ಏಳಿಂಜೆ ಗ್ರಾಮದ ಮುತ್ತಯ್ಯ ಕೆರೆ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ಆರೋಪಿ ಅಲ್ಪೋನ್ಸ್‌ ಸಲ್ದಾನ (52) ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರು. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಮೂಲ್ಕಿ: ಮೂಲ್ಕಿ ತಾಲೂಕಿನ ಏಳಿಂಜೆ ಗ್ರಾಮದ ಮುತ್ತಯ್ಯ ಕೆರೆ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ಆರೋಪಿ ಅಲ್ಪೋನ್ಸ್‌ ಸಲ್ದಾನ (52) ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರು. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ನಿವಾಸಿಗಳಾದ ಆಲ್ಲೋನ್ಸ್ ಸಲ್ದಾನ ಮತ್ತು ನೆರೆಮನೆಯ ವಿನ್ನಿ ಯಾನೆ ವಿನ್ಸೆಂಟ್ ಡಿಸೋಜ ಮಧ್ಯೆ ವೈಮನಸ್ಸು ಇದ್ದು ವಿನ್ನಿಯ ಮನೆಯ ಜಾಗಕ್ಕೆ, ಮನೆಯ ಛಾವಣಿಗೆ ಆಲ್ಪೋನ್ಸ್‌ ರ ಜಾಗದಲ್ಲಿರುವ ಮರದ ಕೊಂಬೆಗಳು ಬೀಳುವ ಬಗ್ಗೆ ತಕರಾರು ಇತ್ತು. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವ ಸಲುವಾಗಿ 2020ರ ಏ.29ರಂದು ಅಲ್ಪೋನ್ಸ್‌ ಸಲ್ದಾನ ತನ್ನ ನೆರೆಮನೆಯ ವಿನ್ನಿ ಯಾನೆ ವಿನ್ಸೆಂಟ್ ಡಿ.ಸೋಜಾನನ್ನು ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯತಿಕೆ ಮಾಡುವ ನೆಪದಲ್ಲಿ ತನ್ನ ಮನೆಗೆ ಕರೆಸಿದ್ದ.ಈ ಸಂದರ್ಭ ಮಾತಿಗೆ ಮಾತು ಬೆಳೆದು ಆಲೋನ್ಸ್ ಚೂರಿಯಿಂದ ವಿನ್ಸೆಂಟ್ ಡಿಸೋಜಗೆ ತಿವಿದಿದ್ದ. ವಿನ್ಸೆಂಟ್ ಡಿಸೋಜರ ಪತ್ನಿ ಹೆಲೆನ್ ಡಿಸೋಜ (43) ಪತಿಯ ರಕ್ಷಣೆಗೆ ಧಾವಿಸಿದಾಗ ಆಕೆಗೂ ಆಲ್ಲೋನ್ಸ್ ಸಲ್ದಾನ ಚೂರಿಯಿಂದ ತಿವಿದಿದ್ದ. ಈ ದಂಪತಿ ಮೃತಪಟ್ಟಿದ್ದರು.ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಮೂಲ್ಕಿ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ವಿಚಾರಣೆ ಬಳಿಕ ಪ್ರಸ್ತುತ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಜಗದೀಶ್ ಶಿಕ್ಷೆ ತೀರ್ಪು ವಿಧಿಸಿದ್ದಾರೆ.

ಸಾಕ್ಷಿ ವಿಚಾರಣೆ ಸಮಯ ಸರ್ಕಾರಿ ಅಭಿಯೋಜಕ ಜುಡಿತ್ ಓಲ್ಲಾ ಮಾರ್ಗರೇಟ್ ವಾದ ಮಂಡಿಸಿದ್ದರು.