ಜಗದ್ಗುರು ಆದಿ ಶಂಕರಾಚಾರ್ಯರು ಭಾರತೀಯ ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ. ಅವರು ರಚಿಸಿದ ಸ್ತೋತ್ರಗಳು ಮತ್ತು ಸೌಂದರ್ಯ ಲಹರಿಯಂತಹ ಕೃತಿಗಳು ಮನುಕುಲಕ್ಕೆ ದಾರಿದೀಪವಾಗಿವೆ. ಶಂಕರಾಚಾರ್ಯರ ತತ್ವಗಳನ್ನು ಮತ್ತು ಸ್ತೋತ್ರಗಳನ್ನು ಕೆಲವೊಂದರಿಂದ ಮನಸ್ಸಿಗೆ ಶಾಂತಿ ಮತ್ತು ಆತ್ಮಸ್ಥೈರ್ಯ ದೊರೆಯುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಪುನರ್ಜೀವನಗೊಳಿಸಿದ ಮಹಾನ್ ಆಚಾರ್ಯರಾದ ಆದಿ ಗುರು ಶಂಕರಾಚಾರ್ಯರು ಮತ್ತು ಭಗವತ್ ರಾಮಾನುಜಾಚಾರ್ಯರ ಕೊಡುಗೆ ಅಪಾರ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ರಾಮಕೃಷ್ಣನಗರದ ಈ ಅಂಡ್ ಎಫ್ ಬ್ಲಾಕ್ ನಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಆಯೋಜಿಸಿದ್ದ ಆದಿ ಗುರು ಶ್ರೀ ಶಂಕರಾಚಾರ್ಯರ ಹಾಗೂ ಭಗವದ್ ಶ್ರೀ ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜಗದ್ಗುರು ಆದಿ ಶಂಕರಾಚಾರ್ಯರು ಭಾರತೀಯ ಸನಾತನ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ ಅವರು ರಚಿಸಿದ ಸ್ತೋತ್ರಗಳು ಮತ್ತು ಸೌಂದರ್ಯ ಲಹರಿ ಯಂತಹ ಕೃತಿಗಳು ಮನುಕುಲಕ್ಕೆ ದಾರಿದೀಪವಾಗಿವೆ, ವಿಶ್ವವೋ ಸಂಕಿರಣ ಪರಿಸ್ಥಿತಿಯಲ್ಲಿರುವಾಗ ಆಧ್ಯಾತ್ಮ ಮತ್ತು ಶಂಕರಾಚಾರ್ಯರ ತತ್ವಗಳ ಶಾಂತಿಯನ್ನು ನೀಡಬಲ್ಲವು ಇಂದಿನ ಜಗತ್ತಿನಲ್ಲಿ ಮನುಷ್ಯನಿಗೆ ಅತ್ಯಂತ ಕಠಿಣವಾದ ಕೆಲಸವೆಂದರೆ ಅದು ಮನಸ್ಸಿನ ನಿಯಂತ್ರಣ ಶಂಕರಾಚಾರ್ಯರ ತತ್ವಗಳನ್ನು ಮತ್ತು ಸ್ತೋತ್ರಗಳನ್ನು ಕೆಲವೊಂದರಿಂದ ಮನಸ್ಸಿಗೆ ಶಾಂತಿ ಮತ್ತು ಆತ್ಮಸ್ಥೈರ್ಯ ದೊರೆಯುತ್ತದೆ ಎಂದರು.

ಭಾರತ ದೇಶವು ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತವಾಗಿದೆ, ಇಂತಹ ಜಯಂತಿಗಳು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಿದೆ ಮಹಾನ್ ಪುರುಷರ ಜಯಂತಿಗಳನ್ನು ಆಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಘ-ಸಂಸ್ಥೆಗಳ ಕ್ರಮ ಶ್ಲಾಘನೀಯವಾದದ್ದು, ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯ ರಂತಹ ಮಹಾನ್ ಗುರುಗಳನ್ನು ಸ್ಮರಿಸುವುದು ನಮ್ಮ ಭಾಗ್ಯ ಎಂದು ಅವರು ಹೇಳಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಡಾ.ಎಸ್.ಪಿ. ಯೋಗಣ್ಣ, ವಿದ್ವಾನ್ ಕೃಷ್ಣಮೂರ್ತಿ, ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ವಿನಯ್ ಕಣಗಾಲ್, ವಿಜಯ್ ಕುಮಾರ್, ಜಯಸಿಂಹ, ಮಿರ್ಲೆ ಪಣೀಶ್, ಶ್ರೀಕಾಂತ್ ಕಶ್ಯಪ್, ಜಗದೀಶ್, ಗಗನ, ಎಸ್.ಬಿ. ವಾಸುದೇವಮೂರ್ತಿ, ರಾಘವೇಂದ್ರ, ಲಕ್ಷ್ಮೀಶ್, ಸಂತೋಷ್, ಪ್ರಸನ್ನ ಹೆಗಡೆ, ಚಾಮಯ್ಯ, ಗಂಗಾಧರ್, ಮಾದೇಗೌಡ, ರಾಮಕೃಷ್ಣಪ್ಪ, ಪುಟ್ಟಮ್ಮಣ್ಣಿ, ವಸುಮತಿ, ನಾಗರಾಜ್ ಜನ್ನು, ಶ್ರುತಿ ನಾಗರಾಜ್, ಪ್ರೇಮಾ ಇದ್ದರು.

ಶ್ರೀರಾಮಾನುಜಚಾರ್ಯ ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಮೈಸೂರು

ಒಂಟಿಕೊಪ್ಪಲಿನ ಕಾಳಿದಾಸರಸ್ತೆಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ಆವರಣದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಮೈಸೂರು ಎಕೆಬಿಎಂಎಸ್‌ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮಾನುಜಾಚಾರ್ಯರ ಜಯಂತಿ ಹಮ್ಮಿಕೊಳ್ಳಲಾಗಿ಼ತ್ತು.ಶಾಸಕ ಟಿ.ಎಸ್‌. ಶ್ರೀವತ್ಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಚಾರ್ಯರ ಆದರ್ಶಗಳಲ್ಲಿ ಒಂದನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ರಾಮಾನುಜಾಚಾರ್ಯರು ಅತ್ಯಂತ ಶ್ರೇಷ್ಠರಲ್ಲಿ ಒಬ್ಬರು ಎಂದರು.ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮೀದೇವಿ, ಮುರಳಿ, ಕಾರ್ಯದರ್ಶಿ ಹರೀಶ್, ಗೊಪಾಲರಾವ್, ಎಂ.ಅರ್. ಬಾಲಕೃಷ್ಣ, ಕಲ್ಕೆರೆ ನಾಗರಾಜ್, ಜಗ್ಗಣ್ಣ, ರಂಗನಾಥ್, ಅರುಣ್, ಸತ್ಯನಾರಾಯಣ್, ಸುಧೀಂದ್ರ, ಸೌಭಾಗ್ಯಮೂರ್ತಿ, ಜ್ಯೋತಿ, ಲತಾ ಬಾಲಕೃಷ್ಣ ಮೊದಲಾದವರು ಇದ್ದರು.