ಹಳ್ಳಿಗಳ ಬೆಳವಣಿಗೆ ನಿಟ್ಟಿನಲ್ಲಿ ವಿಜ್ಞಾನಿಗಳ ಕೊಡುಗೆ ಅಗತ್ಯ: ಶ್ರೀ ಗುಣನಾಥ ಸ್ವಾಮೀಜಿ

| Published : Jul 26 2024, 01:42 AM IST

ಹಳ್ಳಿಗಳ ಬೆಳವಣಿಗೆ ನಿಟ್ಟಿನಲ್ಲಿ ವಿಜ್ಞಾನಿಗಳ ಕೊಡುಗೆ ಅಗತ್ಯ: ಶ್ರೀ ಗುಣನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಹಳ್ಳಿಗಳ ಬೆಳವಣಿಗಾಗಿ ವಿಜ್ಞಾನಿಗಳ ಕೊಡುಗೆ ಇರಬೇಕು. ಆ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಶೃಂಗೇರಿಯ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

- ಎಐಟಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ, 4 ದಿನ ನಡೆಯಲಿರುವ ಸಮ್ಮೇಳನ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಳ್ಳಿಗಳ ಬೆಳವಣಿಗಾಗಿ ವಿಜ್ಞಾನಿಗಳ ಕೊಡುಗೆ ಇರಬೇಕು. ಆ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಶೃಂಗೇರಿಯ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಗುರುವಾರ ನಗರದ ಎಐಟಿ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿರುವ ಮಾಹಿತಿ ತಂತ್ರಜ್ಞಾನದಲ್ಲಿ ಆಗುತ್ತಿರುವ ಅಭಿವೃದ್ಧಿ ಹಾಗೂ ಬೆಳವಣಿಗೆ ಕುರಿತ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿದ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ವಿಜ್ಞಾನದ ಹುಟ್ಟಿಗೆ ನಿಖರವಾದ ದಿನ ಇಲ್ಲ. ಇದು, ಅನಾಧಿಕಾಲದಿಂದಲೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ಅತಿ ವೇಗವಾಗಿ ಬೆಳೆಯುತ್ತಿದೆ. ಜ್ಞಾನವನ್ನು ವಿಜ್ಞಾನದ ಮೂಲಕ ಆಳವಾಗಿ ಅಧ್ಯಯನ ಮಾಡಬೇಕು. ಗ್ರಾಮೀಣ ಪ್ರದೇಶಗಳ ಬೆಳವಣಿಗೆ ನಿಟ್ಟಿನಲ್ಲಿ ಆ ಅಧ್ಯಯನಗಳು ಇರಬೇಕು ಎಂದು ತಿಳಿಸಿದರು.

ಶಿಕ್ಷಣ ಕಲಿಕೆಯಲ್ಲೂ ಬಹಳಷ್ಟು ಬದಲಾವಣೆಯಾಗಿದೆ. ಅದೇ ರೀತಿ ಬೋಧನಾ ಕ್ರಮವೂ ಬದಲಾಗಿದೆ ಎಂದ ಶ್ರೀಗಳು, ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಬರುವ ರೀತಿಯಲ್ಲಿ ಬೋಧನೆ ಮಾಡಬೇಕು ಎಂದು ಹೇಳಿದರು.

ಪುರಾತನ ಕಾಲದಲ್ಲಿ ವಿಜ್ಞಾನ ಬೆಳೆದಿತ್ತು. ಆದರೆ, ಜನರಿಗೆ ತಲುಪಿರಲಿಲ್ಲ. ಈಗ ಯಾರು ಏನೂ ಬೇಕಾದರೂ ಆಗಬಹುದು. ಮುಕ್ತವಾದ ಅವಕಾಶ ಆದೆ. ಅದನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ಏರಬಹುದು ಎಂದು ತಿಳಿಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಹಿಂದಿನ 40-50 ವರ್ಷಗಳಿಗೆ ಹೋಲಿಕೆ ಮಾಡಿದರೆ, ಎಂಜಿನಿಯರ್‌ ಕಲಿಕೆಯಲ್ಲಿ ಬಹಳಷ್ಟು ಬದಲಾವಣೆ ಆಗಿವೆ. ಹೊಸ ಹೊಸ ಕೋರ್ಸ್‌ಗಳು ಬರುತ್ತಿವೆ. ಭವಿಷ್ಯದಲ್ಲಿ ಏನೆಲ್ಲಾ ಅಗತ್ಯವಾಗಿ ಕಲಿಯಬೇಕೋ ಅದೆಲ್ಲಾ ಈಗಲೇ ಕಲಿಯುವ ಅವಕಾಶಗಳು ಬಂದಿವೆ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಇಂತಹದ್ದೆ ಕಲಿತರೆ ಉದ್ಯೋಗ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಎಂಜಿನಿಯರಿಂಗ್‌ನ ಯಾವುದೇ ಶಿಕ್ಷಣ ಪಡೆದರೂ ಉದ್ಯೋಗ ಸಿಗುವ ಅವಕಾಶ ಇದೆ. ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟ ಬೇಕಾದರೆ ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್‌ ಮಾತನಾಡಿ, ಎಂಜಿನಿಯ ರಿಂಗ್‌ ಶಿಕ್ಷಣ ಕೇವಲ ಉದ್ಯೋಗ ಪಡೆಯಲು ಮಾತ್ರ ಸೀಮಿತ ಎಂಬ ಭಾವನೆ ಇತ್ತು. ಆದರೆ, ಇದೀಗ ಆರೋಗ್ಯ, ಕೃಷಿ, ವೈದ್ಯಕೀಯ ಹಾಗೂ ಮಾಹಿತಿ ತಂತ್ರಜ್ಞಾನದಲ್ಲೂ ಎಂಜಿನಿಯರಿಂಗ್‌ ಪದವಿಧರರ ಅವಶ್ಯಕತೆ ಕಂಡು ಬರುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ನಡವಳಿ ಒಳಗೊಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು. ಹಾಸನದ ಎಂಸಿಎಫ್‌ ಸಂಸ್ಥೆ ನಿರ್ದೇಶಕ ಪಂಕಜ್‌ ಕಿಲ್ಲೇದರ್ ಕಾರ್ಯಕ್ರಮ ಉದ್ಘಾಟಿಸಿದರು. ಐಇಇಇ ಛೇರ್ಮನ್‌ ಡಾ. ಟಿ. ಶ್ರೀನಿವಾಸ್‌, ಟೆಸ್ಟ್‌ ಪಾನ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ನ ಮಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್‌ ಸೇಠಿಯಾ, ಎಐಟಿ ಶಿಕ್ಷಣ ಸಂಸ್ಥೆ ಸದಸ್ಯ ಕೆ. ಮೋಹನ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ. ಪುಷ್ಪ ರವಿಕುಮಾರ್‌ , ಪ್ರಾಧ್ಯಾಪಕಿ ಅರ್ಪಿತಾ , ಸಂಗರೆಡ್ಡಿ ಉಪಸ್ಥಿತರಿದ್ದರು. 25 ಕೆಸಿಕೆಎಂ 1

ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ನಡವಳಿ ಒಳಗೊಂಡ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಗುಣನಾಥ ಸ್ವಾಮೀಜಿ, ಡಾ. ಸುಬ್ರಾಯ, ಡಾ. ಸಿ.ಟಿ. ಜಯದೇವ್‌, ಪಂಕಜ್‌, ರಾಜೇಶ್‌, ಡಾ. ಪುಷ್ಪ ರವಿಕುಮಾರ್‌, ಕೆ. ಮೋಹನ್‌ ಇದ್ದರು.