ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚನೆಗೆ ಪರಿಶೀಲನೆ

| Published : Nov 13 2024, 12:45 AM IST

ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚನೆಗೆ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಟಿ. ಮೀಸಲಾತಿಯಲ್ಲಿ ಆದಿವಾಸಿಗಳಿಗೆ ಒಳ ಮೀಸಲಾತಿ ನೀಡಲು ಯಾವುದೇ ಅವಕಾಶ ಇಲ್ಲ,

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಲು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲೂಕಿನ ಕೆರೆ ಹಾಡಿಯಲ್ಲ ಪ. ಪಂಗಡಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂನಿಂದ ಆಯೋಜಿಸಿದ್ದ ಅರಣ್ಯವಾಸಿ ಸಮುದಾಯದ ಹಾಡಿಗಳಿಗೆ ಭೇಟಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎಸ್.ಟಿ. ಮೀಸಲಾತಿಯಲ್ಲಿ ಆದಿವಾಸಿಗಳಿಗೆ ಒಳ ಮೀಸಲಾತಿ ನೀಡಲು ಯಾವುದೇ ಅವಕಾಶ ಇಲ್ಲ, ಮುಂದಿನ ದಿನಗಳಲ್ಲಿ ಸಮಿತಿ ರಚಿಸಿ ಅಧ್ಯಯನ ನಡೆಸಿ ಒಳ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಲಾಗುವುದು ಎಂದರು.ವನ್ಯಜೀವಿಯ ಕಾನೂನನ್ನು ಅಧ್ಯಯನ ಮಾಡಿ ಆದಿವಾಸಿಗಳಿಗೆ ಯಾವ ರೀತಿಯ ಸೌಲಭ್ಯವನ್ನು ಒದಗಿಸಬಹುದು ಎಂಬುದರ ಬಗ್ಗೆ ವರದಿ ನೀಡಲು ಓರ್ವ ಉನ್ನತ ಅಧಿಕಾರಿ ನೇಮಿಸಲಾಗುವುದು ಎಂದರು.ಕುಡಿಯುವ ನೀರು ಮತ್ತು ವಾಸಿಸಲು ಮನೆ ನಿರ್ಮಿಸಲು ಯಾವುದೇ ತೊಂದರೆಯನ್ನು ಮಾಡಬಾರದು ಎಂದು ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.ಮಾಳದ ಹಾಡಿಯ ಸೋಮೆಶ್ ಮಾತನಾಡಿ, ಮೂರರಿಂದ ನಾಲ್ಕು ಎಕರೆಯಲ್ಲಿ ವ್ಯವಸಾಯ ಮಾಡುತ್ತಾ ಅನುಭವದಲ್ಲಿ ಇದ್ದೇವೆ, ಆದರೆ ನಮಗೆ ಒಂದು ಕುಂಟೆ, ಎರಡು ಕುಂಟೆ ಜಾಗವನ್ನು ಮಾತ್ರ ನೀಡಿದ್ದಾರೆ ಎಂದು ತಿಳಿಸಿದರು.ಈ ಬಗ್ಗೆ ವನ್ಯಜೀವಿ ಮಂಡಳಿಯ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.ಆದಿವಾಸಿ ಮುಖಂಡ, ಲ್ಯಾಂಪ್ಸ್ ಅಧ್ಯಕ್ಷ ಕಾಳ ಕಲ್ಕರ್ ಮಾತನಾಡಿ ''''''''ಪ್ರೊಯ ಅಸಾದಿ ಅವರ 34 ಶಿಫಾರಸ್ಸುಗಳ ವರದಿಯನ್ನು ಸಚಿವ ಸಂಪುಟ ನಡೆಸಿ ಅನುಷ್ಠಾನಗೊಳಿಸಬೇಕು, ರಾಜ್ಯದ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುವ 42 ತಾಲೂಕುಗಳಿಂದ 1,500 ಬುಡಕಟ್ಟು ಆದಿವಾಸಿ ವಾಸ ಸ್ಥಳಗಳಲ್ಲಿ 70 ಸಾವಿರಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ನೆಲಸಿವೆ, ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ, ಆರೋಗ್ಯ, ವಸತಿ ಮತ್ತು ಮೂಲ ಸೌಕರ್ಯಗಳು ಸರಿಯಾಗಿ ದೊರೆಯುತ್ತಿಲ್ಲ, ನಾವು ಸಾಗುವಳಿ ಹೊಂದಿರುವ ಭೂಮಿಗೆ ಪಕ್ಕಾ ಪೋಡು ಮಾಡಿಸಬೇಕು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗದ ಅಸಮಾನತೆಯ ಪ್ರಾತಿನಿಧ್ಯ ಇರುವುದರಿಂದ ರಾಜ್ಯದ ಬಜೆಟ್ ಅನುದಾನದ ಜೊತೆಗೆ ಮತ್ತು ಮುಖ್ಯಮಂತ್ರಿ ನಿಧಿಯಿಂದ ಆದಿವಾಸಿಗಳ ನೆಲಸಿರುವ ಹಾಡಿಯನ್ನು ಮಾದರಿ ಹಾಡಿಯನ್ನಾಗಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, 2020 ರಲ್ಲಿ ಎರಡು ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಹಣ ಬಿಡುಗಡೆಯಾಗಿತ್ತು, ಆದರೆ ಇಲ್ಲಿ ಅರಣ್ಯ ಇಲಾಖೆಯ ಕಾನೂನಿನ ತೊಡಕಿನಿಂದಾಗಿ ಅದು ವಾಪಸ್ಸಾಗಿದೆ, ಅಲ್ಲದೇ 16 ಅಂಗನವಾಡಿ ಮಂಜೂರಾದರೂ ಸಹ ಅರಣ್ಯ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದರು.ಆದಿವಾಸಿಗಳಿಗೆ ನಿಗಮ ಅವಶ್ಯಕತೆ ಇರುವುದರಿಂದ ಬುಡಕಟ್ಟು ಹೋರಾಟಗಾರ ಬಿರ್ಸಾಮುಂಡಾ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮನವಿ ಮಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಪ್ರಾದೇಶಿಕ ಆಯುಕ್ತ ರಮೇಶ್, ಜಿಪಂ ಸಿಇಒ ಗಾಯಿತ್ರಿ, ಡಿಎಚ್ಒ ಕುಮಾರಸ್ವಾಮಿ, ನಾಗರಹೊಳೆ ನಿರ್ದೇಶಕಿ ಪಿ.ಎಸ್. ಸೀಮಾ, ಆದಿವಾಸಿಗಳಾದ ಶಿವರಾಜು, ಸಂಜಯ್, ಕೃಷ್ಣಯ್ಯ, ನಾಗರಾಜು, ಶ್ರೀಧರ್, ಚಿಕ್ಕಬೊಮ್ಮ, ತಹಸೀಲ್ದಾರ್ ಶ್ರೀನಿವಾಸ್, ಟಿಎಚ್ಒ ರವಿಕುಮಾರ್, ಇಒ ಧರಣೇಶ್, ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ, ಗಿರಿಜನ ಅಭಿವೃದ್ಧಿ ಅಧಿಕಾರಿ ಮಹೇಶ್, ವಿಸ್ತರಣಾಧಿಕಾರಿ ನಾಗರಾಜು, ಕಬಿನಿ ಇ.ಇ ಚಂದ್ರಶೇಖರ್, ಎಇಇ ಗಣೇಶ್, ಎಇ ರಮೇಶ್ ಬಾಬು, ಸಹಾಯಕ ಕೃಷಿ ನಿರ್ದೇಶಕ ಜಯರಾಮ್, ಆರ್.ಎಫ್.ಒ.ಗಳಾದ ಮಧು, ಸಿದ್ದರಾಜು, ಪೂಜಾ, ರಶ್ಮಿ ಇದ್ದರು.