ಸಾರಾಂಶ
ಲೋಕಸಭಾ ಚುನಾವಣೆ ನಿಮಿತ್ತವಾಗಿ ಮತದಾರರಿಗೆ ಹಂಚಲು ಸುಮಾರು 4ಲಕ್ಷ ರು.ಮೌಲ್ಯದ ಕುಕ್ಕರ್ ಗಳನ್ನು ಕ್ಯಾಂಟರ್ ಲಾರಿಯಲ್ಲಿ ಸಾಗಿಸುತ್ತಿದ್ದಾಗ ನೆಲಮಂಗಲದ ಜಾಸ್‌ಟೋಲ್ ಬಳಿಯ ಚೆಕ್‌ಪೋಸ್ಟ್ನಲ್ಲಿ ವಶಕ್ಕೆ ಪಡೆದಿರುವುದಾಗಿ ಪೋಲೀಸರು ತಿಳಿಸಿದ್ದಾರೆ.
ನೆಲಮಂಗಲ: ಲೋಕಸಭಾ ಚುನಾವಣೆ ನಿಮಿತ್ತವಾಗಿ ಮತದಾರರಿಗೆ ಹಂಚಲು ಸುಮಾರು 4ಲಕ್ಷ ರು.ಮೌಲ್ಯದ ಕುಕ್ಕರ್ ಗಳನ್ನು ಕ್ಯಾಂಟರ್ ಲಾರಿಯಲ್ಲಿ ಸಾಗಿಸುತ್ತಿದ್ದಾಗ ನೆಲಮಂಗಲದ ಜಾಸ್‌ಟೋಲ್ ಬಳಿಯ ಚೆಕ್‌ಪೋಸ್ಟ್ನಲ್ಲಿ ವಶಕ್ಕೆ ಪಡೆದಿರುವುದಾಗಿ ಪೋಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಕ್ಯಾಂಟರ್ ಲಾರಿಯಲ್ಲಿ ಕುಕ್ಕರ್‌ಗಳನ್ನು ಸಾಗಿಸುತ್ತಿದ್ದರೆನ್ನಲಾದ ಖಚಿತ ಮಾಹಿತಿ ಮೇರೆಗೆ ಲಾರಿಯನ್ನು ತಡೆದು ಪರಿಶೀಲಿಸಿದಾಗ ಸುಮಾರು 4ಲಕ್ಷ ರು. ಮೌಲ್ಯದ 300ಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚೆಕ್ ಪೋಸ್ಟ್ನಲ್ಲಿರುವ ಎಸ್‌ಎಸ್‌ಟಿ ತಂಡದ ಮಂಜುನಾಥ್ ತಿಳಿಸಿದ್ದಾರೆ. ಈ ಕುರಿತು ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಲಾರಿ ಚಾಲಕ ಈರಣ್ಣ ಎಂಬಾತನನ್ನು ವಶಕ್ಕೆ ಪಡೆದಿರುವ ಪೋಲೀಸರು, ತನಿಖೆಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.