರಪರ ಸ್ಥಾಪಿತವಾಗಿದ್ದು, ಸಂಘದ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿ, ಸಂಘಗಳನ್ನು ಬಲವರ್ಧನೆ ಮಾಡಬೇಕು, ಸಹಕಾರ ಸಂಘದಿಂದ ಸಾಲಪಡೆದವರು ಸಕಾಲಕ್ಕೆ ಸಂಘಕ್ಕೆ ಸಾಲ ಪಾವತಿಸುವ ಸಂಬಂಧ ರೈತರಿಗೆ ನಿರ್ದೇಶಕರು, ಹಾಗೂ ಸದಸ್ಯರು ತಿಳುವಳಿಕೆ ಮೂಡಿಸಬೇಕು, ಸಹಕಾರ ಸಂಘವನ್ನು ಜಿಲ್ಲೆಯಲ್ಲೇ ಮಾದರಿಸಂಘ ಮಾಡುವುದರತ್ತ ತಾವು ಕಾರ್ಯಪ್ರವೃತ್ತರಾ ಗಬೇಕು ಎಂದರು.ದೊಡ್ಡರಾಯಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ೭೫ ವರ್ಷದ ಹಿಂದಿನದ್ದಾಗಿದೆ. ಅದನ್ನು ಕೆಡವಿ ೧ ಕೋಟಿ ರು.ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು, ಈಗಾಗಲೇ ೫೦ ಲಕ್ಷ ರು.ಮಂಜೂರಾಗಿದ್ದು, ಕಾಮಗಾರಿ ಆರಂಭಿಸಲು ವಾರದೊಳಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು.ಸಂಘದ ಅಧ್ಯಕ್ಷ ಡಿ.ಸೋಮಣ್ಣ ಮಾತನಾಡಿ, ನಮ್ಮ ಸಹಕಾರಸಂಘ ಪ್ರಸಕ್ತಸಾಲಿನಲ್ಲಿ ೮೭೨೨೨.೫೯ ಸಾವಿರ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದರು.ಸಂಘದ ಸಿಇಒ ಮಹದೇವಯ್ಯ ೨೦೨೪-೨೫ ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಚ್.ಎಸ್.ಮಹದೇವಯ್ಯ, ನಿರ್ದೇಶಕರಾದ ಎಚ್.ಎಸ್.ಮಹದೇವಪ್ಪ, ಆರ್.ಮಹದೇವಸ್ವಾಮಿ, ಪಾಪಣ್ಣ, ಮಹದೇವ, ನಾಗರಾಜು, ಪುಟ್ಟಮ್ಮ, ದಾಕ್ಷಾಯಿಣಿ, ಡಿ.ಸೋಮಣ್ಣ, ಎಂಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಟಿ.ಮಂಜು, ಕೃಷಿಪತ್ತಿನ ಸಹಕಾರ ಮಾಜಿ ಅಧ್ಯಕ್ಷ ಎಂಪಿ,ಶಂಕರ್, ನಿರ್ದೇಶಕ ಕೂಡ್ಲುರು ಶಿವಣ್ಣ, ಮಹೇವಯ್ಯ, ಗ್ರಾ,ಪಂ ಸದಸ್ಯರಾದ ಸಿದ್ದರಾಜು, ನಾಗೇಂದ್ರ, ಗ್ರಾ,ಪಂ ಮಾಜಿ ಅಧ್ಯಕ್ಷ ಲಿಂಗರಾಜು, ಬಸವರಾಜು, ರವಿಗೌಡ, ಸಂಘದ ಸದಸ್ಯರು, ರೈತ ಮುಖಂಡರು, ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.