ಸರ್ಕಾರೇತರವಾಗಿ ಮಠ, ಮಂದಿರಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ವಿದ್ಯಾರ್ಥಿಗಳಿಗೆ ತಮ್ಮದೆಯಾದ ಗುಣಮಟ್ಟದ ಶಿಕ್ಷಣ ನೀಡುತ್ತಾ, ಉತ್ತಮ ಪ್ರತಿಭಾವಂತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಸರ್ಕಾರೇತರವಾಗಿ ಮಠ, ಮಂದಿರಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ವಿದ್ಯಾರ್ಥಿಗಳಿಗೆ ತಮ್ಮದೆಯಾದ ಗುಣಮಟ್ಟದ ಶಿಕ್ಷಣ ನೀಡುತ್ತಾ, ಉತ್ತಮ ಪ್ರತಿಭಾವಂತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿವೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಮಿನಿವಿಧಾನಸೌಧದ ಹಿಂಭಾಗದಲ್ಲಿನ ದುರ್ಗಾಮಾತಾ ವಿದ್ಯಾಸಂಸ್ಥೆಯ ಆವರಣದಲ್ಲಿ ಸಂಜೆ ಏರ್ಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭದ ಕೆಲಸವಲ್ಲ, ಅದರಲ್ಲೂ ಯಾವುದೆ ಕಳಂಕ, ಚ್ಯುತಿ ಬಾರದಂತೆ, ಮಕ್ಕಳ ಶೈಕ್ಷಣಿಕ ಬದುಕಿಗೆ ತೊಂದರೆಯಾಗದತೆ ನಡೆಸಿಕೊಂಡು ಹೋಗುವುದು ನಿಜಕ್ಕೂ ಕಷ್ಟಕರ ಕೆಲಸವಾಗಿದೆ. ಇಂತಹ ಸಮಯದಲ್ಲಿ ಊರಿನ ಆರಾಧ್ಯ ದೈವ ದೇವಿಯಾದ ದುರ್ಗಾಮಾತಾ ಹೆಸರನ್ನು ಇಟ್ಟುಕೊಂಡು ಈ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಗುಣ ಮಟ್ಡದ ಬೋಧನೆ ಮಾಡುವ ಮೂಲಕ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಮಾಜಕ್ಕೆ ನೀಡುತ್ತಾ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಬಸವರಾಜ ತೆವರಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ನಿಜವಾದ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸ್ಫೂರ್ತಿ ನೀಡುವ ಮೂಲಕ ಎಲ್ಲರಿಗೂ ಅದನ್ನು ಪರಿಚಯಿಸಲು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಸೂಕ್ತ ವೇದಿಕೆಯಾಗಿದೆ. ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಇಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಅಂದಾಗ ಮುಂದೆ ಯಾವುದೇ ಕ್ಷೇತ್ರದಲ್ಲಿ ನಿಮಗೆ ಧೈರ್ಯ ಮತ್ತು ಜಯ ಸಿಕ್ಕೆ ಸಿಗುತ್ತದೆ ಎಂದರು.ನಿವೃತ್ತ ಮುಖ್ಯಶಿಕ್ಷಕ ಅಶೋಕ ಗೊಲ್ಲರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸುಭಾಸ್ ಗೊಲ್ಲರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೆ ವೇಳೆ ಆಗಮಿಸಿದ್ದ ಗಣ್ಯರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಮತ್ತು ಮನೊರಂಜನಾ ಕಾರ್ಯಕ್ರಮ ನಡೆದವು.ಸಂಸ್ಥೆಯ ಕಾರ್ಯದರ್ಶಿ ಸವಿತಾ ಗೊಲ್ಲರ, ಪಪಂ ಮಾಜಿ ಸದಸ್ಯ ಸನಾವುಲ್ಲಾ ಮಕಾಂದಾರ,ಇಂದುಧರ ಹಳಕಟ್ಟಿ, ಶುಭಾಕರ ಹಂಪಾಳಿ, ಮಂಜುನಾಥ ಕಾಂಬಳೆ, ಜ್ಯೋತಿ ಹೊಂಡದ, ಐಟಿಐ ಕಾಲೇಜಿನ ಪ್ರಾಚಾರ್ಯ ಧರ್ಮರಾಜ ಚಿಂದಿ, ಶಾಲೆಯ ಮುಖ್ಯಶಿಕ್ಷಕ ಮಂಜುನಾಥ ಬಡಿಗೇರ, ಪ್ರಶಾಂತ ತಿರಕಪ್ಪನವರ, ಪ್ರವೀಣ ಮುಗಳಿಹಳ್ಳಿ, ಸತೀಶ ತಂಬಾಕದ, ಸಂತೋಷ ಗೋಸ್ವಾಮಿ ಹಾಗೂ ಶಾಲಾ ಸಿಬ್ಬಂದಿಯವರು, ಸಾರ್ವಜನಿಕರು, ಮಕ್ಕಳ ಪಾಲಕರು, ವಿದ್ಯಾರ್ಥಿಗಳು ಇದ್ದರು.