ವಕೀಲರ ಮೇಲಿನ ಹಲ್ಲೆ ನಿಯಂತ್ರಿಸಿ

| Published : Apr 22 2025, 01:47 AM IST

ಸಾರಾಂಶ

ರಾಜ್ಯ ವಕೀಲರ ಪರಿಷತ್ತಿನ ಸದಸ್ಯ, ಹಿರಿಯ ವಕೀಲ ಸದಾಶಿವರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮಾನ್ವಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮಾನ್ವಿ: ರಾಜ್ಯ ವಕೀಲರ ಪರಿಷತ್ತಿನ ಸದಸ್ಯ, ಹಿರಿಯ ವಕೀಲ ಸದಾಶಿವರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಮಾನ್ವಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ತಹಸೀಲ್ದಾರ್ ಕಚೇರಿವರೆಗೆ ಮೌನ ಪ್ರತಿಭಟನೆ ಮುಖಾಂತರ ಆಗಮಿಸಿದ ಸೇರಿದ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ-ಕಿರಿಯ ವಕೀಲರು ನಂತರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಿದರು. ಇತ್ತಿಚಿಗೆ ಹಿರಿಯ ವಕೀಲ ಸದಾಶಿವರೆಡ್ಡಿ ಬಳಿಗೆ ಬಂದ ಇಬ್ಬರು ವ್ಯಕ್ತಿಗಳು ಪ್ರಕರಣ ವಿಚಾರವಾಗಿ ಜಗಳವಾಡಿ ಹಲ್ಲೆ ನಡೆಸಿದ್ದು ಘಟನೆಯನ್ನು ತಾಲೂಕು ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಸರ್ಕಾರ ಆರೋಪಿತರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು, ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಗಳ ನಿಯಂತ್ರಣಕ್ಕೆ ಕ್ರಮ ಜರುಗಿಸಿ, ವಕೀಲರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಸಂಘದ ತಾಲೂಕಾಧ್ಯಕ್ಷ ರವಿಕುಮಾರ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚನ್ನಬಸವ ನಾಯಕ, ಈಶಪ್ಪ ಬೈಲಮರ್ಚೆಡ್,ಮಲ್ಲೇಶ ಮಾಚನೂರು,ಹಿರಿಯ ವಕೀಲರಾದ ಗುಮ್ಮ ಬಸವರಾಜ, ಬಿ.ಕೆ.ಅಮರೇಶಪ್ಪ, ಚನ್ನನಗೌಡ, ಮಿರ್ ಲಿಯಾಕತ್ ಅಲಿ,ವಿಶ್ವನಾಥ ಪಾಟೀಲ್,ರಾಜಾ ರಂಗನಾಥ ನಾಯಕ, ಧೂಮಣ್ಣನಾಯಕ, ವೆಂಕಟೇಶ ನಾಯಕ, ಮಲ್ಲಿಕಾರ್ಜುನ ಮೇಕಾ, ಮೌನೇಶ ರಾಠೋಡ್, ಶರಣಬಸವ ಹರವಿ, ಉಮೇಶ್ ಬೆಟ್ಟದೂರ,ಯಲ್ಲಪ್ಪ ಬದರದಿನ್ನಿ,ಶಶಿಕಾಂತಯ್ಯ ಸ್ವಾಮಿ, ಶ್ರೀನಿವಾಸ ನಂದಿಹಾಳ್, ಸುಭಾಸ್ ನಾಯಕ,ಚಂದ್ರಶೇಖರ ನಾಯ್ಕ್ ಇದ್ದರು.