ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಹಕರಿಸಿ: ಶಾಸಕ ಬಿ.ದೇವೇಂದ್ರಪ್ಪ

| Published : Jan 08 2025, 12:18 AM IST

ಸಾರಾಂಶ

Contribute to the success of the literary conference: MLA B. Devendrappa

-ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಹಕರಿಸಲು ಶಾಸಕರ ಮನವಿ

------

ಕನ್ನಡಪ್ರಭವಾರ್ತೆ ಜಗಳೂರು

ಬಯಲು ರಂಗ ಮಂದಿರದಲ್ಲಿ 11 ಮತ್ತು 12 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು 13 ರಂದು ನಡೆಯಲಿರುವ ಜಗಳೂರು ಜಲೋತ್ಸವಕ್ಕೆ ಸಾಹಿತಿಗಳು, ಸಾರ್ವಜನಿಕರು, ಪತ್ರಕರ್ತರು ಸಹಕಾರ ನೀಡಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.

ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ಜಿಲ್ಲೆಯಿಂದ ಹೊರ ಬಂದ ನಂತರ ಇದೇ ಮೊದಲ ಬಾರಿಗೆ ಸಮ್ಮೇಳ ಜಗಳೂರಿನಲ್ಲಿ ನಡೆಯುತ್ತಿದೆ.

14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಎ.ಬಿ.ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ, ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಸಮ್ಮೇಳನಕ್ಕೆ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಜಿಲ್ಲೆಯ ಎಲ್ಲಾ ಶಾಸಕರು, ಗಂಗಾವತಿ ಪ್ರಾಣೇಶ್, ಸಾಹಿತಿಗಳನ್ನು ಆಹ್ವಾನಿಸಿ, ಕವಿಗೋಷ್ಠಿ, ಸಾಹಿತ್ಯ ಗೋಷ್ಠಿ, ಸಾಹಿತ್ಯ ಸಂಭ್ರಮವೇ ನಡೆಯಲಿದೆ. ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನದಂತೆ ಸ್ತಬ್ಧ ಚಿತ್ರಗಳ ಮೆರವಣಿಗೆ, ಎತ್ತಿನಗಾಡಿ ಮೆರವಣಿಗೆ, ಸರ್ವಾಧ್ಯಕ್ಷರ ಮೆರವಣಿಗೆ ವಿಜೃಂಭಣೆಯಿಂದ ಸಾಗಲಿದೆ ಎಂದರು. ಜಲೋತ್ಸವ: 13ರಂದು ಜಗಳೂರಿನಲ್ಲಿ ಜಲ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಖ್ಯಾತಿಯ ಅರ್ಜುನ್ ಜನ್ಯ ನೇತೃತ್ವದಲ್ಲಿ ಎಂಟು ಕಲಾವಿದರು ರಾತ್ರಿಯಿಡೀ ಸಂಗೀತ ರಸ ಸಂಜೆಯ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ಚಿತ್ರ ಸಾಹಿತಿ ರಾಧಾಕೃಷ್ಣ ಪಲ್ಲಕ್ಕಿ ಅವರು ಜಗಳೂರು ಐತಿಹಾಸಿಕ ನೆಲೆಗಳನ್ನು ಸೆರೆ ಹಿಡಿದು 45 ನಿಮಿಷಗಳ ಸಾಕ್ಷಾಚಿತ್ರ ಹೊರತಂದಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ್, ಕಾರ್ಯದರ್ಶಿ ಗೀತಾ ಮಂಜು ಇದ್ದರು.

....... ಬಾಕ್ಸ್...... ಸಾಹಿತ್ಯಿಕ ಮಾನದಂಡ ಉಲ್ಲಂಘನೆ

ಸಾಹಿತ್ಯಿಕ ಮಾನದಂಡ ಉಲ್ಲಂಘಿಸಲಾಗಿದೆ ಎಂದು ಸಾಹಿತಿ ಸಂಗೇನಹಳ್ಳಿ ಅಶೋಕ್‍ಕುಮಾರ್, ಯಾದವರೆಡ್ಡಿ, ಎಂ.ಬಸಪ್ಪ, ದೊಣ್ಣೇಹಳ್ಳಿ ಗುರುಮೂರ್ತಿ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ. ಏಕೆ ಅವರನ್ನು ಸಮ್ಮೇಳನಕ್ಕೆ ಕರೆದಿಲ್ಲವೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ತಾ. ಕಸಾಪ ಅಧ್ಯಕ್ಷೆ ಸುಜಾತಮ್ಮ ರಾಜು, ಸಾಹಿತಿ ಎನ್.ಟಿ.ಎರ್ರಿಸ್ವಾಮಿ ಕೆಲ ಸಮಯ ಸುಮ್ಮನಾಗಿ ನಂತರ ಅವರೆಲ್ಲರನ್ನು ಕರೆದಿದ್ದೇವೆ ಎಂದು ಸ್ಪಷ್ಟ ಪಡಿಸಿದರು. ನಾವು ಯಾದವರೆಡ್ಡಿ, ಸಂಗೇನಹಳ್ಳಿ ಅಶೋಕ್‍ಕುಮಾರ್, ಬಸಪ್ಪ, ದೊಣ್ಣೇಹಳ್ಳಿ ಗುರುಮೂರ್ತಿ ಅವರನ್ನು ಖುದ್ದು ಭೇಟಿ ಮಾಡಿ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದ್ದೇವೆ ಎಂದು ಪತ್ರಕರ್ತರಿಗೆ ಎನ್.ಟಿ.ಎರ್ರಿಸ್ವಾಮಿ ಉತ್ತರಿಸಿದರು.

...ಬಾಕ್ಸ್‌....

ಸ್ಥಳೀಯ ಸಾಹಿತಿಯನ್ನೇ ಆಯ್ಕೆ ಮಾಡಲಿ

ಸರ್ವಾಧ್ಯಕ್ಷರನ್ನಾಗಿ ಸ್ಥಳೀಯ ಸಾಹಿತಿಗಳನ್ನೇ ಆಯ್ಕೆ ಮಾಡಬೇಕು ಎಂಬ ಒತ್ತಡವಿತ್ತು. 5 ಜನರ ಹೆಸರುಗಳಲ್ಲಿ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್, ದೊಣ್ಣೇಹಳ್ಳಿ ಗುರುಮೂರ್ತಿ, ಬಸವೇಶ್, ಡಿ.ಸಿ.ಮಲ್ಲಿಕಾರ್ಜುನ್ ಮತ್ತು ಡಾ.ಎ.ಬಿ.ರಾಮಚಂದ್ರಪ್ಪ ಅವರ ಹೆಸರುಗಳಿದ್ದು, ಜಾತ್ಯಾತೀತ ವ್ಯಕ್ತಿಯಾದ ಡಾ.ಎ.ಬಿ.ರಾಮಚಂದ್ರಪ್ಪ ಅವರನ್ನು ಜಿಲ್ಲಾ ಸಮ್ಮೇಳನದ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ. ಆಯ್ಕೆ ನಮ್ಮದಲ್ಲ. ಸಾಹಿತಿಗಳು ಬಂಡಾಯವೆದ್ದರೆ ಅದಕ್ಕೆ ಜಿಲ್ಲಾಧ್ಯಕ್ಷರೇ ಉತ್ತರಿಸುತ್ತಾರೆ ಎಂದು ತಾ.ಅಧ್ಯಕ್ಷೆ ಸುಜಾತಮ್ಮ ರಾಜು ಹೇಳಿದರು.

------

ಫೋಟೊ: ಜಗಳೂರು ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಸುದ್ದಿಗೋಷ್ಠಿ ನಡೆಸಿ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.

06 ಜೆ.ಜಿ.ಎಲ್.2)‌