ಸಂಘ ಸಂಸ್ಥೆಯಿಂದ ದೇಶ ಅಭಿವೃದ್ಧಿಗೆ ಕೊಡುಗೆ: ಡಾ. ಎನ್.ಕೃಷ್ಣೆ ಗೌಡ

| Published : Jul 16 2025, 12:45 AM IST

ಸಾರಾಂಶ

ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಂದಿನ ಕಾಲದಲ್ಲಿ ಹಲವಾರು ಸಂಘ ಸಂಸ್ಥೆಗಳು ಹುಟ್ಟುಕೊಂಡಿದ್ದು, ಇವುಗಳು ದೇಶ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ. ಎನ್.ಕೃಷ್ಣೆ ಗೌಡ ತಿಳಿಸಿದರು.

ಅವರು ಶನಿವಾರಸಂತೆಯ ದೇವ್ ದೀಪ್ ರೆಸಾರ್ಟ್ ಸಭಾ ವೇದಿಕೆಯಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ದೇಶದಲ್ಲಿ ಸೌಜನ್ಯದಿಂದ ಸೇವಾ ಮನೋಭಾವ ಹೊಂದಬೇಕು. ಸಂಸ್ಥೆಯ ಉದ್ದೇಶ ತಿಳಿದು ನಾವು ಸಮಾಜ ಸೇವೆ ಮಾಡಿದರೆ ನಾವು ಅಭಿವೃದ್ಧಿಯಾಗುತ್ತೇವೆ. ಸೇವೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಲಯನ್ಸ್ ಸಂಸ್ಥೆ ಪ್ರಪಂಚದಲ್ಲಿ ಉತ್ತಮ ಸಮಾಜಮುಖಿ ಕಾರ್ಯ ಮಾಡಿ ಹೆಸರು ಮಾಡಿದೆ ಎಂದರು.

ಜಿಲ್ಲಾ ಉಪ ರಾಜ್ಯಪಾಲ ನಾರಾಯಣ ಸ್ವಾಮಿ, ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸಂಭ್ರಮದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ನೂತನ ಅಧ್ಯಕ್ಷ ಟಿ.ಎನ್. ಕೇಶವ ಮೂರ್ತಿ ಮಾತನಾಡಿದರು.

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಎಸ್.ವಾಸುಕಿ, ವಲಯ ಅಧ್ಯಕ್ಷ ಸುಧೀರ್, ಶಶಿಕುಮಾರ್, ಶನಿವಾರಸಂತೆ ಲಯನ್ಸ್ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಜಿ.ಜಿ. ಪರಮೇಶ್, ಉಪಾಧ್ಯಕ್ಷ ಎಂ.ಎನ್. ಶಂಕರ್, ಕಾರ್ಯದರ್ಶಿ ನಾರಾಯಣ ಸ್ವಾಮಿ, ಖಜಾಂಚಿ ಬಿ.ಕೆ. ಚಿಣ್ಣಪ್ಪ ಭಾಗವಹಿಸಿದರು.